Thursday, October 30, 2025

Neenomme Maatade Indu (ನೀನೊಮ್ಮೆ ಮಾತಾಡೆ ಇಂದು)

Movie: Aliya Geleya (1971)

Singer: P B Srinivas

Song link: Click Here


Neenomme maatade indu, neenomme maatade,

Cheluve itta nee.. node ||


Minchante mruduvaagi nagalu,

Munnuru minchu nannallu, aa aa

Ninna dhaniye impaada veene,

Ninnantha sobagellu naa kane ||


Nintaaga belura shileyante,

Nadevaaga hoovina terante, aa aa

Nanna manade hego ninte,

Dinavella ninnade chinte ||


ಚಿತ್ರಗೀತೆ 


ನೀನೊಮ್ಮೆ ಮಾತಾಡೆ  ಇಂದು, ನೀನೊಮ್ಮೆ ಮಾತಾಡೆ,

ಚೆಲುವೆ ಇತ್ತ ನೀ ..ನೋಡೆ ।।ಪ।।


ಮಿಂಚಂತೆ ಮೃದುವಾಗಿ ನಗಲೂ,

ಮುನ್ನೂರು ಮಿಂಚು ನನ್ನಲ್ಲು ಆ ಆ,

ನಿನ್ನ ಧನಿಯೆ ಇಂಪಾದ ವೀಣೆ,

ನಿನಂಥ ಸೊಬಗೆಲ್ಲು ನಾ ಕಾಣೆ ।।೧।।


ನಿಂತಾಗ ಬೇಲೂರ ಶಿಲೆಯಂತೆ,

ನಡೆವಾಗ ಹೂವಿನ ತೇರಂತೆ ಆ ಆ,

ನನ್ನ ಮಾಣದೆ ಹೇಗೋ ನಿಂತೆ,

ದಿನವೆಲ್ಲ ನಿನ್ನದೆ ಚಿಂತೆ ।।೨।।

                

Nagutide Dhare Indu (ನಗುತಿದೆ ಧರೆ ಇಂದು)

Movie: Aliya Geleya (1971)

Singer: P B Srinivas

Song link: Click Here


Nagutide dhare indu, muttina maleyalli,

Telona naavindu harushada holeyalli ||


Taavare hoovina kangalali, tumbida bayakeya tampirali,

Aadida maatu nenapirali, naaleya namma baalinali,

Hosa hosa anubhava dorakali, hosa hosa kaviteya bareyali ||


Siritana badatana enirali, nammaya manasu ondirali,

Ambali ganjiye aagirali, adarale sukhavu namagirali,

Kila kila nageyu hariyalee, pulakita manavu naliyali ||


ಚಿತ್ರಗೀತೆ 


ನಗುತಿದೆ ಧರೆ ಇಂದು ಮುತ್ತಿನ ಮಳೆಯಲ್ಲೀ,

ತೇಲೋಣ ನಾವಿಂದು ಹರುಷದ ಹೊಳೆಯಲ್ಲೀ ।।ಪ।।


ತಾವರೆ ಹೂವಿನ ಕಂಗಳಲಿ, ತುಂಬಿದ ಬಯಕೆಯ ತಂಪಿರಲಿ,

ಆಡಿದ ಮಾತು ನೆನಪಿರಲಿ, ನಾಳೆಯ ನಮ್ಮ ಬಾಳಿನಲಿ,

ಹೊಸ ಹೊಸ ಅನುಭವ ದೊರಕಲೀ, ಹೊಸ ಹೊಸ ಕವಿತೆಯ ಬರೆಯಲೀ ।।೧।।


ಸಿರಿತನ ಬಡತನ ಏನಿರಲಿ, ನಮ್ಮಯ ಮನಸು ಒಂದಿರಲಿ,

ಅಂಬಲಿ ಗಂಜಿಯೆ ಆಗಿರಲಿ, ಅದರಲೆ ಸುಖವು ನಮಗಿರಲಿ,

ಕಿಲ ಕಿಲ ನಗೆಯು ಹರಿಯಲೀ, ಪುಲಕಿತ ಮನವು ನಲಿಯಲೀ 

।।೨।।

                               

Tuesday, October 28, 2025

Ravi (ರವಿ)

ಪದ್ಯ 

ಸಾಹಿತ್ಯ : ಸುಮನ ಬಾಗಲುಕೋಟೆ 


ಮೂಡಿದ ರವಿ ತಾನೋಡಿದ ನಭಕೆ,

ಹೊನ್ನಿನ ಕಾಂತಿಯ ಓಕುಳಿ ಜಗಕೆ,

ಸೃಷ್ಟಿಯ ಸೊಬಗಿನ ಶೋಭೆಯ ಬೀರಿ,

ಬಂದನದೋ ರವಿ ತಾಮೇಲೇರಿ. 


ಬೆಳಗು ಜಾವದೊಳೆರಗಿದ ಹಿಮಮಣಿ,

ಆರಿಸಿಕೊಂಡಿಹನದನಾ ದಿನಮಣಿ,

ಸೃಷ್ಟಿಯ ನೆಲೆಯೊಳ್ ಅಡಗಿದ ಚಿತ್ರ,

ಕಂಡಿತು ಕವಿಗದು ಬಹಳ ವಿಚಿತ್ರ. 


ಭುವಿಯೊಳು ಹರಡಿದ ಜಡವನು ಹೀರಿ,

ಕಂಗೊಳಿಸಿದ ರವಿ ಚೇತನ ಬೀರಿ,

ಜಗದೊಳು ಹರಡಿಸಿ ಚೆಲುವಿನ ಐಸಿರಿ,

ಬೆಳಗಿಹನೋ ರವಿ ಮಂಗಳ ಕೋರಿ. 


ಹೊರಟಿಹ ರವಿ ತಾ ಬಾನ್ದೆರೆ ಸೀಳಿ,

ಜಗಕಾಯಿತೊ ಕೆನ್ನೀರಿನ ಹೋಳಿ,

ಬರುತಿಹ ಸಂಧ್ಯೆಗೆ ಶುಭವನು ಕೋರಿ,

ಅಡಗಿದ ರವಿ ತಾಯ್ಮಡಿಲನು ಸೇರಿ. 


Padya


Moodida ravi taanodida nabhake,

Honnina kantiya okuli jagake,

Srushtiya sobagina shobheya beeri,

Bandanado ravi taameleri.


Belagu jaavadoleragida himamani,

Aarisikondihanadanaa dinamani,

Srushtiya neleyol adagida chitra,

Kanditu kavigadu bahala vichitra.


Bhuviyol haradida jadavanu heeri,

Kangolisida ravi chetana beeri,

Jagadolu haradisi cheluvina isiri,

Belagihano ravi mangala kori.


Horatiha ravi taa bandere seeli,

Jagakaayito keneerina holi,

Barutiha sandhyege shubhavanu kori,

Adagida ravi taimadilanu seri.

                       

Sunday, October 26, 2025

Yaaramma (ಯಾರಮ್ಮಾ)

ಪದ್ಯ 

ಸಾಹಿತ್ಯ : ರಾ. ಮೊ. ವಿಶ್ವಾಮಿತ್ರ 


ಮರಗಿಡ ಬಳ್ಳಿಗೆ ಅಂದದ ಹಸುರಿನ 

ಬಣ್ಣವ ಕೊಟ್ಟವರಾರಮ್ಮಾ !

ಹಾಡುವ ಹಕ್ಕಿಗೆ ಮಧುರದ ಕಂಠವ 

ಇತ್ತವನಾವನು ಹೇಳಮ್ಮಾ !


ನೀಲಾಕಾಶದಿ ಸೂರ್ಯನ ಚಂದ್ರನ 

ಓಡಿಸಿ ಆಡಿಪನಾರಮ್ಮಾ !

ಗಗನದಿ ತಾರೆಯು ಹೊಳೆಯುವ ತೆರದಲಿ 

ನಿಲ್ಲಿಸಿದಾತನು ಯಾರಮ್ಮಾ !


ಗುಡುಗುಡು ಗುಮ್ಮನ ಗುಡುಗಿಸಿ ಬಾನಲಿ 

ಮಳೆ ಹನಿಗರೆಯುವರಾರಮ್ಮ !

ಆಗಸವೆನ್ನುವ ದೊಡ್ಡೀಕೊಡೆಯನು 

ಲೋಕಕೆ ಹಿಡಿದವರಾರಮ್ಮಾ !


ಕುಣಿಯುವ ನವಿಲಿಗೆ ಬಣ್ಣದ ಗರಿಗಳ -

ಒದಗಿಸಿಕೊಟ್ಟವರಾರಮ್ಮಾ !

ಆಡುವ ಗಿಳಿಗಾ ಮುದ್ದಿನ ಕೊಕ್ಕನು 

ಕಲ್ಪಿಸಿಕೊಟ್ಟವರಾರಮ್ಮಾ !


ಅರಳುವ ಮೊಗ್ಗಲಿ ಪರಿಮಳ ತುಂಬಿಸಿ 

ಲೋಕಕೆ ಹರಡುವರಾರಮ್ಮಾ !

ಹಾರುವ ತುಂಬಿಗೆ ಹೂವಿನ ಗೆಳೆತನ 

ಮಾಡಿಸಿ  ಕೊಟ್ಟವರಾರಮ್ಮಾ !


Padya


Maragida ballige andada hasurina,

Bannava kottavaraarammaa!

Haaduva hakkige madhurada kanthava

Ittavanaavanu helammaa!


Neelaakashadi suryana chandrana

Odisi aadipanaarammaa!

Gaganadi taareyu holeyuva teradali

Nillisidaatanu yaaramma!


Gudugudu gummana gudugisi baanali

Male hanigareyuvaraarammaa!

Aagasavennuva doddikodeyanu

Lokake  hididavaraarammaa!


Kuniyuva navilige bannada garigala-

Odagisi kottavaraarammaa!

Aaduva giligaa muddina kokkanu

Kalpisi kottavaraarammaa!


Araluva moggali parimala tumbisi

Lokake haraduvaraarammaa!

Haaruva tumbige hoovina geletana

Maadisi kottavaraarammaa!

                

Ondaagi Baalabeku (ಒಂದಾಗಿ ಬಾಳಬೇಕು)

Movie: Aliya Geleya (1971)

Singer: S Janaki


Ondaagi baalabeku, naadali, ondaagi baalabeku,

Munnededu saagabeku, naavu kannadake dudiyabeku ||


Odininda ariyabeku, baalina bele,

Andavaagi belago mane, devanaa nele,

Gudisilaadaru adara kasava gudisuva,

Snanamaadi balika naavu ganji kudiyuva,

Haraku chindiyaadaru ogedu dharisuva,

Swanta dudimeyindale swarga kaimele ||


Desha sevegaagi ella ondaagalu, naavu mundaagalu,

Honna beleya bittutiralu kshamaviradu ellu,

Kaaya kashta maade, namma naada elige,

Baala eru peru sariyaage, baradu munde bege ||


ಚಿತ್ರಗೀತೆ 


ಒಂದಾಗಿ ಬಾಳಬೇಕು, ನಾಡಲಿ, ಒಂದಾಗಿ ಬಾಳಬೇಕು,

ಮುನ್ನೆಡೆದು ಸಾಗಬೇಕು, ನಾವು ಕನ್ನಡಕೆ ದುಡಿಯಬೇಕು ।।ಪ।।


ಓದಿನಿಂದ ಅರಿಯಬೇಕು, ಬಾಳಿನಾ ಬೆಲೆ,

ಅಂದವಾಗಿ ಬೆಳಗೊ ಮನೆ, ದೇವನಾ ನೆಲೆ,

ಗುಡಿಸಿಲಾದರೂ ಅದರ ಕಸವ ಗುಡಿಸುವ,

ಸ್ನಾನಮಾಡಿ ಬಳಿಕ ನಾವು ಗಂಜಿ ಕುಡಿಯುವ,

ಹರಕು ಚಿಂದಿಯಾದರು ಒಗೆದು ಧರಿಸುವ,

ಸ್ವಂತ ದುಡಿಮೆಯಿಂದಲೇ ಸ್ವರ್ಗ ಕೈಮೇಲೆ ।।


ದೇಶಸೇವೆಗಾಗಿ ಎಲ್ಲ ಒಂದಾಗಲು, ನಾವು ಮುಂದಾಗಲು,

ಹೊನ್ನ ಬೆಳೆಯ ಬಿತ್ತುತ್ತಿರಲು ಕ್ಷಾಮ ವಿರದು ಎಲ್ಲು,

ಕಾಯ ಕಷ್ಟ ಮಾಡೆ, ನಮ್ಮ ನಾಡ ಏಳಿಗೆ,

ಬಾಳ ಏರು ಪೇರು ಸರಿಯಾಗೆ, ಬರದು ಮುಂದೆ ಬೇಗೆ ।।

                                                  

Ellindalo Banda (ಎಲ್ಲಿಂದಲೋ ಬಂದ)

Movie: Aliya Geleya (1971)

Singer: L R Eshwari


Ellindalo banda, manadalli ninda

Aatanaaro yaava ooro naa kaane ||


Cheluvali chandrana minchuvano,

Baladali hanumana meeruvano,

Siriyalli kuberano, indrana samaanano,

Enagaagi bandantha, jothegaara ivano ||


Kannale hosakavya baredavano,

Hennali hosabhava tandavano,

Baari baari noduva, baare baare ennuva,

Bali saari nage beeri, hoomaale haakuva ||


ಚಿತ್ರಗೀತೆ 


ಎಲ್ಲಿಂದಲೋ ಬಂದ, ಮನದಲ್ಲಿ ನಿಂದ,

ಆತನಾರೋ ಯಾವ ಊರೋ ನಾ ಕಾಣೆ ।।ಪ।।


ಚೆಲುವಲಿ ಚಂದ್ರನ ಮಿಂಚುವನೊ,

ಬಲದಲಿ ಹನುಮನ ಮೀರುವನೊ,

ಸಿರಿಯಲ್ಲಿ ಕುಬೇರನೋ, ಇಂದ್ರನ ಸಮಾನನೋ,

ಎನಗಾಗಿ ಬಂದಂಥ, ಜೊತೆಗಾರ ಇವನೊ ।।೧।।


ಕಣ್ಣಲೆ ಹೊಸಕಾವ್ಯ ಬರೆದವನೋ,

ಹೆಣ್ಣಲಿ ಹೊಸಭಾವ ತಂದವನೊ,

ಬಾರಿ ಬಾರಿ ನೋಡುವಾ, ಬಾರೆ ಬಾರೆ ಎನ್ನುವಾ,

ಬಳಿ ಸಾರಿ ನಗೆ ಬೀರಿ, ಹೂಮಾಲೆ ಹಾಕುವಾ ।।೨।।

                                      

Madhuhaasa Mohini (ಮಧುಹಾಸ ಮೋಹಿನಿ)

Movie: Aliya Geleya (1971)

Singers: P B Srinivas, Pithapuram Nageshwara Rao


Madhuhaasa mohini, madhura subhashini,

Manasu indu kallayite, manadanne helu nee ||


Mohana malligeya nannali nee kopabidu,

Mounada gouriye, neenondusala baayibidu ||


Cheluvanta chennigane, sogasugaara subbane,

Namma prema poojeya naduve, karadi bandu nintihude ||


Maatina mallane ee premadaata sakubidu,

Ninna appanige getupaasu modalu kodu ||


ಚಿತ್ರಗೀತೆ 


ಮಧುಹಾಸ ಮೋಹಿನಿ, ಮಧುರ ಸುಭಾಷಿಣಿ,

ಮನಸು ಇಂದು ಕಲ್ಲಾಯಿತೇ, ಮನದನ್ನೇ ಹೇಳು ನೀ ।।


ಮೋಹನ ಮಲ್ಲಿಗೆಯೆ ನನ್ನಲಿ ನೀ ಕೋಪಬಿಡು,

ಮೌನದ ಗೌರಿಯೆ, ನೀನೊಂದುಸಲ ಬಾಯಿಬಿಡು ।।


ಚೆಲುವಾಂತ ಚೆನ್ನಿಗನೇ, ಸೊಗಸುಗಾರ ಸುಬ್ಬನೇ,

ನಮ್ಮ ಪ್ರೇಮ ಪೂಜೆಯ ನಡುವೆ, ಕರಡಿ ಬಂದು ನಿಂತಿಹುದೇ ।।


ಮಾತಿನ ಮಲ್ಲನೆ ಈ ಪ್ರೇಮದಾಟ ಸಾಕುಬಿಡು,

ನಿನ್ನ ಅಪ್ಪನಿಗೆ ಗೇಟುಪಾಸು ಮೊದಲು ಕೊಡು ।।