Saturday, April 8, 2023

Nee Mudida Mallige Hoovina Male (ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ)

Movie: Gandhinagara (1968)

Singers: P B Srinivas, P Susheela

Song link: Click Here


Nee mudida mallige hoovina male

Ninagende bareda premada ole

Ada odalu harivudu jenina hole ||


Na odide olavinoleyanu

Manasare na muttanittenu

Heralerisi ninna nerala kandenu ||


Ninnaseya notada katheyenu

Sere meerada youvvana jateyenu

Beladingala hunnime maatenu ||


Aa hunnime matanaditu

Nana kannali maneya maditu

Sarituguva belakali koodi aaditu ||


Na mudida mallige hoovina male

Nanagende bareda premada oole


Madhumasadi haaduva kogileya

Aakashade tuguva sihi nudiya

Anuragada aleyali teli hoguve ||


Teladuva doni neenade

Nee noduva notake kannade

Adu torida oorige sagi hoguve ||


ಚಿತ್ರಗೀತೆ 


ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ 

ನಿನಗೆಂದೇ ಬರೆದ ಪ್ರೇಮದ ಓಲೆ 

ಅದ ಓದಲು ಹರಿವುದು ಜೇನಿನ ಹೊಳೆ ।।


ನಾ ಓದಿದೆ ಒಲವಿನೋಲೆಯನು 

ಮನಸಾರೆ ನಾ ಮುತ್ತ ನಿತ್ತೆನು 

ಹೆರಳೇರಿಸಿ ನಿನ್ನ ನೆರಳ ಕಂಡೆನು  ।।


ನಿನ್ನಾಸೆಯ ನೋಟದ ಕಥೆಯೇನು  

ಸೆರೆಮೀರದ ಯೌವ್ವನ ಜತೆಯೇನು  

ಬೆಳದಿಂಗಳ ಹುಣ್ಣಿಮೆ ಮಾತೇನು ।।


ಆ ಹುಣ್ಣಿಮೆ ಮಾತನಾಡಿತು 

ನನ ಕಣ್ಣಲಿ ಮನೆಯ ಮಾಡಿತು 

ಸರಿತೂಗುವ ಬೆಳಕಲಿ ಕೂಡಿ ಆಡಿತು  ।।


ನಾ ಮುಡಿದಾ ಮಲ್ಲಿಗೆ ಹೂವಿನ ಮಾಲೆ 

ನನಗೆಂದೇ ಬರೆದ ಪ್ರೇಮದ ಓಲೆ ।।


ಮಧುಮಾಸದಿ ಹಾಡುವ ಕೋಗಿಲೆಯ 

ಆಕಾಶದೆ ತೂಗುವ ಸಿಹಿ ನುಡಿಯ 

ಅನುರಾಗದ ಅಲೆಯಲಿ ತೇಲಿ ಹೋಗುವೆ ।।


ತೇಲಾಡುವ ದೋಣಿ ನೀನಾದೆ 

ನೀ ನೋಡುವ ನೋಟಕೆ ಕಣ್ಣಾದೆ 

ಅದು ತೋರಿದ ಊರಿಗೆ ಸಾಗಿ ಹೋಗುವೆ ।।





Friday, April 7, 2023

Nee Nadeva Haadiyalli (ನೀ ನಡೆವ ಹಾದಿಯಲ್ಲಿ)

Movie: Bangarada Hoovu(1967)

Singer: P Susheela

Song link: Click Here


Nee nadeva haadiyalli, nage hoovu baadadirali

Ee bala buttiyali sihi palu ninagirali

Kahi ella nanagirali ||


Sahane meeri kanada kaiyyi, maaditenu muyyige muyyi

Yaru idake honeye illa, irali nanage nindaneyella

Vidhiyu hoodi ola sanchannu, odeyitenna honganasannu

Noova nungi baluve nanu, sukhavu ninna kaaditenu

Ee bege neegali, manasu haguravagali ||


Eneno bayasitu manasu, kai sere ella sogasu

Kai jare ella kanasu, aase maretare lesu

Nanna kanna neerinalli ninna bimba kanutirali

Ee balu ninte irali ninna nenapu chiravagirali

Ee bege neegali, manasu haguravagali ||


ಚಿತ್ರಗೀತೆ 


ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ 

ಈ ಬಾಳ ಬುತ್ತಿಯಲಿ ಸಿಹಿ ಪಾಲು ನಿನಗಿರಲೀ  

ಕಹಿ ಎಲ್ಲ ನನಗಿರಲೀ  ।।ಪ।। 


ಸಹನೆ ಮೀರಿ ಕಾಣದ ಕೈಯ್ಯಿ, ಮಾಡಿತೇನು ಮುಯ್ಯಿಗೆ ಮುಯ್ಯಿ 

ಯಾರು ಇದಕೆ ಹೊಣೆಯೇ ಇಲ್ಲ, ಇರಲಿ ನನಗೆ ನಿಂದನೆಯೆಲ್ಲಾ 

ವಿಧಿಯು ಹೂಡಿ ಒಳ ಸಂಚನ್ನು, ಒಡೆಯಿತೆನ್ನ ಹೊಂಗನಸನ್ನು 

ನೋವ ನುಂಗಿ ಬಾಳುವೆ ನಾನು, ಸುಖವು ನಿನ್ನ ಕಾಡಿತೇನು 

ಈ ಬೇಗೆ ನೀಗಲಿ, ಮನಸು ಹಗುರವಾಗಲಿ ।।೧।।


ಏನೇನೋ ಬಯಸಿತು ಮನಸು, ಕೈ ಸೇರೆ ಎಲ್ಲಾ ಸೊಗಸು 

ಕೈ ಜಾರೆ ಎಲ್ಲಾ ಕನಸು, ಆಸೆ ಮರೆತರೇ ಲೇಸು 

ನನ್ನ ಕಣ್ಣ ನೀರಿನಲ್ಲಿ, ನಿನ್ನ ಬಿಂಬ ಕಾಣುತಿರಲಿ 

ಈ ಬಾಳು ನಿಂತೇ ಇರಲಿ, ನಿನ್ನ ನೆನಪು ಚಿರವಾಗಿರಲಿ 

ಈ ಬೇಗೆ ನೀಗಲಿ, ಮನಸು ಹಗುರವಾಗಲಿ ।।೨।।



Thursday, April 6, 2023

Araluva Hoovugale Aalisiri (ಅರಳುವ ಹೂವುಗಳೇ ಆಲಿಸಿರಿ)

Movie: My Autograph (2006)

Singer: Chitra

Song link: Click Here


Araluva hoovugale aalisiri

Balondu horata mareyadiri

Belagina kiranagale bannisiri

Irulinde belakuntu torisiri

Naleya nambike irali namma balali

Gelluva bharavaseyonde belakagali

Manave o manave nee alukadiru

Maleyo bharasidilo nee nadeyutiru ||


Manasu emba kannadiyu odedu hogabaradu

Balu ondu golu anta odi hogabaradu

Yarigilli novilla, yarigilli savilla

Kala kaleda hage ella mayavaguvantadu

Uli pettu beeluva kalle shileyagi nilluvudu

Dina nova nunguva jeevave neleyagi nilluvudu

Yarigilla aledata, yarigilla paradata

Namma prati kanasu illi nanasago olle kalavu munde ide

Manave o manave nee kuggadiru, betta bayalirali nee nuggutiru ||


Novu nalivu annodu bala railu kambigalu

Naduve nammadi payana, naguta sagu hagalirulu

Ene barali baalinali, dheya ondu joteyirali

Elu beelu ella dati eluteevi navugalu

Avamana ellariguntu ee lokada drustiyali

Navellaru endu onde aa devara srustiyali

Baligondu arthavide, hejjegondu dariyide

Ninna atma bala nina jotheyiralu, aakashave angaili

Manave o manave nee badalagu, ene sadhanegu nee modalagu ||


ಚಿತ್ರಗೀತೆ 


ಅರಳುವ ಹೂವುಗಳೇ ಆಲಿಸಿರಿ 

ಬಾಳೊಂದು ಹೋರಾಟ ಮರೆಯದಿರಿ 

ಬೆಳಗಿನ ಕಿರಣಗಳೇ ಬಣ್ಣಿಸಿರಿ 

ಇರುಳಿಂದೆ ಬೆಳಕುಂಟು ತೋರಿಸಿರಿ 

ನಾಳೆಯ ನಂಬಿಕೆ ಇರಲಿ ನಮ್ಮ ಬಾಳಲೀ 

ಗೆಲ್ಲುವ ಭರವಸೆಯೊಂದೇ ಬೆಳಕಾಗಲೀ 

ಮನವೇ ಓ ಮನವೇ ನೀ ಅಳುಕದಿರು 

ಮಳೆಯೋ ಭರಸಿಡಿಲೋ ನೀ ನಡೆಯುತಿರು ।।ಪ।।


ಮನಸು ಎಂಬ ಕನ್ನಡಿಯು ಒಡೆದು ಹೋಗಬಾರದು 

ಬಾಳು ಒಂದು ಗೋಳು ಅಂತ ಓಡಿ ಹೋಗಬಾರದು 

ಯಾರಿಗಿಲ್ಲಿ ನೋವಿಲ್ಲ ಯಾರಿಗಿಲ್ಲಿ ಸಾವಿಲ್ಲ 

ಕಾಲ ಕಳೆದ ಹಾಗೆ ಎಲ್ಲ ಮಾಯವಾಗುವಂತದು 

ಉಳಿ ಪೆಟ್ಟು ಬೀಳುವ ಕಲ್ಲೇ ಶಿಲೆಯಾಗಿ ನಿಲ್ಲುವುದು 

ಯಾರಿಗಿಲ್ಲ ಅಲೆದಾಟ ಯಾರಿಗಿಲ್ಲ ಪರದಾಟ 

ನಮ್ಮ ಪ್ರತಿ ಕನಸು ಇಲ್ಲಿ ನನಸಾಗೋ ಒಳ್ಳೆ ಕಾಲವು ಮುಂದೆ ಇದೆ 

ಮನವೇ ಓ ಮನವೇ ನೀ ಕುಗ್ಗದಿರು ಬೆಟ್ಟ ಬಯಲಿರಲೀ ನೀ ನುಗ್ಗುತಿರು ।।೧।।


ನೋವು ನಲಿವು ಅನ್ನೋದು ಬಾಳ ರೈಲು ಕಂಬಿಗಳು 

ನಡುವೆ ನಮ್ಮದೀ ಪಯಣ ನಗುತ ಸಾಗು ಹಗಲಿರುಳು 

ಏನೇ ಬರಲಿ ಬಾಳಿನಲಿ ಧ್ಯೆಯ ಒಂದು ಜೊತೆಯಿರಲಿ 

ಏಳು ಬೀಳು ಎಲ್ಲ ದಾಟಿ ಏಳುತೀವಿ ನಾವುಗಳು 

ಅವಮಾನ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ 

ನಾವೆಲ್ಲರು ಎಂದು ಒಂದೆ ಆ ದೇವರ ಸೃಷ್ಠಿಯಲಿ 

ಬಾಳಿಗೊಂದು ಅರ್ಥವಿದೆ ಹೆಜ್ಜೆಗೊಂದು ದಾರಿಯಿದೆ 

ನಿನ್ನ ಆತ್ಮ ಬಲ ನಿನ ಜೊತೆಯಿರಲು ಆಕಾಶವೆ ಅಂಗೈಲೀ 

ಮನವೇ ಓ ಮನವೇ ನೀ ಬದಲಾಗೂ ಏನೇ ಸಾಧನೆಗೂ ನೀ ಮೊದಲಾಗೂ ।।೨।।






Wednesday, April 5, 2023

Andagati Kanna Tumba (ಅಂದಗಾತಿ ಕಣ್ಣ ತುಂಬಾ)

Movie: Chandra Chakori (2003)

Singer: Hariharan

Song link: Click Here


Andagati kanna tumba, chelli chello vaiyyara

Suryakanti kenne tumba, banna banna chittara

Nadige tumba, nagini singara

Naguvina tumba, hunnime sindhoora

Ninna tumbikonda nanna edeyalli jhenkara ||


Purna chandranedeyinda belli tunuku chedurittu

Andavada bombeyondu adarinda moodittu

Amara shilpi jakkanna ivala nodi beragada

Kuncharaja ravivarma maimaretu sharanada

Minchu minchuva sinchanave, midiyuva hrudayake kampanave

Bhavane alegala incharave, chandada cheluvina aadharave

Koti tare ottige seri, veda mantra ghoshava saari

Jeeva tumbi tandaru ninna, preetisalu nanna ||1||


Meghadoota kavyadali shakuntale putagalali

Kalidasa maretu hoda pada ondu neenena

Indra loka vaibhavadi koti sukhada swapnadali

Korateyondu bantu adu neenena neenena

Padagale nachuva kavanavu nee, kavigaligetukada kalpane nee

Kunchave nachuva chitravu nee, bannagalillade minuguve nee

Ena heli hogalali ninna, matugale mugidavu chinna

Mounavagi nintaru ninna, andavu kadutide ||2||


ಚಿತ್ರಗೀತೆ 


ಅಂದಗಾತಿ ಕಣ್ಣ ತುಂಬಾ ಚೆಲ್ಲಿ ಚೆಲ್ಲೋ ವೈಯ್ಯಾರ 

ಸೂರ್ಯಕಾಂತಿ ಕೆನ್ನೆ ತುಂಬಾ ಬಣ್ಣ ಬಣ್ಣ ಚಿತ್ತಾರ 

ನಡಿಗೆ ತುಂಬಾ ನಾಗಿಣಿ ಸಿಂಗಾರ 

ನಗುವಿನ ತುಂಬಾ ಹುಣ್ಣಿಮೆ ಸಿಂಧೂರ 

ನಿನ್ನ ತುಂಬಿಕೊಂಡ ನನ್ನ ಎದೆಯಲ್ಲಿ ಝೇಂಕಾರ ।।ಪ।।


ಪೂರ್ಣ ಚಂದ್ರನೆದೆಯಿಂದ ಬೆಳ್ಳಿ ತುಣುಕು ಚೆದುರಿತ್ತು 

ಅಂದವಾದ ಬೊಂಬೆಯೊಂದು ಅದರಿಂದ ಮೂಡಿತ್ತು 

ಅಮರ ಶಿಲ್ಪಿ ಜಕ್ಕಣ್ಣ ಇವಳ ನೋಡಿ ಬೆರಗಾದ 

ಕುಂಚರಾಜ ರವಿವರ್ಮ ಮೈಮರೆತು ಶರಣಾದ 

ಮಿಂಚು ಮಿಂಚುವ  ಸಿಂಚನವೇ, ಮಿಡಿಯುವ ಹೃದಯಕೆ ಕಂಪನವೇ 

ಭಾವನೆ ಅಲೆಗಳ ಇಂಚರವೇ, ಚಂದದ ಚೆಲುವಿನ ಆಧಾರವೇ 

ಕೋಟಿ ತಾರೆ ಒಟ್ಟಿಗೆ ಸೇರಿ,ವೇದ ಮಂತ್ರ ಘೋಷವ ಸಾರಿ 

ಜೀವ ತುಂಬಿ ತಂದರು ನಿನ್ನ, ಪ್ರೀತಿಸಲೂ ನನ್ನಾ ।।೧।।


ಮೇಘದೂತ ಕಾವ್ಯದಲಿ ಶಕುಂತಲೆ ಪುಟಗಳಲಿ 

ಕಾಳಿದಾಸ ಮರೆತು ಹೋದ ಪದ ಒಂದು ನೀನೇನಾ 

ಇಂದ್ರ ಲೋಕ ವೈಭವದಿ ಕೋಟಿ ಸುಖದ ಸ್ವಪ್ನದಲಿ 

ಕೊರತೆಯೊಂದು ಬಂತು ಅದು ನೀನೇನಾ ನೀನೇನಾ 

ಪದಗಳೆ ನಾಚುವ ಕವನವು ನೀ,ಕವಿಗಳಿಗೆಟುಕದ ಕಲ್ಪನೆ ನೀ 

ಕುಂಚವೆ ನಾಚುವ ಚಿತ್ರವು ನೀ, ಬಣ್ಣಗಳಿಲ್ಲದೆ ಮಿನುಗುವೆ ನೀ 

ಏನ ಹೇಳಿ ಹೊಗಳಲಿ ನಿನ್ನ, ಮಾತುಗಳೇ ಮುಗಿದವು ಚಿನ್ನ 

ಮೌನವಾಗಿ ನಿಂತರು ನಿನ್ನ, ಅಂದವು ಕಾಡುತಿದೆ ।।೨।।




Tuesday, April 4, 2023

Aalochane Aaradhane Ella Nindene (ಆಲೋಚನೆ ಆರಾಧನೆ ಎಲ್ಲ ನಿಂದೇನೆ)

 Movie: Romeo (2012)

Singer: Shreya Goshal

Song link: Click Here


Aalochane aaradhane ella nindene

Aalapane aakarshane ella neenene

Navibbaru ondadare khandita

Ee jeevana allindale adbhuta

Kanasiginta sogasu ninna saniha

Jagave sullu nanage ninna vinaha

Yaro nanage neenu ||


Aada mele nange ninna parichaya

Nanna balu aayitalla rasamaya

Nijadali neenu, manujano gandharano

Saku saku innu ninna abhinaya

Nodi kooda nodadante nadedeya

Hudugiya heege hedarisabeda kano

Andu, neenu, aagantuka

Indu, neene, nanna sakha

Kanasiginta sogasu ninna saniha

Jagave sullu nanage ninna vinaha

Yaro nanage neenu ||


Ninna kenne hinduvanta salugeya

Bega bega nange neenu koduveya

Tade tade innu, tadeyanu na nannanu

Ninge tagi ninta vele talamala

Sone soki aada hage hasi nela

Bevaruve yako aralve nanetako

Kelo, aase, aalingana

Yako, nachi, neerade na

Kanasiginta sogasu ninna saniha

Jagave sullu nanage ninna vinaha

Yaro nanage neenu ||


ಚಿತ್ರಗೀತೆ 


ಆಲೋಚನೆ ಆರಾಧನೆ ಎಲ್ಲ ನಿಂದೇನೆ 

ಆಲಾಪನೆ ಆಕರ್ಷಣೆ ಎಲ್ಲ ನೀನೇನೆ 

ನಾವಿಬ್ಬರು ಒಂದಾದರೆ ಖಂಡಿತ 

ಈ ಜೀವನ ಅಲ್ಲಿಂದಲೆ ಅದ್ಭುತ 

ಕನಸಿಗಿಂತ ಸೊಗಸು ನಿನ್ನ ಸನಿಹ 

ಜಗವೆ ಸುಳ್ಳು ನನಗೆ ನಿನ್ನ ವಿನಹ 

ಯಾರೋ ನನಗೆ ನೀನು .. ।।ಪ।।


ಆದ ಮೇಲೆ ನಂಗೆ ನಿನ್ನ ಪರಿಚಯ 

ನನ್ನ ಬಾಳು ಆಯಿತಲ್ಲ ರಸಮಯ 

ನಿಜದಲಿ ನೀನು, ಮನುಜನೊ ಗಾಂಧಾರನೊ 

ಸಾಕು ಸಾಕು ಇನ್ನು ನಿನ್ನ ಅಭಿನಯ 

ನೋಡಿ ಕೂಡ ನೋಡದಂತೆ ನಡೆದೆಯ 

ಹುಡುಗಿಯ ಹೀಗೆ ಹೆದರಿಸಬೇಡ ಕಣೋ 

ಅಂದು, ನೀನು, ಆಗಂತುಕ 

ಇಂದು, ನೀನೇ, ನನ್ನ ಸಖ 

ಕನಸಿಗಿಂತ ಸೊಗಸು ನಿನ್ನ ಸನಿಹ 

ಜಗವೆ ಸುಳ್ಳು ನನಗೆ ನಿನ್ನ ವಿನಹ 

ಯಾರೋ ನನಗೆ ನೀನು .. ।।೧।।


ನಿನ್ನ ಕೆನ್ನೆ ಹಿಂಡುವಂತ ಸಲುಗೆಯ 

ಬೇಗ ಬೇಗ ನಂಗೆ ನೀನು ಕೊಡುವೆಯ 

ತಡೆ ತಡೆ ಇನ್ನು, ತಡೆಯೆನು ನಾ ನನ್ನನು 

ನಿಂಗೆ ತಾಗಿ ನಿಂತ ವೇಳೆ ತಳಮಳ 

ಸೋನೆ ಸೊಕಿ ಆದ ಹಾಗೆ ಹಸಿ ನೆಲ 

ಬೆವರುವೆ ಯಾಕೊ ಅರಳುವೆ ನಾನೇತಕೊ 

ಕೇಳೊ, ಆಸೆ, ಆಲಿಂಗನ  

ಯಾಕೊ ನಾಚಿ ನೀರಾದೆ ನಾ 

ಕನಸಿಗಿಂತ ಸೊಗಸು ನಿನ್ನ ಸನಿಹ 

ಜಗವೆ ಸುಳ್ಳು ನನಗೆ ನಿನ್ನ ವಿನಹ 

ಯಾರೋ ನನಗೆ ನೀನು ..।।೨।।



Monday, April 3, 2023

Aakasha Bhumi Indu Ondada Hagide (ಆಕಾಶ ಭೂಮಿ ಇಂದು ಒಂದಾದ ಹಾಗಿದೆ)

Movie: Mussanje Mathu (2008)

Singer: Shreya Goshal

Song link: Click Here


Aakasha bhumi indu ondada hagide

Nanna ee cheluvannu holevante madide

Tandano tandano tanuvella tandano

Chendano chendano jagavella chendano

Manasella something something uyyale tugide ||


Na baruva dariyalli, hoo balakutava noda

Nachi ninte nanu, avu haaditondu haada

Haadalu nanu jothe jothege, aralitu manavu olagolage

Nadiyante hariyuvenu, manjante musukuvenu

Tirugo ee bhumiya nodalu chandramake haruvenu

Manadalle mugilanu seri, bhuvige kai chachuvenu ||


Tanananaare tananananaare tananananaare na (2)

Soundarya raga lahari, bantenna manake marali

Taleduguvantha nada, tangali beeso ravali

Ale ale mele mele barutiro haage

Sukha dukha eradu jeevana dhare

Mussanje matalli, ee jeeva haguraitu

Kogileya haadante, aa mathu impaitu

Bhavagala sarigama seri, sogasada haadaitu ||


ಚಿತ್ರಗೀತೆ 


ಆಕಾಶ ಭೂಮಿ ಇಂದು ಒಂದಾದ ಹಾಗಿದೆ 

ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ 

ತಂದಾನೊ ತಂದಾನೊ ತನುವೆಲ್ಲ ತಂದಾನೊ 

ಚೆಂದಾನೊ ಚೆಂದಾನೊ ಜಗವೆಲ್ಲ ಚೆಂದಾನೊ 

ಮನಸೆಲ್ಲ ಸಂಥಿಂಗ್ ಸಂಥಿಂಗ್ ಉಯ್ಯಾಲೆ ತೂಗಿದೆ ।।ಪ।।


ನಾ ಬರುವ ದಾರಿಯಲ್ಲಿ ಹೂ ಬಳುಕುತಾವ ನೋಡ 

ನಾಚಿ ನಿಂತೆ ನಾನು ಅವು ಹಾಡಿತೊಂದು ಹಾಡ 

ಹಾಡಲು ನಾನು ಜೊತೆ ಜೊತೆಗೆ ಅರಳಿತು ಮನವು ಒಳಗೊಳಗೆ 

ನದಿಯಂತೆ ಹರಿಯುವೆನು, ಮಂಜಂತೆ ಮುಸುಕುವೆನು 

ತಿರುಗೋ ಈ ಭೂಮಿಯ ನೋಡಲು, ಚಂದ್ರಮಕೆ ಹಾರುವೆನು 

ಮನದಲ್ಲೇ ಮುಗಿಲನು ಸೇರಿ, ಭುವಿಗೇ ಕೈ ಚಾಚುವೆನು ।।೧।।


ತನನನನಾರೆ ತನನನನಾರೆ ತನನನನಾರೆ ನಾ (೨)

ಸೌಂದರ್ಯ ರಾಗ ಲಹರಿ, ಬಂತೆನ್ನ ಮನಕೆ ಮರಳಿ 

ತಲೆದೂಗುವಂಥ ನಾದ, ತಂಗಾಳಿ ಬೀಸೊ ರವಳಿ 

ಅಲೆ ಅಲೆ ಮೇಲೆ ಮೇಲೆ ಬರುತಿರೊ ಹಾಗೆ 

ಸುಖ ದುಃಖವೆರಡು, ಜೀವನ ಧಾರೆ 

ಮುಸ್ಸಂಜೆ ಮಾತಲ್ಲಿ, ಈ ಜೀವ ಹಗುರಾಯ್ತು 

ಕೋಗಿಲೆಯ ಹಾಡಂತೆ, ಆ ಮಾತು ಇಂಪಾಯ್ತು 

ಭಾವಗಳ ಸರಿಗಮ ಸೇರಿ, ಸೊಗಸಾದ ಹಾಡಾಯ್ತು ।।೨।।



 





Sunday, April 2, 2023

Baaro Baaro Maleraya (ಬಾರೋ ಬಾರೋ ಮಳೆರಾಯಾ)

Padya

Sahitya: N S Laxminarayana Bhat


Baaro baaro maleraya

Bale totake neerilla


Huyyo huyyo maleraya

Hoovina totake neerilla


Toro toro maleraya

Tengu adike tanidilla


Kareyo kareyo maleraya

Kabbina gadde nenedilla


Suriyo suriyo maleraya

Suryana snanane aagilla


Suryana snana aagbeku

Aagi ukka kudibeku

Ukka kudidu aata aadi

Puttu tachi madbeku.


ಪದ್ಯ 


ಬಾರೋ ಬಾರೋ ಮಳೆರಾಯಾ 

ಬಾಳೇ ತೋಟಕೆ ನೀರಿಲ್ಲಾ 


ಹುಯ್ಯೋ ಹುಯ್ಯೋ ಮಳೆರಾಯಾ 

ಹೂವಿನ ತೋಟಕೆ ನೀರಿಲ್ಲಾ 


ತೋರೋ ತೋರೋ ಮಳೆರಾಯಾ 

ತೆಂಗು ಅಡಿಕೆ ತಣಿದಿಲ್ಲಾ 


ಕರೆಯೋ ಕರೆಯೋ ಮಳೆರಾಯಾ 

ಕಬ್ಬಿನ ಗದ್ದೆ ನೆನೆದಿಲ್ಲಾ 


ಸುರಿಯೋ ಸುರಿಯೋ ಮಳೆರಾಯಾ 

ಸೂರ್ಯನ ಸ್ನಾನಾನೇ ಆಗಿಲ್ಲಾ 


ಸೂರ್ಯನ ಸ್ನಾನ ಆಗ್ಬೇಕು 

ಆಗಿ ಉಕ್ಕ ಕುಡಿಬೇಕು 

ಉಕ್ಕ ಕುಡಿದು ಆಟ ಆಡಿ 

ಪುಟ್ಟು ತಾಚೀ ಮಾಡ್ಬೇಕು.