Monday, May 8, 2023

Hattu Makkalu (ಹತ್ತು ಮಕ್ಕಳು)

Padya

Sahitya: G P Rajaratnam


Putta makkalu hattu

Gantu moote hottu

Odi hattalu dibba

Jari biddavanobba


Ulidavarombatu mandi

Hindake bidda chandi

Hegalige biddu gantu

Mundake nadedavarentu


Entaralobba kunta

Kalu murida tunta

Mundake hodavarelu

Obbana kacchitu chelu


Chelu bantu chelu

Eddu peri keelu

Odalara bora

Odidavararu


Kambi kittavararu

Kalige gajina chooru

Kulitanobba haida

Nadedu hodavaraidu


Male hole bantu

Makkala naduve nintu

Eeche kade saku

Aache kade naku


Mundake halla joke

Adanu haarabeku

Haaralara puttu

Mooru mandi gatti


Hidiyalendu karadi

Baleyittu haradi

Biddanadake garuda

Ulida makkaleradu


Ibbaralobba sustu

Aagi tinda gastu

Ulidavanobba ondu

Konevanobba ondu


Konevanobba ondu

Kambada marege tandu

"Innalestu tayi?"

"Dodda kumbalakayi!"


ಪದ್ಯ 


ಪುಟ್ಟ ಮಕ್ಕಳು ಹತ್ತು 

ಗಂಟು ಮೂಟೆ ಹೊತ್ತು 

ಓಡಿ ಹತ್ತಲು ದಿಬ್ಬ 

ಜಾರಿ ಬಿದ್ದವನೊಬ್ಬ 


ಉಳಿದವರೊಂಬತು ಮಂದಿ 

ಹಿಂದಕೆ ಬಿದ್ದ ಚಂದಿ 

ಹೆಗಲಿಗೆ ಬಿದ್ದು ಗಂಟು 

ಮುಂದಕೆ ನಡೆದವರೆಂಟು 


ಎಂಟರಲೊಬ್ಬ ಕುಂಟ 

ಕಾಲು ಮುರಿದ ತುಂಟ 

ಮುಂದಕೆ ಹೋದವರೇಳು 

ಒಬ್ಬನ ಕಚ್ಚಿತು ಚೇಳು 


ಚೇಳು ಬಂತು ಚೇಳು 

ಎದ್ದು ಪೇರಿ ಕೀಳು 

ಓಡಲಾರ ಬೋರ 

ಓಡಿದವರಾರು 


ಕಂಬಿ ಕಿತ್ತವರಾರು 

ಕಾಲಿಗೆ ಗಾಜಿನ ಚೂರು 

ಕುಳಿತನೊಬ್ಬ ಹೈದ 

ನಡೆದು ಹೊದವರೈದು 


ಮಳೆ ಹೊಳೆ ಬಂತು 

ಮಕ್ಕಳ ನಡುವೆ ನಿಂತು 

ಈಚೆ ಕಡೆ ಸಾಕು 

ಆಚೆ ಕಡೆ ನಾಕು 


ಮುಂದಕೆ ಹಳ್ಳ ಜೋಕೆ 

ಅದನು ಹಾರಬೇಕು 

ಹಾರಲಾರ ಪುಟ್ಟು 

ಮೂರು ಮಂದಿ ಗಟ್ಟಿ 


ಹಿಡಿಯಲೆಂದು ಕರಡಿ 

ಬಲೆಯಿತ್ತು ಹರಡಿ 

ಬಿದ್ದನದಕೆ ಗರುಡ 

ಉಳಿದ ಮಕ್ಕಳೆರಡು 


ಇಬ್ಬರಲೊಬ್ಬ ಸುಸ್ತು 

ಆಗಿ ತಿಂದ ಗಸ್ತು 

ಉಳಿದವನೊಬ್ಬ ಒಂದು 

ಕೊನೇವನೊಬ್ಬ ಒಂದು 


ಕೊನೇವನೊಬ್ಬ ಒಂದು 

ಕಂಬದ ಮರೆಗೆ ತಂದು 

"ಇನ್ನಲೆಷ್ಟು ತಾಯಿ ?"

"ದೊಡ್ಡ ಕುಂಬಳಕಾಯಿ !". 

               



Varshake Aare Aaru Ruthu (ವರ್ಷಕೆ ಆರೇ ಆರು ಋತು)

Padya

Sahitya: G P Rajaratnam


Chaitra vaishakha vasanta ruthu

Jyeshta aashdhavu greeshma ruthu

Shravana bhadrapada varsha ruthu

Aashweeja kartika sharadrutu


Magashira pushyavu hemanta

Magha phalgunagalu shishira ruthu

Tingalu eradake ondu ruthu

Varshake aare aaru ruthu.


ಪದ್ಯ 


ಚೈತ್ರ ವೈಶಾಖ ವಸಂತ ಋತು 

ಜ್ಯೇಷ್ಠ ಆಷಾಢವು ಗ್ರೀಷ್ಮ ಋತು 

ಶ್ರಾವಣ ಭಾದ್ರಪದ ವರ್ಷ ಋತು 

ಆಶ್ವೀಜ ಕಾರ್ತಿಕ ಶರದೃತು 


ಮಾರ್ಗಶಿರ ಪುಷ್ಯವು ಹೇಮಂತ 

ಮಾಘ ಫಾಲ್ಗುಣಗಳು ಶಿಶಿರಋತು

ತಿಂಗಳು ಎರಡಕೆ ಒಂದು ಋತು 

ವರ್ಷಕೆ ಆರೇ ಆರು ಋತು.  



Kunta (ಕುಂಟ)

Padya

Sahitya: G P Rajaratnam


Kutuku! kutuku! kalanittu 

Kunta nadedanu

Gutuku! gutuku! saddumadi

Neeru kudidanu


Kudida neeralishtu bittu

Kunta kaalige

Kuntanantisidda hasiya

Marada kaalige


Neeru bidda hasiya maravu

Chigurikonditu!

Chiguri hoovu hannu kayi

Bittukonditu!


Hoova kittu sikkisidanu

Kunta taleyali!

Hanna kittu serisidanu

Baya biladali!

Kuntanaaga beduvudanu

Bittubittanu

Hoova mudidu hanna kadidu

Trupti pattanu.


ಪದ್ಯ 


ಕುಟುಕು! ಕುಟುಕು! ಕಾಲನಿಟ್ಟು 

ಕುಂಟ ನಡೆದನು 

ಗುಟುಕು! ಗುಟುಕು! ಸದ್ದು ಮಾಡಿ 

ನೀರು ಕುಡಿದನು 


ಕುಡಿದ ನೀರಲಿಷ್ಟು ಬಿತ್ತು 

ಕುಂಟ ಕಾಲಿಗೆ 

ಕುಂಟನಂಟಿಸಿದ್ದ ಹಸಿಯ 

ಮರದ ಕಾಲಿಗೆ 


ನೀರು ಬಿದ್ದ ಹಸಿಯ ಮರವು 

ಚಿಗುರಿಕೊಂಡಿತು!

ಚಿಗುರಿ ಹೂವು ಹಣ್ಣು ಕಾಯಿ 

ಬಿಟ್ಟುಕೊಂಡಿತು!


ಹೂವ ಕಿತ್ತು ಸಿಕ್ಕಿಸಿದನು 

ಕುಂಟ ತಲೆಯಲಿ!

ಹಣ್ಣ ಕಿತ್ತು ಸೇರಿಸಿದನು 

ಬಾಯ ಬಿಲದಲಿ!

ಕುಂಟನಾಗ ಬೇಡುವುದನು 

ಬಿಟ್ಟು ಬಿಟ್ಟನು 

ಹೂವ ಮುಡಿದು ಹಣ್ಣ ಕಡಿದು 

ತೃಪ್ತಿ ಪಟ್ಟನು. 




Sunday, May 7, 2023

Suryodaya (ಸೂರ್ಯೋದಯ)

Padya

Sahitya: Panje Mangesharayaru


Kempina okuli snanadali,

Impina kogile ganadali,

Banina gaddige eridanu,

Bhanuvu hondale toridanu.


Aa dinanathana moorutige

Aadavu hoogalu aaratige;

Koliyu kahaleya uudidudu,

Galiyu rayasa odidudu.


ಪದ್ಯ 


ಕೆಂಪಿನ ಓಕುಳಿ ಸ್ನಾನದಲಿ,

ಇಂಪಿನ ಕೋಗಿಲೆ ಗಾನದಲಿ,

ಬಾನಿನ ಗದ್ದಿಗೆ ಏರಿದನು,

ಭಾನುವು ಹೊಂದಲೆ ತೋರಿದನು. 


ಆ ದಿನನಾಥನ ಮೂರುತಿಗೆ 

ಆದವು ಹೂಗಳು ಆರತಿಗೆ;

ಕೋಳಿಯು ಕಹಳೆಯ ಊದಿದುದು,

ಗಾಳಿಯು ರಾಯಸ ಓದಿದುದು.  



Aadina Maree! (ಆಡಿನಾ ಮರೀ)

Padya

Sahitya: Panje Mangesharayaru


Aadina maree, aada baarele!

Oda bedele, nodi nannanu!


Arali eleyanuu, halasineleyanuu,

Huruli kadaleya, kalasi koduvenu.


Matanadade, nanna nodade,

Etakhoguve? aadina maguu!


ಪದ್ಯ 


ಆಡಿನಾ ಮರೀ, ಆಡ ಬಾರೆಲೆ!

ಓಡ ಬೇಡೆಲೆ, ನೋಡಿ ನನ್ನನು!


ಅರಳಿ ಎಲೆಯನೂ, ಹಲಸಿನೆಲೆಯನೂ,

ಹುರುಳಿ ಕಡಲೆಯಾ, ಕಲಸಿ ಕೊಡುವೆನು. 


ಮಾತನಾಡದೇ, ನನ್ನ ನೋಡದೆ,

ಏತಕ್ಹೋಗುವೆ ? ಆಡಿನಾ ಮಗೂ!



Chandranannu Ta! (ಚಂದ್ರನನ್ನು ತಾ!)

Padya

Sahitya: Panje Mangesharayaru


Tarammayya, tandu torammayya!

Doorada banolu erida chandrana

Tarammayya tandu torammayya!


Hariyuva neerina pariya banina mele

Irulalli bellage aralida hoovannu - tarammayya


Tannage mosaralli benne muddeya hage

Kannige kanuva hunnime chandrana - tarammayya


Holeyuva banina taladalli mooduta,

Muluguva belliya galigeya battalannu - tarammayya


Ranganathana mane angaladali iddu,

Kangolisuva chelu tingala deevige - tarammayya.


ಪದ್ಯ 


ತಾರಮ್ಮಯ್ಯ, ತಂದು ತೋರಮ್ಮಯ್ಯ!

ದೂರದ ಬಾನೊಳು ಏರಿದ ಚಂದ್ರನ 

ತಾರಮ್ಮಯ್ಯ ತಂದು ತೋರಮ್ಮಯ್ಯ!


ಹರಿಯುವ ನೀರಿನ ಪರಿಯ ಬಾನಿನ ಮೇಲೆ 

ಇರುಳಲ್ಲಿ ಬೆಳ್ಳಗೆ ಅರಳಿದ ಹೂವನ್ನು - ತಾರಮ್ಮಯ್ಯ 


ತಣ್ಣಗೆ ಮೊಸರಲ್ಲಿ ಬೆಣ್ಣೆ ಮುದ್ದೆಯ ಹಾಗೆ 

ಕಣ್ಣಿಗೆ ಕಾಣುವ ಹುಣ್ಣಿಮೆ ಚಂದ್ರನ - ತಾರಮ್ಮಯ್ಯ 


ಹೊಳೆಯುವ ಬಾನಿನ ತಳದಲ್ಲಿ ಮೂಡುತ,

ಮುಳುಗುವ ಬೆಳ್ಳಿಯ ಗಳಿಗೆಯ ಬಟ್ಟಲನ್ನು - ತಾರಮ್ಮಯ್ಯ 


ರಂಗನಾಥನ ಮನೆ ಅಂಗಳದಲಿ ಇದ್ದು,

ಕಂಗೊಳಿಸುವ ಚೆಲು ತಿಂಗಳ ದೀವಿಗೆ - ತಾರಮ್ಮಯ್ಯ. 



Monday, May 1, 2023

Ellellu Sangeetave (ಎಲ್ಲೆಲ್ಲು ಸಂಗೀತವೇ)

Movie: Maleya Maruta (1986)

Singer: K J Yesudas

Song link: Click Here


Ellellu sangeetave (2) ellellu soundaryave (2)

Keluva kiviyiralu noduva kanniralu

Ellellu sangeeta NiSa NiSaRiGa SaRiGa SaRiGa 

MaPaDaMa NiSa DaNiDaNi SaNi NiSaRiGa MaGaSaNi

NiDaDa DaMaMa MaGaGa GaSaSa ellellu sangeetave .. ||


Sandhyeau bandaga aagasa anda

Aa ushae naguvaga lokave chenda

SaRiGa SaRiGa MaMa GaaGaMaaMaPaDa MaPaDa

Da MaPaDaNi MaaMa PaaPa DaDa PaDaNiNi PaDaNi

DaaDaNeeNi SaNi SaRiGa SaRiGa SaNi DaaDa MaaMa GaGaSa

Sandhyeau bandaga aagasa anda

Aa Ushae naguvaga lokave chenda

Balukuva lateyinda aralida hoovinda

Aa suma chelluva parimaladinda ellellu soundaryave..||


Hariyuva neerali kala kalaravavu 

Kogile koralina sumadhura swaravu (2)

Bhramarada jhenkara munigala omkara

Ee jaga tumbide madhuryadinda ellellu sangeetave..

Sangeeta endigu suragangeyante

Sangeeta endigu ravikantiyante.. aa.. (2)

Bisilali tangali hosa jeeva tandante

aa daiva sudheyinda paramarthavante ||Repeat Pallavi||


ಚಿತ್ರಗೀತೆ 


ಎಲ್ಲೆಲ್ಲು ಸಂಗೀತವೇ (೨) ಎಲ್ಲೆಲ್ಲು ಸೌಂದರ್ಯವೇ (೨)

ಕೇಳುವ ಕಿವಿಯಿರಲು ನೋಡುವ ಕಣ್ಣಿರಲು 

ಎಲ್ಲೆಲ್ಲು ಸಂಗೀತ ನಿಸ ನಿಸರಿಗ ಸರಿಗ ಸರಿಗ 

ಮಪದಮ ನಿಸ ದನಿದನಿ ಸನಿ ನಿಸರಿಗ ಮಗಸನಿ 

ನಿದದ ದಮಮ ಮಗಗ ಗಸಸ ಎಲ್ಲೆಲ್ಲು ಸಂಗೀತವೇ ।।ಪ।।


ಸಂಧ್ಯೆಯು ಬಂದಾಗ ಆಗಸ ಅಂದಾ 

ಆ ಉಷೆ ನಗುವಾಗ ಲೋಕವೆ ಚೆಂದಾ .. 

ಸರಿಗ ಸರಿಗ ಮಮ ಗಾಗಮಾಮಪದ ಮಪದ 

ದ ಮಪದನಿ ಮಾಮ ಪಾಪ ದದ ಪದನಿನಿ ಪದನಿ 

ದಾದನೀನಿ ಸನಿ ಸರಿಗ ಸರಿಗ ಸನಿ ದಾದ ಮಾಮ ಗಗಸ 

ಸಂಧ್ಯೆಯು ಬಂದಾಗ ಆಗಸ ಅಂದಾ 

ಆ ಉಷೆ ನಗುವಾಗ ಲೋಕವೆ ಚೆಂದಾ.. 

ಬಳುಕುವ ಲತೆಯಿಂದ ಅರಳಿದ ಹೂವಿಂದ 

ಆ ಸುಮ ಚೆಲ್ಲುವ ಪರಿಮಳದಿಂದ ಎಲ್ಲೆಲ್ಲು ಸೌಂದರ್ಯವೇ .. ।।೧।।


ಹರಿಯುವ ನೀರಲಿ ಕಲ ಕಲರವವು 

ಕೋಗಿಲೆ ಕೊರಳಿನ ಸುಮಧುರ ಸ್ವರವೂ (೨)

ಭ್ರಮರದ ಝೇಂಕಾರ ಮುನಿಗಳ ಓಂಕಾರ 

ಈ ಜಗ ತುಂಬಿದೆ ಮಾಧುರ್ಯದಿಂದಾ ಎಲ್ಲೆಲ್ಲು ಸಂಗೀತವೇ .. 

ಸಂಗೀತ ಎಂದಿಗೂ ಸುರಗಂಗೆಯಂತೇ .. 

ಸಂಗೀತ ಎಂದಿಗೂ ರವಿಕಾಂತಿಯಂತೇ ..   (೨)

ಬಿಸಿಲಲಿ ತಂಗಾಳಿ ಹೊಸ ಜೀವ ತಂದಂತೆ 

ಆ ದೈವ ಸುಧೆಯಿಂದ ಪರಮಾರ್ಥವಂತೆ ।।೨।।