- Movie : Mannina doni (1992)
- Singer: S Janaki
- Song link: Click Here
Kogileye kshemave
Kasturiye soukyave
Kogileye kshemave
Kasturiye soukyave
Naidileye nidireye
Malligeye mampare
Eliri eliri mele
Nesara bandanu mele nodi
Mangina neeralli muddu moreya
Toledu bandu haadi..||
Kannanadalli beesuva galige endu
Aalasya bandide heli ?
Bettagalalli oduva nadiyu endu
Danidu nintide keli ?
Ragagalante mooduva meghagalige
Besara banditte keli ?
Veerara kaili baggada malebillu
Barenu embude heli ?
Bhuvana tirugide oo....o
Gagana chaliside
Kavana kadedide oo....o
Baduku bareside
Eliri eliri mele
Nesara bandanu mele nodi
Mangina neeralli muddu moreya
Toledu bandu haadi...||
Janara gumpu kampina totakke haari
Sompina jenannu tandavu
Pundara gumpu huliya topige nuggi
Hotteya biriye tindavu
Tappalinalli rangina acheya hoida
Patanga padeya payana
Kecchalinalli govina kusina dodda
Kannina mecchina mouna
Kamala kuliteya
O..oo alile aviteya
Navile ninteya
O..oo manase mareteya
Eliri eliri mele
Nesara bandanu mele nodi
Mangina neeralli muddu moreya
Toledu bandu haadi...||
ಚಿತ್ರಗೀತೆ
ಕೋಗಿಲೆಯೆ ಕ್ಷೇಮವೆ
ಕಸ್ತೂರಿಯೆ ಸೌಖ್ಯವೆ
ಕೋಗಿಲೆಯೆ ಕ್ಷೇಮವೆ
ಕಸ್ತೂರಿಯೆ ಸೌಖ್ಯವೆ
ನೈದಿಲೆಯೆ ನಿದಿರೆಯೆ
ಮಲ್ಲಿಗೆಯೆ ಮಂಪರೆ
ಏಳಿರಿ ಏಳಿರಿ ಮೇಲೆ
ನೇಸರ ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು ಮೋರೆಯ
ತೊಳೆದು ಬಂದು ಹಾಡಿ .. ।।ಕೋಗಿಲೆಯೆ ।।
ಕಾನನದಲ್ಲಿ ಬೀಸುವ ಗಾಳಿಗೆ ಎಂದು
ಆಲಸ್ಯ ಬಂದಿದೆ ಹೇಳಿ
ಬೆಟ್ಟಗಳಲ್ಲಿ ಓಡುವ ನದಿಯು ಎಂದು
ದಣಿದು ನಿಂತಿದೆ ಕೇಳಿ ?
ರಾಗಗಳಂತೆ ಮೂಡುವ ಮೇಘಗಳಿಗೆ
ಬೇಸರ ಬಂದೀತೆ ಕೇಳಿ ?
ವೀರರ ಕೈಲಿ ಬಗ್ಗದ ಮಳೆಯ ಬಿಲ್ಲು
ಬರೆನು ಎಂಬುದೆ ಹೇಳಿ
ಭುವನ ತಿರುಗಿದೆ ಓ ಓ.. ಓ
ಗಗನ ಚಲಿಸಿದೆ
ಕವನ ಕಡೆದಿದೆ ಓ ಓ .. ಓ
ಬದುಕು ಬರೆಸಿದೆ
ಏಳಿರಿ ಏಳಿರಿ ಮೇಲೆ
ನೇಸರ ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು ಮೋರೆಯ
ತೊಳೆದು ಬಂದು ಹಾಡಿ .. ।।ಕೋಗಿಲೆಯೆ ।।
ಜಾಣರ ಗುಂಪು ಕಂಪಿನ ತೋಟಕ್ಕೆ ಹಾರಿ
ಸೊಂಪಿನ ಜೆನ್ನನ್ನು ತಂದವು
ಪುಂಡರ ಗುಂಪು ಹುಳಿಯ ತೋಪಿಗೆ ನುಗ್ಗಿ
ಹೊಟ್ಟೆಯ ಬಿರಿಯೆ ತಿಂದವು
ತಪ್ಪಲಿನಲ್ಲಿ ರಂಗಿನ ಅಚ್ಚೆಯ ಹೊಯ್ದ
ಪತಂಗ ಪಡೆಯ ಪಯಣ
ಕೆಚ್ಚಲಿನಲ್ಲಿ ಗೋವಿನ ಕೂಸಿನ ದೊಡ್ಡ
ಕಣ್ಣಿನ ಮೆಚ್ಚಿನ ಮೌನ
ಕಮಲ ಕುಳಿತೆಯಾ
ಓಓ ಓ ಅಳಿಲೇ ಅವಿತೆಯಾ
ನವಿಲೇ ನಿಂತೆಯಾ
ಓ ಓ ಓ ಮನಸೇ ಮರೆತೆಯಾ
ಏಳಿರಿ ಏಳಿರಿ ಮೇಲೆ
ನೇಸರ ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು ಮೋರೆಯ
ತೊಳೆದು ಬಂದು ಹಾಡಿ .. ।।ಕೋಗಿಲೆಯೆ ।।

No comments:
Post a Comment