Tuesday, February 17, 2026

Baadi Hoda Balliyinda (ಬಾಡಿ ಹೋದ ಬಳ್ಳಿಯಿಂದ)

Movie: Eradu Kanasu (1984)

Singer: P B Srinivas

Song link: Click Here


Baadi hoda balliyinda, hoovu aralaballade,

Tanti harida veeneyinda, naada hariyaballade,

Manasu kanda aaseyella, kanasinante karagitalla,

Ullasa innellide ..||


Hanateyalli deepa uriye, belakinalli baaluve,

Dhareye hatti uriyuvaaga, Badukalelli oduve ||


Neerinalli doni muluge, eeji dadava seruve,

Sulige doni silukidaaga, baduki baralu sadhyave,

Baala pagade aatadalli, bariya kaayi ellaru,

Nadesuvaata bere avana, icche yaaru ballaru ||


ಚಿತ್ರಗೀತೆ 


ಬಾಡಿ ಹೋದ ಬಳ್ಳಿಯಿಂದ, ಹೂವು ಅರಳಬಲ್ಲದೆ,

ತಂತಿ ಹರಿದ ವೀಣೆಯಿಂದ, ನಾದ ಹರಿಯಬಲ್ಲದೆ,

ಮನಸು ಕಂಡ ಆಸೆಯೆಲ್ಲ, ಕನಸಿನಂತೆ ಕರಗಿತಲ್ಲ,

ಉಲ್ಲಾಸ ಇನ್ನೆಲ್ಲಿದೆ ..

।।ಪ।।


ಹಣತೆಯಲ್ಲಿ ದೀಪ ಉರಿಯೆ, ಬೆಳಕಿನಲ್ಲಿ ಬಾಳುವೆ,

ಧರೆಯೆ  ಹತ್ತಿ ಉರಿಯುವಾಗ, ಬದುಕಲೆಲ್ಲಿ ಓಡುವೆ ।।೧।।


ನೀರಿನಲ್ಲಿ ದೋಣಿ ಮುಳುಗೆ, ಈಜಿ ದಡವ ಸೇರುವೆ,

ಸುಳಿಗೆ ದೋಣಿ ಸಿಲುಕಿದಾಗ, ಬದುಕಿ ಬರಲು ಸಾಧ್ಯವೇ,

ಬಾಳ ಪಗಡೆ ಆಟದಲ್ಲಿ, ಬರಿಯ ಕಾಯಿ ಎಲ್ಲರೂ,

ನಡೆಸುವಾತ ಬೇರೆ ಅವನ, ಇಚ್ಛೆ ಯಾರು ಬಲ್ಲರು ।।೨।।

                               

No comments:

Post a Comment