Bhaktigeete
Singer: Dr. Balamuralikrishna
Song link: Click Here
Sundara manohara, tampina dhara,
Sakala paapahara kumara dhara ||
Mangalamaya swara sangeeta dhara,
Kangala seleyuva cheluvina dhara,
Sambana kushtava neegida dhara,
Kukke subramanya kumara dhara ||
Raviya varadinda udisida dhara,
Vasukiya nova harisida dhara,
Ella narakagala kaleyuva dhara,
Kukke subramanya kumara dhara ||
Jnanavahiniyodane haridiha dhara,
Betaalana shapava kalediha dhara,
Bhaktara abheshtava siddipa teera,
Kukke subramanya kumara dhara ||
ಭಕ್ತಿಗೀತೆ
ಸುಂದರ ಮನೋಹರ, ತಂಪಿನ ಧಾರಾ,
ಸಕಲ ಪಾಪಹರ ಕುಮಾರ ಧಾರಾ ।।ಪ।।
ಮಂಗಳಮಯ ಸ್ವರ ಸಂಗೀತ ಧಾರಾ,
ಕಂಗಳ ಸೆಳೆಯುವ ಚೆಲುವಿನ ಧಾರಾ,
ಸಾಂಬನ ಕುಷ್ಠವ ನೀಗಿದ ಧಾರಾ,
ಕುಕ್ಕೆ ಸುಬ್ರಮಣ್ಯ ಕುಮಾರ ಧಾರಾ ।।೧।।
ರವಿಯ ವರದಿಂದ ಉದಿಸಿದ ಧಾರಾ,
ವಾಸುಕಿಯ ನೋವ ಹರಿಸಿದ ಧಾರಾ,
ಎಲ್ಲ ನರಕಗಳ ಕಳೆಯುವ ಧಾರಾ,
ಕುಕ್ಕೆ ಸುಬ್ರಮಣ್ಯ ಕುಮಾರ ಧಾರಾ ।।೨।।
ಜ್ಞಾನ ವಾಹಿನಿಯೊಡನೆ ಹರಿದಿಹ ಧಾರಾ,
ಬೇತಾಳನ ಶಾಪವ ಕಳೆದಿಹ ಧಾರಾ,
ಭಕ್ತರ ಅಭೀಷ್ಟವ ಸಿದ್ದಿಪ ತೀರ,
ಕುಕ್ಕೆ ಸುಬ್ರಮಣ್ಯ ಕುಮಾರ ಧಾರಾ ।।೩।।

No comments:
Post a Comment