Sunday, February 22, 2026

Sharade Daye Toride (ಶಾರದೆ ದಯೆ ತೋರಿದೆ)

Movie: Malaya Maaruta (1986)

Singer: SPB

Song link: Click Here


Sharade daye toride,

Ninna karuneya kadalalli muttade, na muttade ||


Haala belakinali biliya kamaladali, biliya vastravanu dharisi,

Biliya kusumagala maale koralalire, belli veeneyanu nudisi,

Ninna kangala belakanu, nanna kangalali tumbide,

Elu maguve, melelu endu, hosa baala tandeyamma ||


Andhakaradali nondu balalutire, bandu kaiya hidide,

Kanda ekaluve munde daari ide, endu neene nudide,

Tande tayiya punyavo, nanendo madida pujeyo,

Indu ninna, krupeyinda naanu, aananda padedenamma ||


ಚಿತ್ರಗೀತೆ 


ಶಾರದೆ ದಯೆ ತೋರಿದೆ,

ನಿನ್ನ ಕರುಣೆಯ ಕಡಲಲ್ಲಿ ಮುತ್ತಾದೆ, ನಾ ಮುತ್ತಾದೆ ।।ಪ।।


ಹಾಲ ಬೆಳಕಿನಲಿ ಬಿಳಿಯ ಕಮಲದಲಿ, ಬಿಳಿಯ ವಸ್ತ್ರವನು ಧರಿಸಿ,

ಬಿಳಿಯ ಕುಸುಮಗಳ ಮಾಲೆ ಕೊರಳಲಿರೆ, ಬೆಳ್ಳಿ ವೀಣೆಯನು ನುಡಿಸಿ,

ನಿನ್ನ ಕಂಗಳ ಬೆಳಕನು, ನನ್ನ ಕಂಗಳಲಿ ತುಂಬಿದೆ,

ಏಳು ಮಗುವೆ, ಮೇಲೇಳು ಎಂದು, ಹೊಸ ಬಾಳ ತಂದೆಯಮ್ಮಾ ।।೧।।


ಅಂಧಕಾರದಲಿ ನೊಂದು ಬಳಲುತಿರೆ, ಬಂದು ಕೈಯ ಹಿಡಿದೆ,

ಕಂದ ಏಕಳುವೆ ಮುಂದೆ ದಾರಿ ಇದೆ, ಎಂದು ನೀನೇ ನುಡಿದೆ,

ತಂದೆ ತಾಯಿಯ ಪುಣ್ಯವೋ, ನಾನೆಂದೋ ಮಾಡಿದ ಪೂಜೆಯೋ,

ಇಂದು ನಿನ್ನ, ಕೃಪೆಯಿಂದ ನಾನು, ಆನಂದ ಪಡೆದೆನಮ್ಮಾ 

।।೨।।

                       

No comments:

Post a Comment