Sahitya : Dr H S Venktesh Murthy
Song link: Click Here
Lokada kannige radheyu kooda
Ellarante ondu hennu
Nanagu ake krishna toruva
Preetiyu needida kannu
Preetiyu needida kannu
Tingala ratri toreya sameepa
Uridare yavudo deepa
Yaro mohana yava radhego
Padutiruvanu paritapa
Padutiruvanu paritapa ||
Nanu nannadu nannavarennuva
Halavu todakugala meeri
Dhavisi seeralu brindavanava
Radhe tooruvalu daari
Radhe tooruvalu daari ||
Maha pravaha, maha pravaha
Maha pravaha, maha pravaha
Tadeyuvarilla..
Patravirada tore preeti (2)
Toredaru tanna toreyadu priyana
Radheya preetiya reeti
Idu radheya preetiya reeti ||
ಭಾವಗೀತೆ
ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು
ಪ್ರೀತಿಯು ನೀಡಿದ ಕಣ್ಣು ।।ಪ ।।
ತಿಂಗಳ ರಾತ್ರಿ ತೊರೆಯ ಸಮೀಪ
ಉರಿದರೆ ಯಾವುದೊ ದೀಪ
ಯಾರೋ ಮೋಹನ ಯಾವ ರಾಧೆಗೋ
ಪಡುತಿರುವನು ಪರಿತಾಪ ।।ಲೋಕದ ।।
ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ
ಧಾವಿಸಿ ಸೇರಲು ಬೃಂದಾವನವ
ರಾಧೆ ತೋರುವಳು ದಾರಿ ।।ಲೋಕದ ।।
ಮಹಾ ಪ್ರವಾಹ , ಮಹಾ ಪ್ರವಾಹ
ಮಹಾ ಪ್ರವಾಹ , ಮಹಾ ಪ್ರವಾಹ
ತಡೆಯುವರಿಲ್ಲ
ಪಾತ್ರವಿರದ ತೊರೆ ಪ್ರೀತಿ (೨)
ತೊರೆದರು ತನ್ನ , ತೊರೆಯದು ಪ್ರಿಯನ
ರಾಧೆಯ ಪ್ರೀತಿಯ ರೀತಿ
ಇದು, ರಾಧೆಯ ಪ್ರೀತಿಯ ರೀತಿ ।।ಲೋಕದ ।।

No comments:
Post a Comment