Sunday, May 7, 2023

Chandranannu Ta! (ಚಂದ್ರನನ್ನು ತಾ!)

Padya

Sahitya: Panje Mangesharayaru


Tarammayya, tandu torammayya!

Doorada banolu erida chandrana

Tarammayya tandu torammayya!


Hariyuva neerina pariya banina mele

Irulalli bellage aralida hoovannu - tarammayya


Tannage mosaralli benne muddeya hage

Kannige kanuva hunnime chandrana - tarammayya


Holeyuva banina taladalli mooduta,

Muluguva belliya galigeya battalannu - tarammayya


Ranganathana mane angaladali iddu,

Kangolisuva chelu tingala deevige - tarammayya.


ಪದ್ಯ 


ತಾರಮ್ಮಯ್ಯ, ತಂದು ತೋರಮ್ಮಯ್ಯ!

ದೂರದ ಬಾನೊಳು ಏರಿದ ಚಂದ್ರನ 

ತಾರಮ್ಮಯ್ಯ ತಂದು ತೋರಮ್ಮಯ್ಯ!


ಹರಿಯುವ ನೀರಿನ ಪರಿಯ ಬಾನಿನ ಮೇಲೆ 

ಇರುಳಲ್ಲಿ ಬೆಳ್ಳಗೆ ಅರಳಿದ ಹೂವನ್ನು - ತಾರಮ್ಮಯ್ಯ 


ತಣ್ಣಗೆ ಮೊಸರಲ್ಲಿ ಬೆಣ್ಣೆ ಮುದ್ದೆಯ ಹಾಗೆ 

ಕಣ್ಣಿಗೆ ಕಾಣುವ ಹುಣ್ಣಿಮೆ ಚಂದ್ರನ - ತಾರಮ್ಮಯ್ಯ 


ಹೊಳೆಯುವ ಬಾನಿನ ತಳದಲ್ಲಿ ಮೂಡುತ,

ಮುಳುಗುವ ಬೆಳ್ಳಿಯ ಗಳಿಗೆಯ ಬಟ್ಟಲನ್ನು - ತಾರಮ್ಮಯ್ಯ 


ರಂಗನಾಥನ ಮನೆ ಅಂಗಳದಲಿ ಇದ್ದು,

ಕಂಗೊಳಿಸುವ ಚೆಲು ತಿಂಗಳ ದೀವಿಗೆ - ತಾರಮ್ಮಯ್ಯ. 



No comments:

Post a Comment