Padya
Janapada
Kusu idda manege beesanike yataka
Kusu kandayya ola horaga | aadidara
Beesanige gali sulidava ||
Aadi ba nana kanda angala toledena
Tengina kayi tilineera | takkondu
Bangara mari toledena ||
Aluva kandana tutiyu havalada kudihanga
Kudihubbu bevinesalanga | kannota
Shivana kaiyalagu holedanga ||
Kandana kirikiri indenu helali
Bindeege halu surivanda | chanjeeya
Chandramana tandu nilisenda ||
ಪದ್ಯ
ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ
ಕೂಸು ಕಂದಯ್ಯ ಒಳ ಹೊರಗ । ಆಡಿದರ
ಬೀಸಣಿಗೆ ಗಾಳಿ ಸುಳಿದಾವ ।।
ಆಡಿ ಬಾ ನನ ಕಂದ ಅಂಗಾಲ ತೊಳೆದೇನ
ತೆಂಗಿನ ಕಾಯಿ ತಿಳಿನೀರ । ತಕ್ಕೊಂಡು
ಬಂಗಾರ ಮಾರಿ ತೊಳೆದೇನ ।।
ಅಳುವ ಕಂದನ ತುಟಿಯು ಹವಳದ ಕುಡಿಹಂಗ
ಕುಡಿಹುಬ್ಬು ಬೇವಿನೆಸಳ೦ಗ । ಕಣ್ಣೋಟ
ಶಿವನ ಕೈಯಲಗು ಹೊಳೆದಂಗ ।।
ಕಂದನ ಕಿರಿಕಿರಿ ಇಂದೇನು ಹೇಳಲಿ
ಬಿಂದೀಗೆ ಹಾಲು ಸುರಿವಂದ । ಚಂಜೀಯ
ಚಂದ್ರಮನ ತಂದು ನಿಲಿಸೆಂದಾ ।।

No comments:
Post a Comment