Wednesday, January 7, 2026

Maamaravello Kogileyello (ಮಾಮರವೆಲ್ಲೋ, ಕೋಗಿಲೆಯೆಲ್ಲೋ)

Movie: Devara Gudi (1975)

Singer: SPB

Song link: Click Here


Maamaravello kogileyello,

Eni sneha sambandha, elliyado ee anubandha ||


Suryanu ello, tavare ello, kaanalu katara, karanavenu,

Chandiranello, naidile ello, nodalu araluva sadagaravenu,

Elle irali, hege irali, kaanuva aase, etako eno ||


Hunnimeyalli, tannane gaali, beesalu ninna nenapaguvudu,

Dina ratriyali, ekantadali, eko eno novaguvudu,

Bayakeyu tumbi, aaseya dumbi, edeyanu koredu, kaaduvudeno ||


ಚಿತ್ರಗೀತೆ 


ಮಾಮರವೆಲ್ಲೋ, ಕೋಗಿಲೆಯೆಲ್ಲೋ,

ಏನೀ ಸ್ನೇಹ ಸಂಬಂಧ, ಎಲ್ಲಿಯದೋ ಈ ಅನುಬಂಧ ।।ಪ।।


ಸೂರ್ಯನು ಎಲ್ಲೋ, ತಾವರೆ ಎಲ್ಲೋ, ಕಾಣಲು ಕಾತರ, ಕಾರಣವೇನು 

ಚಂದಿರನೆಲ್ಲೋ, ನೈದಿಲೆ ಎಲ್ಲೋ, ನೋಡಲು ಅರಳುವ, ಸಡಗರವೇನು 

ಎಲ್ಲೇ ಇರಲಿ, ಹೇಗೆ ಇರಲಿ, ಕಾಣುವ ಆಸೆ, ಏತಕೋ ಏನೋ 

।।೧।।


ಹುಣ್ಣಿಮೆಯಲ್ಲಿ, ತಣ್ಣನೆ ಗಾಳಿ, ಬೀಸಲು ನಿನ್ನ, ನೆನಪಾಗುವುದು,

ದಿನ ರಾತ್ರಿಯಲಿ, ಏಕಾಂತದಲಿ, ಏಕೋ ಏನೋ, ನೋವಾಗುವುದು,

ಬಯಕೆಯು ತುಂಬಿ, ಆಸೆಯ ದುಂಬಿ, ಎದೆಯನು ಕೊರೆದು, ಕಾಡುವುದೇನೋ ।।೨।।

                               

No comments:

Post a Comment