Friday, February 6, 2026

Ati Madhura Anuraaga (ಅತಿ ಮಧುರ ಅನುರಾಗ)

Movie: School Master (1958)

Singers: A M Raja, Jamunarani

Song link: Click Here


Ati madhura anuraaga, ati madhura anuraaga,

Jeevana sandhya raaga, ati madhura anuraaga,

Samarasada vaibhoga, sanga samaagama raaga,

 Ati madhura anuraaga, jeevana sandhya raaga ||


Neeliya baanina belmugile, nalivina natyake kareyole,

Jenina honale ukkuva vele, olave sukhada uyyale ||


Youvvana baalina hombale, preetiya badada hoo male,

Nalmeya needo premada leele, olave sukhada uyyale ||


ಚಿತ್ರಗೀತೆ 


ಅತಿ ಮಧುರ ಅನುರಾಗ, ಅತಿ ಮಧುರ ಅನುರಾಗ,

ಜೀವನ ಸಂಧ್ಯಾರಾಗ, ಅತಿ ಮಧುರ ಅನುರಾಗ,

ಸಮರಸದ ವೈಭೋಗ, ಸಂಗ ಸಮಾಗಮ ರಾಗ,

ಅತಿ ಮಧುರ ಅನುರಾಗ, ಜೀವನ ಸಂಧ್ಯಾರಾಗ ।।ಪ।।


ನೀಲಿಯ ಬಾನಿನ ಬೆಲ್ಮುಗಿಲೆ, ನವಿಲಿನ ನಾಟ್ಯಕೆ ಕರೆಯೋಲೆ,

ಜೇನಿನ ಹೊನಲೆ ಉಕ್ಕುವ ವೇಳೆ, ಒಲವೆ ಸುಖದ ಉಯ್ಯಾಲೆ 

।।೧।।


ಯೌವ್ವನ ಬಾಳಿನ ಹೊಂಬಾಳೆ, ಪ್ರೀತಿಯ ಬಾಡದ ಪೂ ಮಾಲೆ,

ನಲ್ಮೆಯ ನೀಡೋ ಪ್ರೇಮದ ಲೀಲೆ, ಒಲವೇ ಸುಖದ ಉಯ್ಯಾಲೆ ।।೨।।

                                

Baala Bangara Neenu (ಬಾಳ ಬಂಗಾರ ನೀನು)

Movie: Bangarada Manushya (1972)

Singer: P Susheela

Song link: Click Here


Baala bangara neenu, haneya singara neenu,

Ninna kailado gombe nanayya, nanayya gombe nanayya,

Tano tandano tano (4), Nanayya gombe nanayya ||


Hagalella nenasi, irulella bayasi, balalideyo jeeva, kelenna cheluva,

Bedendu jaridu, nee dura hodaru, bidadante ninna, neralage iruve,

Tano tandano tano (4), Nanayya bombe nanayya ||


Nannedeye ninna, seremaneyu chenna, adarinada endu, bidugadeyu sigadu,

Nuraaru januma, nee taali bandaru, satiyagi ninna, jotheyalle baruve,

Tano tandano tano (4), Nanayya bombe nanayya ||


ಚಿತ್ರಗೀತೆ 


ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು,

ನಿನ್ನ ಕೈಲಾಡೊ ಬೊಂಬೆ ನಾನಯ್ಯ,

ನಾನಯ್ಯ ಬೊಂಬೆ ನಾನಯ್ಯ,

ತಾನೂ ತಂದಾನೊ ತಾನೂ (೪), ನಾನಯ್ಯ ಬೊಂಬೆ ನಾನಯ್ಯ

 ।।ಪ।।


ಹಗಲೆಲ್ಲ ನೆನಸಿ, ಇರುಳೆಲ್ಲ ಬಯಸಿ, ಬಳಲಿದೆಯೊ ಜೀವ, ಕೇಳೆನ್ನ ಚೆಲುವ,

ಬೇಡೆಂದು ಜರಿದು, ನೀ ದೂರ ಹೋದರೂ, ಬಿಡದಂತೆ ನಿನ್ನ, ನೆರಳಾಗೆ ಇರುವೆ,

ತಾನೂ ತಂದಾನೊ ತಾನೂ (೪), ನಾನಯ್ಯ ಬೊಂಬೆ ನಾನಯ್ಯ 

।।೧।।


ನನ್ನೆದೆಯೆ  ನಿನ್ನಾ, ಸೆರೆಮನೆಯು ಚೆನ್ನಾ, ಅದರಿಂದ ಎಂದೂ, ಬಿಡುಗಡೆಯು ಸಿಗದೂ,

ನೂರಾರು ಜನುಮ, ನೀ ತಾಳಿ ಬಂದರೂ, ಸತಿಯಾಗಿ ನಿನ್ನ, ಜೊತೆಯಲ್ಲೇ ಬರುವೆ,

 ತಾನೂ ತಂದಾನೊ ತಾನೂ (೪), ನಾನಯ್ಯ ಬೊಂಬೆ ನಾನಯ್ಯ

।।೨।।

                 

Aralida Aase Manjina Hoovaytu (ಅರಳಿದ ಆಸೆ ಮಂಜಿನ ಹೂವಾಯ್ತು)

Movie: Suprabhata (1989)

Singer: SPB, Chitra

Song link: Click Here


Aralida aase manjina hoovaytu,

Bisilina begeyali karagi neerayitu,

Baduku saakayitu ho..||


Olavina savi kaanade, maduveya maatagade,

Maguvina taayadare endigu nove,

Kandana nee kaanade, muttina dani kelade,

Jogula nee haadade etake aluve,

Baalina sangeetavu shruti seradaytu ||


Haaruva hakkiyante, oduva jinkeyante,

Harushadi neeniralu sadagaravenu,

Balegala savinadake, cheluveya kudi notake,

Kangala milanake sote neenu,

Ellavu kanasayitu baalu baridaytu ||


ಚಿತ್ರಗೀತೆ 


ಅರಳಿದ ಆಸೆ ಮಂಜಿನ ಹೂವಾಯ್ತು,

ಬಿಸಿಲಿನ ಬೇಗೆಯಲಿ ಕರಗಿ ನೀರಾಯಿತು,

ಬದುಕು ಸಾಕಾಯಿತು ಹೋ .. ।।ಪ।।


ಒಲವಿನ ಸವಿ ಕಾಣದೆ , ಮದುವೆಯ ಮಾತಾಗದೆ,

ಮಗುವಿನ ತಾಯಾದರೆ ಎಂದಿಗೂ ನೋವೆ,

ಕಂದನ ನೀ ಕಾಣದೆ, ಮುತ್ತಿನ ದನಿ ಕೇಳದೆ,

ಜೋಗುಳ ನೀ ಹಾಡದೆ ಏತಕೆ ಅಳುವೆ,

ಬಾಳಿನ ಸಂಗೀತವು ಶೃತಿ ಸೇರದಾಯ್ತು ।।೧।।


ಹಾರುವ ಹಕ್ಕಿಯಂತೆ, ಓಡುವ ಜಿಂಕೆಯಂತೆ,

ಹರುಷದಿ ನೀನಿರಲು ಸಡಗರವೇನು,

ಬಳೆಗಳ ಸಾವಿನಾದಕೆ, ಚೆಲುವೆಯ ಕುಡಿ ನೋಟಕೆ,

ಕಂಗಳ ಮಿಲನಕೆ ಸೋತೆ ನೀನು,

ಎಲ್ಲವು ಕನಸಾಯಿತು ಬಾಳು ಬರಿದಾಯ್ತು ।।೨।।

           


Saturday, January 31, 2026

Sharnu Virupaksha Sashishekhara (ಶರಣು ವಿರೂಪಾಕ್ಷ ಶಶಿಶೇಖರಾ)

Movie: Sri Krishnadevaraya (1970)

Singer: S Janaki

Song link: Click Here


Sharanu virupaksha sashishekhara,

Pampavati tanaya parameshwara ||


Saaranga brunga vihanga mudra chatura,

Tungabhadra teertha kshetra vihaara,

Sangeeta sahitya ratnakara, shrungara rasanatya natashekara ||


Omkara naadamaya madhurakshara,

Jhenkaara gaanapriya gangadhara,

Dharmavataara dayasagara, dhareyalo dore neene karunakara ||


ಚಿತ್ರಗೀತೆ 


ಶರಣು ವಿರೂಪಾಕ್ಷ ಶಶಿಶೇಖರಾ,

ಪಂಪಾವತಿ ತನಯ ಪರಮೇಶ್ವರಾ ।।ಪ।।


ಸಾರಂಗ ಭೃಂಗ ವಿಹಂಗ ಮುದ್ರಾ ಚತುರ,

ತುಂಗಭದ್ರಾ ತೀರ್ಥ ಕ್ಷೇತ್ರ ವಿಹಾರ,

ಸಂಗೀತ ಸಾಹಿತ್ಯ ರತ್ನಾಕರ, ಶೃಂಗಾರ ರಸನಾಟ್ಯ ನಟಶೇಕರ 

।।೧।।


ಓಂಕಾರ ನಾದಮಯ ಮಧುರಾಕ್ಷರ,

ಝೇಂಕಾರ ಗಾನಪ್ರಿಯ ಗಂಗಾಧರ,

ಧರ್ಮಾವತಾರ ದಯಾಸಾಗರ, ಧರೆಯಾಳೊ ದೊರೆ ನೀನೆ ಕರುಣಾಕರ  ।।೨।।

                               

Sahaneya Shantiya Satya Kalyana (ಸಹನೆಯ ಶಾಂತಿಯ ಸತ್ಯ ಕಲ್ಯಾಣ)

Bhaktigeete

Singer: Dr. Rajkumar

Song link: Click Here


Sahaneya shantiya satya kalyana, tirupatiyalli nitya kalyana,

Aalayadalli pacche torana, aananda vaibhoga chiranutana ||


Badavarige bandu kaarunya sindhu, siri ramananivane endendu,

Maanavara sukha dukha balla daiva, hari padeda illi manavara anubhava ||


Deenanaguta dehi enda saalavanu padeda kuberaninda,

Baddiyanu terutihanu endendigu, harake kanikeyannu bidanendigu ||


Bhumigilidide vaibhavada vaikuntha, srinivasanu bhaktara banta,

Manujanaguvanilli surara nenta, sankatava harisuvanu sri venkata ||


ಭಕ್ತಿಗೀತೆ 


ಸಹನೆಯ ಶಾಂತಿಯ ಸತ್ಯ ಕಲ್ಯಾಣ, ತಿರುಪತಿಯಲ್ಲಿ ನಿತ್ಯ ಕಲ್ಯಾಣ,

ಆಲಯದಲ್ಲಿ ಪಚ್ಚೆ ತೋರಣ, ಆನಂದ ವೈಭೋಗ ಚಿರನೂತನ 

।।ಪ।।


ಬಡವರಿಗೆ ಬಂದು ಕಾರುಣ್ಯ ಸಿಂಧು, ಸಿರಿ ರಮಣನಿವನೆ ಎಂದೆಂದು,

ಮಾನವರ ಸುಖ ದುಃಖ ಬಲ್ಲ ದೈವ, ಹರಿ ಪಡೆದ ಇಲ್ಲಿ ಮಾನವರ ಅನುಭವ ।।೧।।


ದೀನನಾಗುತ ದೇಹಿ ಎಂದ ಸಾಲವನು ಪಡೆದ ಕುಬೇರನಿಂದ,

ಬಡ್ಡಿಯನು ತೆರುತಿಹನು ಎಂದೆಂದಿಗೂ, ಹರಕೆ ಕಾಣಿಕೆಯನ್ನು ಬಿಡನೆಂದಿಗೂ ।।೨।।


ಭೂಮಿಗಿಳಿದ ವೈಭವದಾ ವೈಕುಂಠ,ಶ್ರೀನಿವಾಸನು ಭಕ್ತರಾ ಬಂಟ,

ಮನುಜನಾಗುವನಿಲ್ಲಿ ಸುರರಾ ನೆಂಟ, ಸಂಕಟವ ಹರಿಸುವನು ಶ್ರೀ ವೆಂಕಟ ।।೩।।

                                     

Srinivasana Nage Modi Seleyalu (ಶ್ರೀನಿವಾಸನ ನಗೆ ಮೋಡಿ ಸೆಳೆಯಲು)

Bhaktigeete

Singer: Dr, Rajkumar

Song link: Click Here


Srinivasana nage modi seleyalu, bande ododi,

Truptiyagadu nodee nodee, hege haadali kondaadi ||


Bannisi haadalu aase, bannanegetukadu bhashe,

Bhakti bhavada bandha ee anubandha balu chenda ||


Venkataramana sankata harana, ennuva nudiye balu chenna,

Satyada anubhava saakara, tandide aananda kanneera ||


Srihari aadanu srinivasa, sankata harisuva girivasa,

Deena dalitara sahavasa, koruva namma sri venkatesha ||


ಭಕ್ತಿಗೀತೆ 


ಶ್ರೀನಿವಾಸನ ನಗೆ ಮೋಡಿ ಸೆಳೆಯಲು, ಬಂದೇ ಓಡೋಡಿ,

ತೃಪ್ತಿಯಾಗದು ನೋಡೀ ನೋಡೀ, ಹೇಗೆ ಹಾಡಲಿ ಕೊಂಡಾಡಿ 

।।ಪ।।


ಬಣ್ಣಿಸಿ ಹಾಡಲು ಆಸೆ, ಬಣ್ಣನೆಗೆಟುಕದು ಭಾಷೆ,

ಭಕ್ತಿ ಭಾವದಾ ಬಂಧ ಈ ಅನುಬಂಧ ಬಲು ಚೆಂದ

 ।।೧।।


ವೆಂಕಟರಮಣ ಸಂಕಟ ಹರಣ, ಎನ್ನುವ ನುಡಿಯೆ ಬಲು ಚೆನ್ನ,

ಸತ್ಯದ ಅನುಭವ ಸಾಕಾರ, ತಂದಿದೆ ಆನಂದ ಕಣ್ಣೀರ

 ।।೨।।


ಶ್ರೀಹರಿ ಆದನು ಶ್ರೀನಿವಾಸ, ಸಂಕಟ ಹರಿಸುವ ಗಿರಿವಾಸ,

ದೀನ ದಲಿತರ ಸಹವಾಸ, ಕೋರುವ ನಮ್ಮ ಶ್ರೀ ವೆಂಕಟೇಶ 

।।೩।।

                           

Gaaliyalli Gaana Banditu (ಗಾಳಿಯಲ್ಲಿ ಗಾನ ಬಂದಿತು)

Bhaktigeete

Singer: Dr. Rajkumar

Song link: Click Here


Gaaliyalli gaana banditu, amrutavanne tanditu,

Venkatesha emba naama hrudayavanne midiyitu,

Hinde endu kaanadantha divya vaibhava sanditu,

Divya vaibhava sanditu ||


Sudheya saviyada nararigella, hariyu needida varavanu,

Devagange illi hariyitu, paapanashani kuditu,

Gaaligopura illi haaditu, hariya hirimeya saaritu ||


Dhareya tirupati nakadalli, nitya satyada darushana,

Paada renu dosha neegitu, dharma rupana toritu,

Karmalepana maayavayitu, janma dhanyate honditu ||


ಭಕ್ತಿಗೀತೆ

 

ಗಾಳಿಯಲ್ಲಿ ಗಾನ ಬಂದಿತು, ಅಮೃತವನ್ನೇ ತಂದಿತು,

ವೆಂಕಟೇಶ ಎಂಬ ನಾಮ, ಹೃದಯವನ್ನೇ ಮಿಡಿಯಿತು,

ಹಿಂದೆ ಎಂದೂ ಕಾಣದಂಥ, ದಿವ್ಯ ವೈಭವ ಸಂದಿತು,

ದಿವ್ಯ ವೈಭವ ಸಂದಿತು ।।ಪ ।।


ಸುಧೆಯ ಸವಿಯದ ನರರಿಗೆಲ್ಲ, ಹರಿಯು ನೀಡಿದ ವರವನು,

ದೇವಗಂಗೆ ಇಲ್ಲಿ ಹರಿಯಿತು, ಪಾಪನಾಶನಿ ಕೂಡಿತು,

ಗಾಳಿಗೋಪುರ ಇಲ್ಲಿ ಹಾಡಿತು, ಹರಿಯ ಹಿರಿಮೆಯ ಸಾರಿತು 

।।೧।।


ಧರೆಯ ತಿರುಪತಿ ನಾಕದಲ್ಲಿ, ನಿತ್ಯ ಸತ್ಯದ ದರುಶನ,

ಪಾದ ರೇಣು ದೋಷ ನೀಗಿತು, ಧರ್ಮ ರೂಪನ ತೋರಿತು,

ಕರ್ಮಲೇಪನ ಮಾಯವಾಯಿತು, ಜನ್ಮ ಧನ್ಯತೆ ಹೊಂದಿತು

।।೨।।