Movie: Chaitrada premanjali (1992)
Singer: SPB, Chandrika Gururaj
Song link: Click HereChaitrada premanjaliya, suma suma suma
Gandhada parimalakinta, ghama ghama ghama
Suma ghama, sama ghama ||
Maliigeya malli cheluvinali, melluliya mella naguvinali
Sampigeya sompu kurulinadi, tampiduva shashiya vadanadali
Matanade mandhara, ninna hesare shringara
Kanakambari o neelambari, ninage nee sari
Sevantige soojimallige
Gidavagi, eleyagi, ninage na sari ||
Kannali neenu kamalavati, odalalli taale pushpavati
Bhayaveke anju malligeye, ba elu suttu malligeye
Parijata varavagu, suryakanthi belakagu
Madhu tumbida gulabi suma, ninage nee sama
Nashe eriso o rajani suma
Hoodani abhimani ninage na sama ||
ಚಿತ್ರಗೀತೆ
ಚೈತ್ರದ ಪ್ರೇಮಾಂಜಲಿಯ ಸುಮಾ ಸುಮಾ ಸುಮಾ
ಗಂಧದ ಪರಿಮಳಕಿಂತ ಘಮಾ ಘಮಾ ಘಮಾ
ಸುಮಾ ಘಮಾ, ಸಮಾ ಘಮಾ ।।ಪ।।
ಮಲ್ಲಿಗೆಯ ಮಳ್ಳಿ ಚೆಲುವಿನಲಿ,ಮೆಲ್ಲುಲಿಯ ಮೆಲ್ಲ ನಗುವಿನಲಿ
ಸಂಪಿಗೆಯ ಸೊಂಪು ಕುರುಳಿನಡಿ, ತಂಪಿಡುವ ಶಶಿಯ ವದನದಲಿ
ಮಾತನಾಡೆ ಮಂದಾರ, ನಿನ್ನ ಹೆಸರೆ ಶೃಂಗಾರ
ಕನಕಾಂಬರಿ, ಓ ನೀಲಾಂಬರಿ, ನಿನಗೆ ನೀ ಸರಿ
ಸೇವಂತಿಗೆ, ಸೂಜೀ ಮಲ್ಲಿಗೆ
ಗಿಡವಾಗಿ, ಎಲೆಯಾಗಿ, ನಿನಗೆ ನಾ ಸರಿ ।।೧।।
ಕಣ್ಣಲ್ಲಿ ನೀನು ಕಮಲವತಿ, ಒಡಲಲ್ಲಿ ತಾಳೆ ಪುಷ್ಪವತಿ
ಭಯವೇಕೆ ಅಂಜು ಮಲ್ಲಿಗೆಯೇ, ಬಾ ಏಳು ಸುತ್ತು ಮಲ್ಲಿಗೆಯೇ
ಪಾರಿಜಾತ ವಾರವಾಗು, ಸೂರ್ಯ ಕಾಂತಿ ಬೆಳಕಾಗು
ಮಧು ತುಂಬಿದಾ ಗುಲಾಬಿ ಸುಮಾ, ನಿನಗೆ ನೀ ಸಮ
ನಶೆ ಏರಿಸೋ ಓ ರಜನಿ ಸುಮಾ
ಹೂದಾನಿ ಅಭಿಮಾನಿ ನಿನಗೆ ನಾ ಸಮ ।।೨।।

No comments:
Post a Comment