Tuesday, June 30, 2026

Entu Bedaru (ಎಂಟು ಬೇಡರು)

 ಪದ್ಯ 

ಸಾಹಿತ್ಯ: ಪಂಜೆ ಮಂಗೇಶರಾಯರು 


ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ 

ಬಗೆ ಬಗೆಯ ಬೇಡರಿಂದಲಿ ದೂರವಾಗು. 


ಹೊತ್ತನ್ನು ತಿಂಬ ಸೋಮಾರಿತನ ಬೇಡ !

ಮತ್ತು ಹಿಡಿಸುವ ಮೈ ಕೊಲುವ ಕಳ್ಳು ಬೇಡ !

ಕತ್ತು ಕೊಯ್ಕರ ಕೂಡೆ ನಂಟು ಬೇಡತನ !

ಉತ್ತಮೋತ್ತಮರಲ್ಲಿ ನಿನ್ನ ಹಗೆ ಬೇಡ !


ಎತ್ತಿದ್ದ ಸಾಲವನು ಕೊಡದ ಮನ ಬೇಡ !

ವಿತ್ತ ವಸ್ತುವ ನುಂಗುವಾ ಮೋಸ ಬೇಡ !

ಚಿತ್ತವನು ಕೆಡಿಪಿ ಹೊಟ್ಟೆಯ ಕಿಚ್ಚು ಬೇಡ !

ಮತ್ತೆ ಪಾಪದ ತರುವ ಕೆಡುಗೆಲಸ ಬೇಡ !


Padya


Maguve, ninnaya maige guri ittu hodeva

Bage bageya bedarindali duravaagu.


Hottannu timba somaritana beda!

Mattu hidisuva mai koluva kallu beda!

Kattu koykara kude nantubedatana!

Uttamottamaralli ninna hage beda!


Ettida salavanu kodada mana beda!

Vitta vastuva nunguva mosa beda!

Chittavanu kedipa hotteya kicchu beda!

Matte paapada taruva kedugelasa beda!

No comments:

Post a Comment