Bhaktigeete
Singer: Dr. Rajkumar
Song link: Click Here
Gaaliyalli gaana banditu, amrutavanne tanditu,
Venkatesha emba naama hrudayavanne midiyitu,
Hinde endu kaanadantha divya vaibhava sanditu,
Divya vaibhava sanditu ||
Sudheya saviyada nararigella, hariyu needida varavanu,
Devagange illi hariyitu, paapanashani kuditu,
Gaaligopura illi haaditu, hariya hirimeya saaritu ||
Dhareya tirupati nakadalli, nitya satyada darushana,
Paada renu dosha neegitu, dharma rupana toritu,
Karmalepana maayavayitu, janma dhanyate honditu ||
ಭಕ್ತಿಗೀತೆ
ಗಾಳಿಯಲ್ಲಿ ಗಾನ ಬಂದಿತು, ಅಮೃತವನ್ನೇ ತಂದಿತು,
ವೆಂಕಟೇಶ ಎಂಬ ನಾಮ, ಹೃದಯವನ್ನೇ ಮಿಡಿಯಿತು,
ಹಿಂದೆ ಎಂದೂ ಕಾಣದಂಥ, ದಿವ್ಯ ವೈಭವ ಸಂದಿತು,
ದಿವ್ಯ ವೈಭವ ಸಂದಿತು ।।ಪ ।।
ಸುಧೆಯ ಸವಿಯದ ನರರಿಗೆಲ್ಲ, ಹರಿಯು ನೀಡಿದ ವರವನು,
ದೇವಗಂಗೆ ಇಲ್ಲಿ ಹರಿಯಿತು, ಪಾಪನಾಶನಿ ಕೂಡಿತು,
ಗಾಳಿಗೋಪುರ ಇಲ್ಲಿ ಹಾಡಿತು, ಹರಿಯ ಹಿರಿಮೆಯ ಸಾರಿತು
।।೧।।
ಧರೆಯ ತಿರುಪತಿ ನಾಕದಲ್ಲಿ, ನಿತ್ಯ ಸತ್ಯದ ದರುಶನ,
ಪಾದ ರೇಣು ದೋಷ ನೀಗಿತು, ಧರ್ಮ ರೂಪನ ತೋರಿತು,
ಕರ್ಮಲೇಪನ ಮಾಯವಾಯಿತು, ಜನ್ಮ ಧನ್ಯತೆ ಹೊಂದಿತು
।।೨।।

No comments:
Post a Comment