Padya
Sahitya: G P Rajaratnam
Kutuku! kutuku! kalanittu
Kunta nadedanu
Gutuku! gutuku! saddumadi
Neeru kudidanu
Kudida neeralishtu bittu
Kunta kaalige
Kuntanantisidda hasiya
Marada kaalige
Neeru bidda hasiya maravu
Chigurikonditu!
Chiguri hoovu hannu kayi
Bittukonditu!
Hoova kittu sikkisidanu
Kunta taleyali!
Hanna kittu serisidanu
Baya biladali!
Kuntanaaga beduvudanu
Bittubittanu
Hoova mudidu hanna kadidu
Trupti pattanu.
ಪದ್ಯ
ಕುಟುಕು! ಕುಟುಕು! ಕಾಲನಿಟ್ಟು
ಕುಂಟ ನಡೆದನು
ಗುಟುಕು! ಗುಟುಕು! ಸದ್ದು ಮಾಡಿ
ನೀರು ಕುಡಿದನು
ಕುಡಿದ ನೀರಲಿಷ್ಟು ಬಿತ್ತು
ಕುಂಟ ಕಾಲಿಗೆ
ಕುಂಟನಂಟಿಸಿದ್ದ ಹಸಿಯ
ಮರದ ಕಾಲಿಗೆ
ನೀರು ಬಿದ್ದ ಹಸಿಯ ಮರವು
ಚಿಗುರಿಕೊಂಡಿತು!
ಚಿಗುರಿ ಹೂವು ಹಣ್ಣು ಕಾಯಿ
ಬಿಟ್ಟುಕೊಂಡಿತು!
ಹೂವ ಕಿತ್ತು ಸಿಕ್ಕಿಸಿದನು
ಕುಂಟ ತಲೆಯಲಿ!
ಹಣ್ಣ ಕಿತ್ತು ಸೇರಿಸಿದನು
ಬಾಯ ಬಿಲದಲಿ!
ಕುಂಟನಾಗ ಬೇಡುವುದನು
ಬಿಟ್ಟು ಬಿಟ್ಟನು
ಹೂವ ಮುಡಿದು ಹಣ್ಣ ಕಡಿದು
ತೃಪ್ತಿ ಪಟ್ಟನು.

No comments:
Post a Comment