Saturday, January 31, 2026

Srinivasana Nage Modi Seleyalu (ಶ್ರೀನಿವಾಸನ ನಗೆ ಮೋಡಿ ಸೆಳೆಯಲು)

Bhaktigeete

Singer: Dr, Rajkumar

Song link: Click Here


Srinivasana nage modi seleyalu, bande ododi,

Truptiyagadu nodee nodee, hege haadali kondaadi ||


Bannisi haadalu aase, bannanegetukadu bhashe,

Bhakti bhavada bandha ee anubandha balu chenda ||


Venkataramana sankata harana, ennuva nudiye balu chenna,

Satyada anubhava saakara, tandide aananda kanneera ||


Srihari aadanu srinivasa, sankata harisuva girivasa,

Deena dalitara sahavasa, koruva namma sri venkatesha ||


ಭಕ್ತಿಗೀತೆ 


ಶ್ರೀನಿವಾಸನ ನಗೆ ಮೋಡಿ ಸೆಳೆಯಲು, ಬಂದೇ ಓಡೋಡಿ,

ತೃಪ್ತಿಯಾಗದು ನೋಡೀ ನೋಡೀ, ಹೇಗೆ ಹಾಡಲಿ ಕೊಂಡಾಡಿ 

।।ಪ।।


ಬಣ್ಣಿಸಿ ಹಾಡಲು ಆಸೆ, ಬಣ್ಣನೆಗೆಟುಕದು ಭಾಷೆ,

ಭಕ್ತಿ ಭಾವದಾ ಬಂಧ ಈ ಅನುಬಂಧ ಬಲು ಚೆಂದ

 ।।೧।।


ವೆಂಕಟರಮಣ ಸಂಕಟ ಹರಣ, ಎನ್ನುವ ನುಡಿಯೆ ಬಲು ಚೆನ್ನ,

ಸತ್ಯದ ಅನುಭವ ಸಾಕಾರ, ತಂದಿದೆ ಆನಂದ ಕಣ್ಣೀರ

 ।।೨।।


ಶ್ರೀಹರಿ ಆದನು ಶ್ರೀನಿವಾಸ, ಸಂಕಟ ಹರಿಸುವ ಗಿರಿವಾಸ,

ದೀನ ದಲಿತರ ಸಹವಾಸ, ಕೋರುವ ನಮ್ಮ ಶ್ರೀ ವೆಂಕಟೇಶ 

।।೩।।

                           

No comments:

Post a Comment