Thursday, November 17, 2022

Yaravva Ee Cheluva (ಯಾರವ್ವ ಈ ಚೆಲುವ )


Bhavageete

Sahitya: Chandrashekara Kambara

Song link: https:Click Here


Yaravva ee cheluva

Tantane ranjisuva

Suryana thara holeyuva ||


Ambegaliduvanta aneya mariyene

Jollu surisidallella mallige hoovene

Nakkareetana munde chandra kalegunduvane

Baro bhagyada odeyane ||


Bere seemeya daiva tappi bandanene

Tugo jadegala node nagara midiyene

Odala mannina olaga mudida shivanene

Musuguduva nandiyene ||


Enu kottaru olla sollu acchina bella

Ola horaga aadidara salakondu avatara

Avva eetana roopa namma kannina deepa

Baro bhagyada odeyane ||


ಭಾವಗೀತೆ 


ಯಾರವ್ವ ಈ ಚೆಲುವ 

ತಂತಾನೇ ರಂಜಿಸುವ 

ಸೂರ್ಯನ ಥರ ಹೊಳೆಯುವ ।।ಪ ।।


ಅಂಬೆಗಾಲಿಡುವಂತ ಆನೆಯ ಮರಿಯೇನೆ 

ಜೊಲ್ಲು ಸುರಿಸಿದಲ್ಲೆಲ್ಲ ಮಲ್ಲಿಗೆ ಹೂವೇನೇ 

ನಕ್ಕರೀತನ ಮುಂದೆ ಚಂದ್ರ ಕಳೆಗುಂದುವನೆ 

ಬಾರೋ ಭಾಗ್ಯದ ಒಡೆಯನೇ ।।೧।।


ಬೇರೆ ಸೀಮೆಯ ದೈವ ತಪ್ಪಿ ಬಂದಾನೇನೆ 

ತುಗೊ ಜಡೆಗಳ ನೋಡೆ ನಾಗರ ಮಿಡಿಯೇನೆ 

ಒಡಲ ಮಣ್ಣಿನ ಒಳಗ ಮೂಡಿದ ಶಿವನೇನೆ 

ಮುಸುಗುಡುವ ನಂದಿಯೇನೇ ।।೨।।


ಏನು ಕೊಟ್ಟರೂ ಒಲ್ಲ ಸೊಲ್ಲು ಅಚ್ಚಿನ ಬೆಲ್ಲ 

ಒಳ ಹೊರಗ ಆಡಿದರ ಸಲಕೊಂದು  ಅವತಾರ 

ಅವ್ವ ಈತನ ರೂಪ ನಮ್ಮ ಕಣ್ಣಿನ ದೀಪ 

ಬಾರೋ ಭಾಗ್ಯದ ಒಡೆಯನೇ ।।೩।।




Wednesday, November 16, 2022

Mujhe Kisi Se Pyar Ho Gaya ( मुझे किसी से प्यार हो गया)

  • Movie: Barsaat (1949)
  • Singer: Lata Mangeshkar
  • Song link: https:Click Here

Ho ! mujhe kisi se pyar ho gaya

Pyar ho gaya dil bekarar ho gaya ||


Dard chaha tha hamne chipana

Khul gaya phir bhi dil ka phasana

Dil ne ye kya kiya, o salone piya

Mora dhadke jiya

Ho ! mujhe kisi se pyar ho gaya ||


Jo chupana maine chaha 

Ankhon ne keh diya

Aur jo maine kahna chaha 

Dil mein he reh gaya

Ho ! mujhe kisi se pyar ho gaya ||


Ankhon ankhon mein karke ishare

Kisne ne dil se kaha hum tumhare

Hay ye kya kiya, o salone piya

Mora dhadke jiya

Ho ! mujhe kisi se pyar ho gaya ||


गाना 


हो ! मुझे किसी से प्यार हो गया 

प्यार हो गया दिल बेकरार हो गया। 


दर्द चाहा था हमने छिपाना 

खुल गया फिर भी दिल का फसाना 

दिल ने ये क्या किया, ओ सलोने पिया 

मोरा धड़के जिया    

हो ! मुझे किसी से प्यार हो गया। 


जो छुपाना मैंने चाहा आंखों ने केह दिया 

और जो मैंने कहना चाहा दिल में ही रह गया 

 हो ! मुझे किसी से प्यार हो गया। 


आंखों - आंखों  में करके इशारे 

किसने दिल से कहा, हम तुम्हारे 

हाय ये क्या किया, ओ सलोने पिया 

मोरा  धड़के जिया    

हो ! मुझे किसी से प्यार हो गया।     




      




Tuesday, November 15, 2022

Mouna Tabbitu Nelava (ಮೌನ ತಬ್ಬಿತು ನೆಲವ )

Bhavageete

Sahitya: Gopalakrishna Adiga

Song link: https:Click Here


Mouna tabbitu nelava

Jummene pulakagonditu dharini

Nodi nachitu banu

Seritu kempu sanjeya kadapali ||


Hakkigoralina surata ganake

Bigiyu nasuve sadilitu

Beccha becchane usirinandadi

Gali mellane tevalitu ||


Irula seragina nelalu chachitu

Banu tereyitu kannanu

nelavu taniyitu, bevaru haniyitu

Bashpa nenesitu hullanu ||


Mouna urulitu, horalitedditu

Gali bhorane beesitu

Tengu garigala chamarake

Hayendu mounavu malagitu ||


ಭಾವಗೀತೆ 


ಮೌನ ತಬ್ಬಿತು ನೆಲವ 

ಜುಮ್ಮೆನೆ ಪುಳಕಗೊಂಡಿತು ಧಾರಿಣಿ 

ನೋಡಿ ನಾಚಿತು ಬಾನು 

ಸೇರಿತು ಕೆಂಪು ಸಂಜೆಯ ಕದಪಲಿ ।।ಪ ।।


ಹಕ್ಕಿಗೊರಳಿನ ಸುರತಗಾನಕೆ 

ಬಿಗಿಯು ನಸುವೆ ಸಡಿಲಿತು 

ಬೆಚ್ಚಬೆಚ್ಚನೆ ಉಸಿರಿನಂದದಿ 

ಗಾಳಿ ಮೆಲ್ಲನೆ ತೆವಳಿತು ।।೧।।


ಇರುಳ ಸೆರಗಿನ ನೆಳಲು ಚಾಚಿತು 

ಬಾನು ತೆರೆಯಿತು ಕಣ್ಣನು 

ನೆಲವು ತಣಿಯಿತು , ಬೆವರು ಹನಿಯಿತು 

ಬಾಷ್ಪ ನೆನೆಸಿತು ಹುಲ್ಲನು ।।೨।।


ಮೌನ ಉರುಳಿತು ,ಹೊರಳಿತೆದ್ದಿತು 

ಗಾಳಿ  ಭೋರನೆ ಬೀಸಿತು

ತೆಂಗುಗರಿಗಳ ಚಾಮರಕೆ 

ಹಾಯೆಂದು ಮೌನವು ಮಲಗಿತು ।।೩।।



Monday, November 14, 2022

Bevu Belladolidalenu Phala (ಬೇವು ಬೆಲ್ಲದೊಳಿಡಲೇನು ಫಲ)

Bhaktigeete

Sri Purandara Dasara Keerthanegalu

Songlink: Click Here


Raga: Behag

Tala: Aditala


Bevu belladolidalenu phala

Havige haleredarenu phala ||


Kutilava bidadiha kujanaru mantrava

Pataneya madidarenu phala

Sateyannaduva manujaru manadali

Vittalana nenedareyenu phala ||


Kapata tanadi vanchisuva manujaru

Japagala madidarenu phala

Kupita buddiyanu tyajisade nityadi

Upavasaviddarinnenu phala ||


Mathapitaranu balalisuva maga

Yatreya madidarenu phala

Ghathakatanavanu bidade nirantara

Geeteyanodidarenu phala ||


Patiyanu nindisi bogaluva satiyalu

Vratagala madidarenu phala

Atithigaledeyali bedava maduta

Gatiyanu bayasidarenu phala ||


Heenakrutyagala maduta nadiyali

Snanava maidarenu phala

Srinidhi purandara vittalana neneyade

Mounava madidarenu phala ||


ಭಕ್ತಿಗೀತೆ 


ಬೇವು ಬೆಲ್ಲದೊಳಿಡಲೇನು ಫಲ 

ಹಾವಿಗೆ ಹಾಲೆರೆದರೇನು ಫಲ ।।ಪ ।।


ಕುಟಿಲವ ಬಿಡದಿಹ ಕುಜನರು ಮಂತ್ರವ 

ಪಠನೆಯ ಮಾಡಿದರೇನು ಫಲ 

ಸಟೆಯನ್ನಾಡುವ ಮನುಜರು ಮನದಲಿ 

ವಿಠ್ಠಲನ ನೆನೆದರೆಯೇನು ಫಲ ।।೧।।


ಕಪಟತನದಿ ವಂಚಿಸುವ ಮನುಜರು 

ಜಪಗಳ ಮಾಡಿದರೇನು ಫಲ 

ಕುಪಿತಬುದ್ಧಿಯನು ತ್ಯಜಿಸದೆ ನಿತ್ಯದಿ 

ಉಪವಾಸವಿದ್ದರಿನ್ನೇನು ಫಲ ।।೨।।


ಮಾತಾಪಿತರನು ಬಳಲಿಸುವ ಮಗ 

ಯಾತ್ರೆಯ ಮಾಡಿದರೇನು ಫಲ 

ಘಾತಕತನವನು ಬಿಡದೆ ನಿರಂತರ 

ಗೀತೆಯನೋದಿದರೇನು ಫಲ ।।೩।।


ಪತಿಯನು ನಿಂದಿಸಿ ಬೊಗಳುವ ಸತಿಯಳು 

ವ್ರತಗಳ ಮಾಡಿದರೇನು ಫಲ 

ಅತಿಥಿಗಳೆಡೆಯಲಿ ಭೇದವ ಮಾಡುತ 

ಗತಿಯನು ಬಯಸಿದರೇನು ಫಲ ।।೪।।


ಹೀನಕೃತ್ಯಗಳ ಮಾಡುತ ನದಿಯಲಿ 

ಸ್ನಾನವ ಮಾಡಿದರೇನು ಫಲ 

ಶ್ರೀನಿಧಿ ಪುರಂದರ ವಿಠ್ಠಲನ ನೆನೆಯದೆ 

ಮೌನವ  ಮಾಡಿದರೇನು ಫಲ ।।೫।।



Sunday, November 13, 2022

Jaya Jaya Shankari Sarvajaneshwari (ಜಯ ಜಯ ಶಂಕರಿ ಸರ್ವಜನೇಶ್ವರಿ )

Bhaktigeete

Song link: Click Here


Jaya jaya shankari sarvajaneshwari

Brahmanandakari amba

Jayatu bhavani jaya kalyani

Brahmanandakari amba ||


Siddhi vinayaka shanmukha janani

Sundara shivarani mata sundara shivarani

Vrushabha vahini vishwa palini

Jayahe jagadamba, devi

Jayahe jagadamba ||jaya||


Jayatu bhavni vyaghra vahini

Jaya trishulapaani, devi

Abhayadayini varapradhayini

Jayahe jagadamba, devi

Jayahe jagadamba ||jaya||


Jayahe bhairavi ghora rupini

Rundamali kali, devi

Krishna roopini dushtanashini

Jayahe jagadamba, devi

Jayahe jagadamba ||jaya||


Shakti swarupini mukhtidayini

Sakala shastra paani, devi

Simhavahini mahishamardhini

Sakala jagajjanani, devi

Sakala jagajjanani ||jaya||


ಭಕ್ತಿಗೀತೆ 


ಜಯ ಜಯ ಶಂಕರಿ ಸರ್ವಜನೇಶ್ವರಿ 

ಬ್ರಹ್ಮಾನಂದಕರೀ  ಅಂಬಾ 

ಜಯತು ಭವಾನಿ ಜಯ ಕಲ್ಯಾಣಿ 

ಬ್ರಹ್ಮಾನಂದಕರೀ  ಅಂಬಾ ।।ಪ ।।


ಸಿದ್ಧಿ ವಿನಾಯಕ ಷಣ್ಮುಖ ಜನನೀ 

ಸುಂದರ ಶಿವರಾಣಿೇ  ಮಾತಾ ಸುಂದರ ಶಿವರಾಣಿೇ 

ವೃಷಭ ವಾಹಿನಿ ವಿಶ್ವ ಪಾಲಿನೀ 

ಜಯಹೇ ಜಗದಂಬ, ದೇವೀ 

ಜಯಹೇ ಜಗದಂಬ ।।೧।।


ಜಯತು ಭವಾನಿ ವ್ಯಾಘ್ರ ವಾಹಿನೀ 

ಜಯ ತ್ರಿಶೂಲ ಪಾಣಿೇ, ದೇವಿ 

ಅಭಯದಾಯಿನೀ ವರಪ್ರದಾಯಿನೀ 

ಜಯಹೇ ಜಗದಂಬ, ದೇವೀ 

ಜಯಹೇ ಜಗದಂಬ ।।೨।।


ಜಯಹೇ ಭೈರವಿ ಘೋರರೂಪಿಣೀ 

ರುಂಡಮಾಲಿ ಕಾಳೀ, ದೇವೀ 

ಕೃಷ್ಣ ರೂಪಿಣೀ ದುಷ್ಟ ನಾಶಿನೀ 

ಜಯಹೇ ಜಗದಂಬ, ದೇವೀ 

ಜಯಹೇ ಜಗದಂಬ।।೩।।


ಶಕ್ತಿ ಸ್ವರೂಪಿಣಿ ಮುಕ್ತಿ ದಾಯಿನಿ 

ಸಕಲ ಶಸ್ತ್ರ ಪಾಣೀ, ದೇವಿ 

ಸಿಂಹವಾಹಿನೀ ಮಹಿಷಮರ್ಧಿನಿ 

ಸಕಲ ಜಗಜ್ಜನನೀ, ದೇವಿ 

ಸಕಲ ಜಗಜ್ಜನನೀ ।।೪।।







Saturday, November 12, 2022

Hadonda Haduve Nee Kelu Maguve (ಹಾಡೊಂದ ಹಾಡುವೆ ನೀ ಕೇಳು ಮಗುವೆ )

  • Movie: Nandi (1964) 
  • Singer: P B Sreenivas
  • Songlink: Click Here


Hadonda haduve nee kelu maguve

Baridada mane belage neenendu baruve ||


Seemantadananda na needalilla

Ninagagi mahileyaru ta hadalilla ||hadonda||


Sirivantara bhoga ninagilli illa

Siriyagi nidhiyagi nee baruveyalla ||hadonda||


Ninnondu nudimuttu savi jeninante

Aa sukhadi na mareve ee bala chinte

Adakelo soubhagya ee tayigilla

Ivalase akankshae neenadeyalla ||hadonda||


ಚಿತ್ರಗೀತೆ 


ಹಾಡೊಂದ ಹಾಡುವೆ ನೀ ಕೇಳು ಮಗುವೆ 

ಬರಿದಾದ ಮನೆಬೆಳಗೆ ನೀನೆಂದು ಬರುವೆ ।।ಪ ।।


ಸೀಮಂತದಾನಂದ ನಾ ನೀಡಲಿಲ್ಲ 

ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ ।।೧।।


ಸಿರಿವಂತರ ಭೋಗ ನಿನಗಿಲ್ಲಿ ಇಲ್ಲ 

ಸಿರಿಯಾಗಿ ನಿಧಿಯಾಗಿ ನೀ ಬರುವೆಯಲ್ಲ ।।೨।।


ನಿನ್ನೊಂದು ನುಡಿಮುತ್ತು ಸವಿ ಜೇನಿನಂತೆ 

ಆ ಸುಖದಿ ನಾ ಮರೆವೆ ಈ ಬಾಳ ಚಿಂತೆ 

ಅದಕೇಳೋ ಸೌಭಾಗ್ಯ ಈ ತಾಯಿಗಿಲ್ಲ 

ಇವಳಾಸೆ ಆಕಾಂಕ್ಷೆ ನೀನಾದೆಯಲ್ಲ ।।೩।।




Friday, November 11, 2022

Nana Kanda (ನನ ಕಂದಾ)

Padya

Janapada


Nana kanda muddu, honna tavari muddu

Hannulla gidaka gini muddu, kandavva

Nee muddu nanna balagaka ||


Nadedada kandana nadageeya nodeena

Sadagaradinda tadaseena, kandayyaga

Aayi madisikotta kirugejje||


Totlana kuseegi dittiyadavanda

Kattida navila garigola, balaga

Karibevina ditti tegedeena ||


Kandaddu kanasagi, undaddu saviyagi

Kanda nee kadabedendu, beduve

Kandayya mado niddiya ||


ಪದ್ಯ

 

ನನ ಕಂದಾ ಮುದ್ದು , ಹೊನ್ನ ತಾವರಿ ಮುದ್ದು 

ಹಣ್ಣುಳ್ಳ ಗಿಡಕ ಗಿಣಿ ಮುದ್ದು, ಕಂದವ್ವ 

ನೀ ಮುದ್ದು ನನ್ನ ಬಳಗಕ ।।


ನಡೆದಾಡ ಕಂದನ ನಡಗೀಯ ನೋಡೀನ 

ಸಡಗರದಿಂದ ತೊಡಸೀನ, ಕಂದಯ್ಯಗ 

ಆಯಿ ಮಾಡಿಸಿಕೊಟ್ಟ ಕಿರುಗೆಜ್ಜೆ ।।

 

ತೊಟ್ಲಾನ  ಕೂಸೀಗಿ ದಿಟ್ಟಿಯಾದಾವಂದ 

ಕಟ್ಟೀದ ನವಿಲ ಗರಿಗೋಳ ಬಾಳಾಗ 

ಕರಿಬೇವಿನ ದಿಟ್ಟಿ ತೆಗೆದೇನ ।।


ಕಂಡದ್ದು ಕನಸಾಗಿ, ಉಂಡದ್ದು ಸವಿಯಾಗಿ 

ಕಂದ ನೀ ಕಾಡಬೇಡೆಂದು, ಬೇಡುವೆ 

ಕಂದಯ್ಯ ಮಾಡೋ ನಿದ್ದೀಯ ।।