Thursday, April 7, 2022

Neeneko Ninna Hangeko (ನೀನೇಕೋ ನಿನ್ನ ಹಂಗೇಕೋ)


Bhaktigeete

Purandara Dasara Keerthanegalu

Song link: Click Here




Raga: Kaanada

Tala: Aditala


Neeneko ninna hangeko

Ninna namada balavondiddare sako

Neeneko ninna hangeko 


Kari makaripe sikki moreyidutiruvaga  

Adimoolavemba namave kayto ||neeneko||


Pralladana pita bhadisutiruvaga

Narahariyamba namave kayto ||neeneko||


Baleya sabheyalli seereya selevaga

Krishna krishna embo namave kayto ||neeneko||


Yamana dootaru bandu ajamila nelevaga

Narayananembo  namave kayto ||neeneko||


Aamara Eemara dhaynisutiruvaga

Rama rama emba namave kayto ||nenyako||


Hasule aa druvaraya adavige popaga

Vasudevanemboa namave kayto ||neeneko||


Ninna namake sari kanenu jagadolu

Ganna mahima siri purandara vittala ||neeneko||


ಭಕ್ತಿಗೀತೆ 


ನೀನೇಕೋ ನಿನ್ನ ಹಂಗೇಕೋ 

ನಿನ್ನ ನಾಮದ ಬಲವೊಂದಿದ್ದರೆ ಸಾಕೋ 

ನೀನೇಕೋ ನಿನ್ನ ಹಂಗೇಕೋ 


ಕರಿ ಮಕರಿಪೆ ಸಿಕ್ಕಿ ಮೊರೆಯಿಡುತಿರುವಾಗ 

ಆದಿಮೂಲವೆಂಬ ನಾಮವೆ ಕಾಯ್ತೋ ||೧।।


ಪ್ರಲ್ಲಾದನ  ಪಿತ ಬಾಧಿಸುತ್ತಿರುವಾಗ 

ನರಹರಿಯಂಬ ನಾಮವೆ ಕಾಯ್ತೋ ।।೨।।


ಬಾಲೆಯ ಸಭೆಯಲ್ಲಿ ಸೀರೆಯ ಸೆಳೆವಾಗ 

ಕೃಷ್ಣ ಕೃಷ್ಣ ಎಂಬ ನಾಮವೆ ಕಾಯ್ತೋ ।।೩।।


ಯಮನ ದೂತರು ಬಂದು ಅಜಮಿಳನೆಳೆವಾಗ 

ನಾರಾಯಣನೆಂಬ ನಾಮವೆ ಕಾಯ್ತೋ ।।೪।।


ಆಮರ ಈಮರ ಧ್ಯಾನಿಸುತಿರುವಾಗ 

ರಾಮ ರಾಮ ಎಂಬ ನಾಮವೆ ಕಾಯ್ತೋ ।।೫।।


ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ 

ವಾಸುದೇವನೆಂಬ ನಾಮವೆ ಕಾಯ್ತೋ ।।೬।।


ನಿನ್ನ ನಾಮಕೆ ಸರಿಕಾಣೆನು ಜಗದೊಳು 

ಘನಮಹಿಮ ಸಿರಿ ಪುರಂದರ ವಿಠ್ಠಲ ।।೭।। 





No comments:

Post a Comment