Bhavageete
Sahitya: N S Lakshminarayana Bhat
Song link: Click Here
Saagu jevave bagi nillade
Dari Samedide mundake
Neravo bari konko kalada
Nyaya vastuve vadake?
Kalla hadiyo malle totavo
Chalane sakshiyu badukige
Kala hasida neela pathadali
Nale kadide kutake ||saagu||
Nariyo nayiyo naduve uulalu
Becchabahude shakunake?
Yava vyaghravo kugi haralu
Koviyillave kadanake? ||saagu||
Nasuku haridide mugila pattala
Belliyanchanu tottide
Musuku tegedide sristi bannada
Belakinali mukha toledide ||saagu||
ಭಾವಗೀತೆ
ಸಾಗು ಜೀವವೆ ಬಾಗಿ ನಿಲ್ಲದೆ
ದಾರಿ ಸಮೆದಿದೆ ಮುಂದಕೆ
ನೇರವೋ ಬರಿ ಕೊಂಕೊ ಕಾಲದ
ನ್ಯಾಯ ವಸ್ತುವೆ ವಾದಕೆ ?
ಕಲ್ಲ ಹಾದಿಯೊ ಮಲ್ಲೆ ತೋಟವೊ
ಚಲನೆ ಸಾಕ್ಷಿಯು ಬದುಕಿಗೆ
ಕಾಲ ಹಾಸಿದ ನೀಲ ಪಥದಲಿ
ನಾಳೆ ಕಾದಿದೆ ಕೂಟಕೆ ।।೧।।
ನರಿಯೊ ನಾಯಿಯೊ ನಡುವೆ ಊಳಲು
ಬಚ್ಚಬಹುದೆ ಶಕುನಕೆ ?
ಯಾವ ವ್ಯಾಘ್ರವೊ ಕೂಗಿ ಹಾರಲು
ಕೋವಿಯಿಲ್ಲವೆ ಕದನಕೆ ? ।।೨।।
ನಸುಕು ಹರಿದಿದೆ ಮುಗಿಲ ಪತ್ತಲ
ಬೆಳ್ಳಿಯಂಚನು ತೊಟ್ಟಿದೆ
ಮುಸುಕು ತೆಗೆದಿದೆ ಸೃಷ್ಟಿ ಬಣ್ಣದ
ಬೆಳಕಿನಲಿ ಮುಖ ತೊಳೆದಿದೆ ।।೩।।

No comments:
Post a Comment