Friday, August 4, 2023

Vasanta Baralu (ವಸಂತ ಬರಲು)

Bhavageete

Sahitya: H S Venktesh Murthy

Song link: Click Here


Vasanta baralu, mara chiguruvudeke

Yaranu kelali nanu 

Gaali beesi hoo kampu bayalige 

Yaranu durali nanu ||


Male biddare nadi ukkuvudeke

Yaranu kelali nanu

Tabbikonda dandeya tol sadile

Yaranu durali nanu ||


Surya mudidare mannina edegu

Baruvudu honnina banna

Kirana taagidare kesarina tavare

Eke tereyuvudu kanna ||


Hunnime chandrana kanda kadalu

Gari bicchi kuniyuvudeke

Eke keke mai manita kunitavu

Yara duruvudeke ||


ಭಾವಗೀತೆ 


ವಸಂತ ಬರಲು, ಮರ ಚಿಗುರುವುದೇಕೆ

 ಯಾರನು ಕೇಳಲಿ ನಾನು 

ಗಾಳಿ ಬೀಸೆ ಹೂ ಕಂಪು ಬಯಲಿಗೆ 

ಯಾರನು ದೂರಲಿ ನಾನು ।।ಪ।।


ಮಳೆ ಬಿದ್ದರೆ ನದಿ ಉಕ್ಕುವುದೇಕೆ 

ಯಾರನು ಕೇಳಲಿ ನಾನು 

ತಬ್ಬಿಕೊಂಡ ದಂಡೆಯ ತೋಳ್ ಸಡಿಲೆ 

ಯಾರನು ದೂರಲಿ ನಾನು ।।೧।।


ಸೂರ್ಯ ಮೂಡಿದರೆ ಮಣ್ಣಿನ ಎದೆಗೂ 

ಬರುವುದು ಹೊನ್ನಿನ ಬಣ್ಣ 

ಕಿರಣ ತಾಗಿದರೆ ಕೆಸರಿನ ತಾವರೆ 

ಏಕೆ ತೆರೆಯುವುದು ಕಣ್ಣ ।।೨।।


ಹುಣ್ಣಿಮೆ ಚಂದ್ರನ ಕಂಡ ಕಡಲು 

ಗರಿ ಬಿಚ್ಚಿ ಕುಣಿಯುವುದೇಕೆ 

ಏಕೆ ಕೇಕೆ ಮೈ ಮಣಿತ ಕುಣಿತವು 

ಯಾರನು ದುರುವುದೇಕೇ  ।।೩।।

                                       






Thursday, August 3, 2023

Kandu Kandu Neeyenna Kai Biduvare Krishna (ಕಂಡು ಕಂಡು ನೀಯೆನ್ನ ಕೈಬಿಡುವರೆ ಕೃಷ್ಣ)

Bhaktigeete

Purandara Dasara Keerthanegalu

Song link: Click Here


Raga: Kamboja

Tala: Jhampetala


Kandu kandu neeyenna kai biduvare krishna

Pundarikaksha purushottama ||


Bandhugalu enagilla badukinali sukhavilla

Nindeyali nondenai neerajaksha

Tandetayiyu neene bandhubalagavu neene

Endendigu ninna nambideno krishna ||


Kshana ondu yugavagi trunakkinta kadeyagi

Enisalarada bhavadi nonde nanu

Sanakadi munivandya vanajasambhavajanaka

Phanishayi pralhaadagolida srikrishna ||


Bhaktavatsalanemba birudu potha mele

Bhaktaraadhina nagirabedave

Muktidayaka neenu honnurupuravasa

Shakta guru purandara vittalana sri krishna ||


ಭಕ್ತಿಗೀತೆ 


ಕಂಡು ಕಂಡು ನೀಯೆನ್ನ ಕೈಬಿಡುವರೆ ಕೃಷ್ಣ 

ಪುಂಡರೀಕಾಕ್ಷ ಪುರುಷೋತ್ತಮ ।।ಪ।।


ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ 

ನಿಂದೆಯಲಿ ನೊಂದೆನೈ ನೀರಜಾಕ್ಷ 

ತಂದೆತಾಯಿಯು ನೀನೆ ಬಂಧುಬಳಗವು ನೀನೆ 

ಎಂದೆಂದಿಗೂ ನಿನ್ನ ನಂಬಿದೆನೊ ಕೃಷ್ಣ ।।೧।।


ಕ್ಷಣ ಒಂದು ಯುಗವಾಗಿ ತೃಣಕ್ಕಿಂತ ಕಡೆಯಾಗಿ 

ಎಣಿಸಲಾರದ ಭವದಿ ನೊಂದೆ ನಾನು 

ಸನಕಾದಿ ಮುನಿವಂದ್ಯ ವನಜಸಂಭವಜನಕ 

ಫಣಿಶಾಯಿ ಪ್ರಲ್ಹಾದಗೊಲಿದ ಶ್ರೀಕೃಷ್ಣ ।।೨।।


ಭಕ್ತವತ್ಸಲನೆಂಬ ಬಿರುದು ಪೊತ್ತಾ ಮೇಲೆ 

ಭಕ್ತರಾಧೀನ ನಾಗಿರಬೇಡವೆ 

ಮುಕ್ತಿದಾಯಕ ನೀನು ಹೊನ್ನೂರು ಪುರವಾಸ 

ಶಕ್ತಗುರು ಪುರಂದರ ವಿಠ್ಠಲನ ಶ್ರೀಕೃಷ್ಣ ।।೩।।                   ಶ್ರೀ 




Wednesday, August 2, 2023

Elli Ninna Bhaktaro Alle Mantralaya (ಎಲ್ಲಿ ನಿನ್ನೆ ಭಕ್ತರೋ ಅಲ್ಲೇ ಮಂತ್ರಾಲಯ)

Bhaktigeete

Singer: Dr. Rajkumar

Song link: Click Here


Elli ninna bhaktaro alle mantralaya

Elli ninna nenevaro alle devalaya ||


Pooje nadeva manegale endu parama pavana

Dhyana gaiva managale ninna brundavana

Ninna arita hrudayave devaniruva mandira aa..

Ninna bereva bhagyave nitya satya sundara ||


Ninna kanuvaseye purva janma punyavu

Ninna nambi nadevude balinalli bhagyavu

Ninna nama smaraneye divya veda mantravu

Nitya ninna seveye mukti padeva tantravu ||


ಭಕ್ತಿಗೀತೆ 


ಎಲ್ಲಿ ನಿನ್ನೆ ಭಕ್ತರೋ ಅಲ್ಲೇ ಮಂತ್ರಾಲಯ 

ಎಲ್ಲಿ ನಿನ್ನ ನೆನೆವರೋ ಅಲ್ಲೇ ದೇವಾಲಯ ।।ಪ।।


ಪೂಜೆ ನಡೆವ ಮನೆಗಳೇ ಎಂದೂ ಪರಮ ಪಾವನ 

ಧ್ಯಾನ ಗೈವ ಮನಗಳೇ ನಿನ್ನಾ ಬೃಂದಾವನ 

ನಿನ್ನ ಅರಿತ ಹೃದಯವೇ ದೇವನಿರುವ ಮಂದಿರ ಆ.. 

ನಿನ್ನ ಬೆರೆವ ಭಾಗ್ಯವೆ ನಿತ್ಯ ಸತ್ಯ ಸುಂದರ ।।೧।।


ನಿನ್ನ ಕಾಣುವಾಸೆಯೆ ಪೂರ್ವ ಜನ್ಮ ಪುಣ್ಯವು 

ನಿನ್ನ ನಂಬಿ ನಡೆವುದೆ ಬಾಳಿನಲ್ಲಿ ಭಾಗ್ಯವು 

ನಿನ್ನ ನಾಮ ಸ್ಮರಣೆಯೆ ದಿವ್ಯ ವೇದ ಮಂತ್ರವು 

ನಿತ್ಯ ನಿನ್ನ ಸೇವೆಯೆ ಮುಕ್ತಿ ಪಡೆವ ತಂತ್ರವು ।।೨।।




Tuesday, August 1, 2023

Kusina Kandira.. Kusina kandira (ಕೂಸಿನ ಕಂಡಿರಾ .. ಕೂಸಿನ ಕಂಡಿರಾ)

Bhaktigeete

Singer: B K Sumitra

Song link: Click Here


Kusina kandira.. kusina kandira.. kusina kandira

Pralhaadana kandira, sri sudhindrara kandira (2) ||


Veena vamshadi janisitu kusu 

vaniya korike mannipa kusu

Venugopalana kunisitu kusu

Panini shastrada parimala kusu ||


Rajata rathadi rarajipa kusu

Vijayaraya kondadida kusu

Janapara suyoga varipa kusu

Kanaka kavachava dharisida kusu ||


Ramara santata pujipa kusu

Kamitatarthagala karunipa kusu

Bhimana bhinnapa laalipa kusu

Raghavendranembo pesarina kusu ||


ಭಕ್ತಿಗೀತೆ 


ಕೂಸಿನ ಕಂಡಿರಾ ..  ಕೂಸಿನ ಕಂಡಿರಾ ..  ಕೂಸಿನ ಕಂಡಿರಾ .. 

ಪ್ರಲ್ಹಾದನ ಕಂಡಿರಾ,  ಶ್ರೀ ಸುಧೀಂದ್ರರ ಕಂದನ ಕಂಡಿರಾ 

।।ಪ ।।


ವೀಣಾ ವಂಶದಿ ಜನಿಸಿತು ಕೂಸು 

ವಾಣಿಯ ಕೋರಿಕೆ ಮನ್ನಿಪ ಕೂಸು 

ವೇಣುಗೋಪಾಲನ ಕುಣಿಸಿತು ಕೂಸು 

ಪಾಣಿನಿ ಶಾಸ್ತ್ರದ ಪರಿಮಳ ಕೂಸು ।।೧।।


ರಜತ ರಥದಿ ರಾರಾಜಿಪ ಕೂಸು 

ವಿಜಯರಾಯ ಕೊಂಡಾಡಿದ ಕೂಸು 

ಜನಪರ ಸುಯೋಗ ವಾರಿಪ ಕೂಸು 

ಕನಕ ಕವಚವ ಧರಿಸಿದ ಕೂಸು ।।೨।।


ರಾಮರ ಸಂತತ ಪೂಜಿಪ ಕೂಸು 

ಕಾಮಿತಾರ್ಥಗಳ ಕರುಣಿಪ ಕೂಸು

ಭೀಮನ ಭಿನ್ನಪ ಲಾಲಿಪ ಕೂಸು 

ರಾಘವೇಂದ್ರನೆಂಬೋ ಪೆಸರಿನ ಕೂಸು ।।೩।।

                           



Raghavendra Krupasagara (ರಾಘವೇಂದ್ರ ಕೃಪಾಸಾಗರ)

Bhaktigeete

Rachane: Jagannatha Dasaru

Song link: Click Here


Raghavendra krupasagara sri guru raghavendra |

Roga harane krupasagara 

Sri guru raghavendra paripaliso ||


Santata durmata dhvaanta divakara

Santavinuta maatalaaliso ||


Pavana gatra sudeva varane tava

Sevaka janarolagadiso ||


Ghanna mahima jagannatha vittalapriya

Ninnaradhane maadiso ||


ಭಕ್ತಿಗೀತೆ 


ರಾಘವೇಂದ್ರ ಕೃಪಾಸಾಗರ ಶ್ರೀ ಗುರು ರಾಘವೇಂದ್ರ ।

ರೋಗ ಹರನೆ  ಕೃಪಾಸಾಗರ 

ಶ್ರೀ ಗುರು ರಾಘವೇಂದ್ರ ಪರಿಪಾಲಿಸೋ।।


ಸಂತತ ದುರ್ಮತ ಧ್ವಾಂತ ದಿವಾಕರ 

ಸಂತವಿನುತ ಮಾತಲಾಲಿಸೊ ।।


ಪಾವನ ಗಾತ್ರ ಸುದೇವ ವರನೆ ತವ 

ಸೇವಕ ಜನರೊಳಗಾಡಿಸೊ ।।


ಘನ ಮಹಿಮ ಜಗನ್ನಾಥ ವಿಠ್ಠಲಪ್ರಿಯ 

ನಿನ್ನಾರಾಧನೆ ಮಾಡಿಸೊ ।। 





Monday, July 31, 2023

Neera Bittu Nelada Mele (ನೀರ ಬಿಟ್ಟು ನೆಲದ ಮೇಲೆ)

Movie: Hombisilu (1979)

Singer: SPB

Song link: Click Here


Neera bittu neleda mele doni sagadu

Nelava bittu neera mele bandi hogadu

Ninna bittu nanna, nanna bittu ninna

Jeevana sagadu, jeevana sagadu ||


Surya barade kamalavendu araladu

Chandranirade taare endu naliyadu

Olavu moodadiralu manavu araladu

Manavu araladiralu geluvu kaanadu (2) ||


Lokadalli gandu hennigasare

Aadarilli nanu ninna kaisere

Koodi naliva aase manadi kaadire

Hitavu elli navu bere aadare (2) ||


Neera bittu neleda mele doni sagadu

Nelava bittu neera mele bandi hogadu

Ninna bittu nanna, nanna bittu ninna

Jeevana sagadu, Pavana aagadu ||


ಚಿತ್ರಗೀತೆ 


ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು 

ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು 

ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ 

ಜೀವನಾ ಸಾಗದು, ಜೀವನಾ ಸಾಗದು ।।ಪ।।


ಸೂರ್ಯ ಬರದೆ ಕಮಲವೆಂದು ಅರಳದು 

ಚಂದ್ರನಿರದೆ ತಾರೆ ಎಂದು ನಲಿಯದೂ 

ಒಲವು ಮೂಡದಿರಲು ಮನವು ಅರಳದು 

ಮನವು ಅರಳದಿರಲು ಗೆಲುವು ಕಾಣದು (೨) ।।೧।।


ಲೋಕದಲ್ಲಿ ಗಂಡು ಹೆಣ್ಣಿಗಾಸರೆ 

ಆದರಿಲ್ಲಿ ನಾನು ನಿನ್ನ ಕೈ ಸೆರೆ 

ಕೂಡಿ ನಲಿವ ಆಸೆ ಮನದಿ ಕಾದಿರೆ 

ಹಿತವು ಎಲ್ಲಿ ನಾವು ಬೇರೆ ಆದರೆ (೨) ।।೨।।


ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು 

ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು 

ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ 

ಜೀವನಾ ಸಾಗದು, ಪಾವನಾ ಆಗದು ।।



Sunday, July 30, 2023

Jinke Marina (ಜಿಂಕೆ ಮರಿನಾ)

Movie: Nanda Loves Nandita (2008)

Singers: Emil, Ranjith, Karthik, Srinivas

Song link: Click Here


Jinke marina, ne jinke marina (2) ne jinke jinke marina

A muddu malle, a ne muddu muddu jalle

Bhumi mele nanilla, manasu kaige siktilla (2)

Nodtaalavalo nanne kadtaalavalo (2)

Jinke marina, ne jinke marina (2) ne jinke jinke marina ||


Kaddu kaddu nodi neenu, nidde ildang madiddenu

Eneneno madbitte neenu (2)

Yako kuntalli kurangilla, nitalli nillangilla

Yavattu hinge agilla, idu yakenta helor yarilla

Jinke marina, ne jinke marina (2) ne jinke jinke marina

Modi mado malli ninge hrudaya bittu kotte (2)

Bhumi myale nanilla, manasu kaige siktilla (2)

Nodtaalavalo nanne kadtaalavalo (2)

A muddu malle, a ne muddu muddu  muddu

A muddu muddu jalle, chalamaala malle, jalle malle, jalle nalle

Hrudaya kollo muddu malle, a ne muddu muddu jalle ||


Huttdaglinda illiganta hudugeer tantegodonalla

Belin haki bandees bitlalla

Avalu nangage huttavleno adakange madavleno

Iddalli teldangaitalla, avlna nod de na irokagtilla

Jinke marina, ne jinke marina (2) ne jinke jinke marina 

Yaru byada enu byada neenidre loka byada (2) ||


ಚಿತ್ರಗೀತೆ 


ಜಿಂಕೆ ಮರಿನಾ, ನೀ ಜಿಂಕೆ ಮರಿನಾ(೨) ನೀ ಜಿಂಕೆ ಜಿಂಕೆ ಮರಿನಾ

ಏ ಮುದ್ದು ಮಲ್ಲೇ, ಏ ನೀ ಮದ್ದು ಮುದ್ದು ಜಲ್ಲೆ 

ಭೂಮಿ ಮ್ಯಾಲೆ ನಾನಿಲ್ಲ, ಮನಸ್ಸು ಕೈಗೆ ಸಿಕ್ತಿಲ್ಲ (೨)

ನೋಡ್ತಾಳವಳೊ ನನ್ನೆ ಕಾಡ್ತಾಳವಳೊ (೨)

ಜಿಂಕೆ ಮರಿನಾ, ನೀ ಜಿಂಕೆ ಮರಿನಾ(೨) ನೀ ಜಿಂಕೆ ಜಿಂಕೆ ಮರಿನಾ 

।।ಪ ।।


ಕದ್ದು ಕದ್ದು ನೋಡಿ ನೀನು, ನಿದ್ದೆ ಇಲ್ದಂಗ್ ಮಾಡಿದ್ದೇನು 

ಏನೇನೇನೋ ಮಾಡ್ಬಿಟ್ಟೆ ನೀನೂ (೨)

ಯಾಕೊ ಕುಂತಲ್ಲಿ ಕೂರಂಗಿಲ್ಲ ನಿಂತಲ್ಲಿ ನಿಲ್ಲಂಗಿಲ್ಲ 

ಯಾವತ್ತು ಹಿಂಗೆ ಆಗಿಲ್ಲ, ಇದು ಯಾಕೇಂತ ಹೇಳೋರ್ ಯಾರಿಲ್ಲಾ 

ಜಿಂಕೆ ಮರಿನಾ, ನೀ ಜಿಂಕೆ ಮರಿನಾ(೨) ನೀ ಜಿಂಕೆ ಜಿಂಕೆ ಮರಿನಾ

ಮೋಡಿ ಮಾಡೊ ಮಲ್ಲಿ ನಿಂಗೆ ಹೃದಯ ಬಿಟ್ಟು ಕೊಟ್ಟೆ (೨)

ಭೂಮಿ ಮ್ಯಾಲೆ ನಾನಿಲ್ಲ, ಮನಸ್ಸು ಕೈಗೆ ಸಿಕ್ತಿಲ್ಲ (೨)

ನೋಡ್ತಾಳವಳೊ ನನ್ನೆ ಕಾಡ್ತಾಳವಳೊ (೨)

ಏ ಮುದ್ದು ಮಲ್ಲೇ, ಏ ನೀ ಮದ್ದು ಮುದ್ದು ಮುದ್ದು 

ಏ ನೀ ಮದ್ದು ಮುದ್ದು ಜಲ್ಲೆ, ಚಲಮಾಲ ಮಲ್ಲೇ, ಜಲ್ಲೆ ಮಲ್ಲೇ ಜಲ್ಲೆ ನಲ್ಲೇ 

ಹೃದಯ ಕೊಲ್ಲೊ ಮುದ್ದು ಮಲ್ಲೇ, ಏ ನೀ ಮದ್ದು ಮುದ್ದು ಜಲ್ಲೆ

।।೧।।


ಹುಟ್ದಾ ಗ್ಲಿಂದ ಇಲ್ಲೀಗಂಟ, ಹುಡ್ಗೀರ್ ತಂಟೇಗೋದೋನಲ್ಲ 

ಬೇಲಿನ್ ಹಾಕಿ ಬಂದಿಸ್ ಬಿಟ್ಲಲ್ಲಾ 

ಅವಳು ನಂಗಾಗೆ ಹುಟ್ಟವ್ಳೇನೊ, ಅದಕಿಂಗೆ ಮಾಡವ್ಳೇನೊ

ಇದ್ದಲ್ಲಿ ತೆಲ್ದಂಗಾಯ್ತಲ್ಲ, ಅವಳ್ನ ನೋಡ್ದೆ  ನಾ ಇರೋಕಾಗ್ತಿಲ್ಲಾ

 ಜಿಂಕೆ ಮರಿನಾ, ನೀ ಜಿಂಕೆ ಮರಿನಾ(೨) ನೀ ಜಿಂಕೆ ಜಿಂಕೆ ಮರಿನಾ 

ಯಾರೂ ಬ್ಯಾಡ, ಏನೂ ಬ್ಯಾಡ ನೀನಿದ್ರೇ ಲೋಕ ಬ್ಯಾಡ (೨) ।।೨।।