Wednesday, June 14, 2023

Hoovige Chitteya Rekkeya Katti (ಹೂವಿಗೆ ಚಿಟ್ಟೆಯ ರೆಕ್ಕೆಯ ಕಟ್ಟಿ)

Padya

Sahitya: H S Venktesh Murthy

Song link: Click Here


Hoovige chitteya rekkeya katti

Haarisuvenu mele!

Bareyuve nanu hakkiya saalali

Chandiranige ole!


Chandira maama! chakkuli maama!

Ta muttina gindi!

Bekadastide adugeya maneyali

Ninnishtada tindi!


Oduvudeko ratriya chaliyali

Obbane banolage?

Unneya kotu, kulayi koduve

Baro ne balige!


Moodala surya moodo modalu

Kalisuve na ninna!

Patravanodi mareyade bareyo

Pratyuttaravanna!


ಪದ್ಯ 


ಹೂವಿಗೆ ಚಿಟ್ಟೆಯ ರೆಕ್ಕೆಯ ಕಟ್ಟಿ 

ಹಾರಿಸುವೆನು ಮೇಲೆ!

ಬರೆಯುವೆ ನಾನು ಹಕ್ಕಿಯ ಸಾಲಲಿ 

ಚಂದಿರನಿಗೆ ಓಲೆ!


ಚಂದಿರ ಮಾಮ! ಚಕ್ಕುಲಿ ಮಾಮ!

ತಾ ಮುತ್ತಿನ ಗಿಂಡಿ!

ಬೇಕಾದಷ್ಟಿದೆ ಅಡುಗೆಯ ಮನೆಯಲಿ 

ನಿನ್ನಿಷ್ಟದ ತಿಂಡಿ!


ಓಡುವುದೇಕೋ ರಾತ್ರಿಯ ಛಳಿಯಲಿ 

ಒಬ್ಬನೆ ಬಾನೊಳಗೆ ?

ಉಣ್ಣೆಯ ಕೋಟು, ಕುಲಾಯಿ ಕೊಡುವೆ 

ಬಾರೋ ನೀ ಬಳಿಗೆ!


ಮೂಡಲ ಸೂರ್ಯ ಮೂಡೋ ಮೊದಲು 

ಕಳಿಸುವೆ ನಾ ನಿನ್ನ!

ಪತ್ರವನೋದಿ ಮರೆಯದೆ ಬರೆಯೋ 

ಪ್ರತ್ಯುತ್ತರರವನ್ನ!

                                        



Tuesday, June 13, 2023

Ninna Neravilladeye (ನಿನ್ನ ನೆರವಿಲ್ಲದೆಯೆ)

Bhavageete

Sahitya: K S Nissar Ahmed

Song link: Click Here


Everyone in their lives will experience one or the other time that there is something exceeding our knowledge (power) that will protect us. This song describes how an upset individual seeks the mercy of the "Power".


Ninna neravilladeye tolaliruve neladalle

Chetanavanuddariso deva, deva;

Hagalirulu ninnodu krupegagi kadiruve-

Ninna kandana salaho deva, deva.


Elara haadiya nambi nave tanolevante

Guri illadalediruve neleyanarasi,

Divya ambiga neenu bandenna poreyayya

Doora teerada balige nanna nadesi.


Toru shantiya tande, nanna sotiruvedege

Bhakti bhavave ulida shakti deva-

Kaadadiru prabhuvenna nondiruve saakastu,

Ninna abhayada hasta needu deva.


ಭಾವಗೀತೆ 


ನಿನ್ನ ನೆರವಿಲ್ಲದೆಯೆ ತೊಳಲಿರುವೆ ನೆಲದಲ್ಲೆ,

ಚೇತನವನುದ್ಧರಿಸೋ ದೇವ, ದೇವ;

ಹಗಲಿರುಳು ನಿನ್ನೊಂದು ಕೃಪೆಗಾಗಿ ಕಾದಿರುವೆ-

ನಿನ್ನ ಕಂದನ ಸಲಹೊ ದೇವ, ದೇವ. 


ಎಲರ ಹಾದಿಯ ನಂಬಿ ನಾವೆ ತಾನೊಲೆವಂತೆ 

ಗುರಿ ಇಲ್ಲದಲೆದಿರುವೆ ನೆಲೆಯನರಸಿ,

ದಿವ್ಯ ಅಂಬಿಗ ನೀನು ಬಂದೆನ್ನ ಪೊರೆಯಯ್ಯ 

ದೂರ ತೀರದ ಬಳಿಗೆ ನನ್ನ ನಡೆಸಿ. 


ತೋರು ಶಾಂತಿಯ ತಂದೆ, ನನ್ನ ಸೋತಿರುವೆದೆಗೆ 

ಭಕ್ತಿ ಭಾವವೆ ಉಳಿದ ಶಕ್ತಿ ದೇವ-

ಕಾಡದಿರು ಪ್ರಭುವೆನ್ನ ನೊಂದಿರುವೆ ಸಾಕಷ್ಟು,

ನಿನ್ನ ಅಭಯದ ಹಸ್ತ ನೀಡು ದೇವ. 



Monday, June 12, 2023

Bandalu Kinnara Lokada Kinnari (ಬಂದಳು ಕಿನ್ನರ ಲೋಕದ ಕಿನ್ನರಿ)

Padya

Sahitya: H S Venktesh Murthy

Song link:Click Here


Bandalu, bandalu kinnara lokada 

Kinnari ee maneyangalake!

Hege baruvudo haage mugulu nage

Aala koladinda melakke!


Nakkalu, nakkalu kinnara lokada 

Kinnari kirututiyanchalli!

Hege naguvudo haage mallige

Putani dalagala anchalli!


Kunidalu, kunidalu kinnara lokada

Kinnari teredangai mele!

Hege kuniyuvudo haage hongirana

Tottila maduvina mai mele!


ಪದ್ಯ 


ಬಂದಳು, ಬಂದಳು ಕಿನ್ನರ ಲೋಕದ 

ಕಿನ್ನರಿ ಈ ಮನೆಯಂಗಳಕೆ!

ಹೇಗೆ ಬರುವುದೋ ಹಾಗೆ ಮುಗುಳು ನಗೆ 

ಆಳ ಕೊಳದಿಂದ ಮೇಲಕ್ಕೆ!


ನಕ್ಕಳು, ನಕ್ಕಳು ಕಿನ್ನರ ಲೋಕದ 

ಕಿನ್ನರಿ ಕಿರುತುಟಿಯಂಚಲ್ಲಿ!

ಹೇಗೆ ನಗುವುದೋ ಹಾಗೆ ಮಲ್ಲಿಗೆ 

ಪುಟಾಣಿ ದಳಗಳ ಅಂಚಲ್ಲಿ!


ಕುಣಿದಳು, ಕುಣಿದಳು ಕಿನ್ನರ ಲೋಕದ 

ಕಿನ್ನರಿ ತೆರೆದಂಗೈ ಮೇಲೆ!

ಹೇಗೆ ಕುಣಿಯುವುದೊ ಹಾಗೆ ಹೊಂಗಿರಣ 

ತೊಟ್ಟಿಲ ಮಡುವಿನ ಮೈ ಮೇಲೆ!



Thursday, June 8, 2023

Haavu Andre Marigubbige (ಹಾವು ಅಂದ್ರೆ ಮರಿ ಗುಬ್ಬೀಗೆ)

Bhavageete

Sahitya: H S Venktesh Murthy

Song link: Click Here


Haavu andre marigubbige bhari digalene

Nenesikondre mai nadagatte haade haglene

Ondu saari putani gubbi ammanna kelatte

Amma amma buss buss haavu hyagiratte?


Kokkalli bennu tikkikolta amma annatte

Olle preshne haavu hyagiratte haavu hyagiratte

Haaviratte haavina haage kaage kappage

Sapura, thala thala, kendada kannu, kaddee dappage


Surige sutti jotadatte godhi bennu

Deepada haage uritiratte haavina kannu

Bhussennutte daridra haavige tumbada hotte

Idi idiyaage nungbidatte hakkiya motte


'Hakki motte nungidmele idi ideeli

Hakki mari belkallatte haavina hotteli

Hakki mari hutkallatte haavina hotteli'

Anta putani kunidadtittu ammana tolalli


Nittusiridtu amma gubbi illa chinnari

Innu ninage telidamma haavina hunnara

Haavina hotte seridmele helodinnenu?

Haavina motte agbidatte hakki mottenu!


ಭಾವಗೀತೆ 


ಹಾವು ಅಂದ್ರೆ ಮರಿ ಗುಬ್ಬೀಗೆ ಭಾರಿ ದಿಗಲೇನೆ 

ನೆನೆಸಿಕೊಂಡ್ರೆ ಮೈ ನಡಗತ್ತೆ ಹಾಡೆ ಹಗ್ಲೇನೆ 

ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ್ನ ಕೇಳತ್ತೆ 

ಅಮ್ಮ ಅಮ್ಮ ಬುಸ್ ಬುಸ್ ಹಾವು ಹ್ಯಾಗಿರತ್ತೆ ?


ಕೊಕ್ಕಲ್ಲಿ ಬೆನ್ನು ತಿಕ್ಕಿಕೊಳ್ತ ಅಮ್ಮ ಅನ್ನತ್ತೆ 

ಒಳ್ಳೇ ಪ್ರೆಶ್ನೆ ಹಾವು ಹ್ಯಾಗಿರತ್ತೆ ಹಾವು ಹ್ಯಾಗಿರತ್ತೆ

ಹಾವಿರತ್ತೆ ಹಾವಿನ ಹಾಗೆ ಕಾಗೆ ಕಪ್ಪಗೆ 

ಸಪೂರ, ಥಳ ಥಳ, ಕೆಂಡದ ಕಣ್ಣು, ಕಡ್ಡೀ ದಪ್ಪಗೆ 


ಸೂರಿಗೆ ಸುತ್ತಿ ಜೋತಾಡತ್ತೆ ಗೋಧಿ ಬೆನ್ನು 

ದೀಪದ ಹಾಗೆ ಉರಿತಿರತ್ತೆ ಹಾವಿನ ಕಣ್ಣು 

ಭುಸ್ಸೆನ್ನುತ್ತೆ ದರಿದ್ರ ಹಾವಿಗೆ ತುಂಬದ ಹೊಟ್ಟೆ 

ಇಡಿ ಇಡಿಯಾಗೆ ನುಂಗ್ಬಿಡತ್ತೆ ಹಕ್ಕಿಯ ಮೊಟ್ಟೆ 


'ಹಕ್ಕಿ ಮೊಟ್ಟೆ ನುಂಗಿದ್ಮೇಲೆ ಇಡಿ ಇಡೀಲಿ 

ಹಕ್ಕಿ ಮರಿ ಬೆಳ್ಕಳತ್ತೆ ಹಾವಿನ ಹೊಟ್ಟೇಲಿ 

ಹಕ್ಕಿ ಮರಿ ಹುಟ್ಕಳ್ಳತ್ತೆ ಹಾವಿನ ಹೊಟ್ಟೇಲಿ '

ಅಂತ ಪುಟಾಣಿ ಕುಣಿದಾಡ್ತಿತ್ತು ಅಮ್ಮನ ತೋಳಲ್ಲಿ 


ನಿಟ್ಟುಸಿರಿಡ್ತು ಅಮ್ಮ ಗುಬ್ಬಿ ಇಲ್ಲ ಚಿನ್ನಾರಿ 

ಇನ್ನೂ ನಿನಗೆ ತಿಳೀದಮ್ಮ ಹಾವಿನ ಹುನ್ನಾರ 

ಹಾವಿನ ಹೊಟ್ಟೆ ಸೇರಿದ್ಮೇಲೆ ಹೇಳೋದಿನ್ನೇನು ?

ಹಾವಿನ ಮೊಟ್ಟೆ ಆಗ್ಬಿಡತ್ತೆ ಹಕ್ಕಿ ಮೊಟ್ಟೇನು !



Wednesday, June 7, 2023

Ragi Tandiryaa Bikshake (ರಾಗಿ ತಂದಿರ್ಯಾ ಭಿಕ್ಷಕೆ)

Bhaktigeete

Purandara Dasara Keerthanegalu

Song link: Click Here


Raga: Nadanamakriye

Tala: Chaputala


Ragi tandiryaa bikshake

Ragi tandiryaa |

Yogyaragi bhogyaragi bhagyavanataragi neevu ||


Annadaanava maduvaragi

Anna chatravanittavaragi

Anyavarteya bittavaragi

Anudina bajaneya maduvaragi ||


Mathapitrugala seviparagi

Paapakaryava bittavaragi

Jatiyalli migiladavaragi

Neeti margadali kyataragi ||


Gurukarunyava padedavaragi

Guruvina marmava tilidavaragi

Guruvina padava smarisuvaragi

Parama punyava maaduvaragi ||


Aaru margava aritavaragi

Mooru margava tilidavaragi

Bhuritattva beretavaragi

Krurara sangava bittavaragi ||


Kama krodava alidavaragi

Nema nityava maaduvaragi

Aa maha padaviya sukhisuvaragi

Premadi kuni kunidaduvaragi ||


Siriramanana sada smarisuvaragi

Gurutige baahoranthavaragi

Karekare samsaarava neeguvaragi

Purandaravittalana seviparagi ||


ಭಕ್ತಿಗೀತೆ 


ರಾಗಿ ತಂದಿರ್ಯಾ ಭಿಕ್ಷಕೆ 

ರಾಗಿ ತಂದಿರ್ಯಾ ।।ಪ।।

ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು  ।।ಅನು।।


ಅನ್ನದಾನವ ಮಾಡುವರಾಗಿ 

ಅನ್ನ ಛತ್ರವನಿಟ್ಟವರಾಗಿ 

ಅನ್ಯವಾರ್ತೆಯ ಬಿಟ್ಟವರಾಗಿ 

ಅನುದಿನ ಭಜನೆಯ ಮಾಡುವರಾಗಿ ।।೧।।


ಮಾತಾಪಿತೃಗಳ ಸೇವಿಪರಾಗಿ 

ಪಾಪಕಾರ್ಯವ ಬಿಟ್ಟವರಾಗಿ 

ಜಾತಿಯಲ್ಲಿ ಮಿಗಿಲಾದವರಾಗಿ 

ನೀತಿ ಮಾರ್ಗದಲಿ ಖ್ಯಾತರಾಗಿ ।।೨।।


ಗುರುಕಾರುಣ್ಯವ ಪಡೆದವರಾಗಿ 

ಗುರುವಿನ ಮರ್ಮವ ತಿಳಿದವರಾಗಿ 

ಗುರುವಿನ ಪಾದವ ಸ್ಮರಿಸುವರಾಗಿ 

ಪರಮ ಪುಣ್ಯವ ಮಾಡುವರಾಗಿ ।।೩।।


ಆರು ಮಾರ್ಗವ ಅರಿತವರಾಗಿ 

ಮೂರು ಮಾರ್ಗವ ತಿಳಿದವರಾಗಿ 

ಭೂರಿತತ್ತ್ವ ಬೆರೆತವರಾಗಿ 

ಕ್ರೂರರ ಸಂಗವ ಬಿಟ್ಟವರಾಗಿ ।।೪।।


ಕಾಮ ಕ್ರೋಧವ ಅಳಿದವರಾಗಿ 

ನೇಮ ನಿತ್ಯವ ಮಾಡುವರಾಗಿ 

ಆ ಮಹಾ ಪದವಿಯ ಸುಖಿಸುವರಾಗಿ 

ಪ್ರೇಮದಿ ಕುಣಿ ಕುಣಿದಾಡುವರಾಗಿ ।।೫।।


ಸಿರಿರಮಣನ ಸದಾ ಸ್ಮರಿಸುವರಾಗಿ 

ಗುರುತಿಗೆ ಬಾಹೋರಂಥವರಾಗಿ 

ಕರೆಕರೆ ಸಂಸಾರವ ನೀಗುವರಾಗಿ 

ಪುರಂದರ ವಿಠ್ಠಲನ ಸೇವಿಪರಾಗಿ ।।೬।।                         ಶ್ರೀ            



Tuesday, June 6, 2023

Karunada Tayi Sada Chinmayi (ಕರುನಾಡ ತಾಯಿ ಸದಾ ಚಿನ್ಮಯಿ)

Movie: Nanu Nanna Hendti (1985)

Singer: SPB

Song link: Click Here


Karunada tayi sada chinmayi (2)

Ee punya bhumi namma devalaya

Premalaya ee devalaya

Karunada tayi sada chinmayi (2) ||


Veera dheeraraalida nadu ninnadu

Shanti mantra paadida beedu ninnadu

Varasadhu santara nele ninnadu

Mahashilpakaarara kale ninnadu

Sangeeta sahitya sele ninnadu ||


Jeeva tanti meetuva sneha nammadu

Ella onde ennuva oudarya nammadu

Soundarya seemeya gudi nammadu

Madhurya tumbida nudi nammadu

Kasturi kannadada savi nammadu

Roma romagalu nintavu taye

Cheluva kannadadolenidu maye

Mugile kadale sidile keliri (2)

Tanuvu manavu dhanavu ella kannada (2) aa..aa

Karunada tayi sada chinmayi ||


ಚಿತ್ರಗೀತೆ 


ಕರುನಾಡ ತಾಯಿ ಸದಾ ಚಿನ್ಮಯಿ (೨)

ಈ ಪುಣ್ಯ ಭೂಮಿ ನಮ್ಮ ದೇವಾಲಯ 

ಪ್ರೇಮಾಲಯ ಈ ದೇವಾಲಯ 

ಕರುನಾಡ ತಾಯಿ ಸದಾ ಚಿನ್ಮಯಿ (೨) ।।ಪ।।


ವೀರ ಧೀರರಾಳಿದ ನಾಡು ನಿನ್ನದು 

ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು 

ವರಸಾಧು ಸಂತರ ನೆಲೆ ನಿನ್ನದು 

ಮಹಾ ಶಿಲ್ಪಕಾರರ ಕಲೆ ನಿನ್ನದು 

ಸಂಗೀತ ಸಾಹಿತ್ಯ ಸೆಲೆ ನಿನ್ನದು ।।೧।।


ಜೀವ ತಂತಿ ಮೀಟುವ ಸ್ನೇಹ ನಮ್ಮದು 

ಎಲ್ಲ ಒಂದೆ ಎನ್ನುವ ಔದಾರ್ಯ ನಮ್ಮದು 

ಸೌಂದರ್ಯ ಸೀಮೆಯ ಗುಡಿ ನಮ್ಮದು 

ಮಾಧುರ್ಯ ತುಂಬಿದ ನುಡಿ ನಮ್ಮದು 

ಕಸ್ತೂರಿ ಕನ್ನಡದ ಸವಿ ನಮ್ಮದು 

ರೋಮ ರೋಮಗಳು ನಿಂತವು ತಾಯೆ 

ಚೆಲುವ ಕನ್ನಡದೊಳೇನಿದು ಮಾಯೆ 

ಮುಗಿಲೆ ಕಡಲೆ ಸಿಡಿಲೆ ಕೇಳಿರಿ (೨)

ತನುವು ಮನವು ಧನವು ಎಲ್ಲ ಕನ್ನಡ (೨) ಆ ..ಆ .. 

ಕರುನಾಡ ತಾಯಿ ಸದಾ ಚಿನ್ಮಯಿ (೨)





Monday, June 5, 2023

Jenina Holeyo (ಜೇನಿನ ಹೊಳೆಯೋ)

Movie: Chalisuva Modagalu (1982)

Singer: Dr. Rajkumar

Song link: Click Here


Jenina holeyo haalina maleyo

Sudheyo kannada savinudiyo

Vaaniya veeneya swara madhuryavo

Sumadhura sundara nudiyo..aha.. ||


Kavi udi kogile haadida haage

DaPaDa, RiSaRee, GaPaPaDaSaRiDaSa

Savinudi tannane gaaliya haage

Kavi udi kogile haadida haage

Savinudi tannane gaaliya haage

Olavina maatugalaadutiralu, mallige hoogalu aralida haage

Makkalu nudidare sakkareyante

Akkare nudigalu muttugalante

Preetiya, neetiya, maatugalella

Sumadhura sundara nudiyo.. aha.. ||


Kumaravyasana kavyada chanda, kavi sarvajnara padagala anda

Daasaru sharanaru, naadige needida, bhaktiya geetegala paramaananda

Rannanu rachisida honnina nudiyu, pampanu haadida chinnada nudiyu

Kannada tayiyu needida varavu, Sumadhura sundara nudiyo..aha.. ||


ಚಿತ್ರಗೀತೆ 


ಜೇನಿನ ಹೊಳೆಯೋ ಹಾಲಿನ ಮಳೆಯೋ 

ಸುಧೆಯೋ ಕನ್ನಡ ಸವಿನುಡಿಯೋ 

ವಾಣಿಯ ವೀಣೆಯ ಸ್ವರ ಮಾಧುರ್ಯವೋ 

ಸುಮಧುರ ಸುಂದರ ನುಡಿಯೋ.. ಆಹಾ .. ।।ಪ।।


ಕವಿ ನುಡಿ ಕೋಗಿಲೆ ಹಾಡಿದ ಹಾಗೇ 

ದಪದ, ರಿಸರೀ, ಗಾಪಪದಸರಿದಸಾ 

ಸವಿನುಡಿ ತಣ್ಣನೇ ಗಾಳಿಯ ಹಾಗೇ 

ಕವಿ ನುಡಿ ಕೋಗಿಲೆ ಹಾಡಿದ ಹಾಗೇ 

ಸವಿನುಡಿ ತಣ್ಣನೇ ಗಾಳಿಯ ಹಾಗೇ 

ಒಲವಿನ ಮಾತುಗಳಾಡುತಿರಲೂ, ಮಲ್ಲಿಗೆ ಹೂಗಳು ಅರಳಿದ ಹಾಗೇ 

ಮಕ್ಕಳು ನುಡಿದರೆ ಸಕ್ಕರೆಯಂತೆ, ಅಕ್ಕರೆ ನುಡಿಗಳು ಮುತ್ತುಗಳಂತೆ 

ಪ್ರೀತಿಯ ನೀತಿಯ ಮಾತುಗಳೆಲ್ಲಾ 

ಸುಮಧುರ ಸುಂದರ ನುಡಿಯೋ ..ಆಹಾ .. ।।೧।।


ಕುಮಾರವ್ಯಾಸನ ಕಾವ್ಯದ ಚಂದ, ಕವಿ ಸರ್ವಜ್ಞನ ಪದಗಳ ಅಂದ 

ದಾಸರು ಶರಣರು ನಾಡಿಗೆ ನೀಡಿದ ಭಕ್ತಿಯ ಗೀತೆಗಳ ಪರಮಾನಂದ 

ರನ್ನನು ರಚಿಸಿದ ಹೊನ್ನಿನ ನುಡಿಯು, ಪಂಪನು ಹಾಡಿದ ಚಿನ್ನದ ನುಡಿಯು 

ಕನ್ನಡ ತಾಯಿಯು ನೀಡಿದ ವರವು, ಸುಮಧುರ ಸುಂದರ ನುಡಿಯೋ ..ಆಹಾ ..।।೨।।