- Movie: Kasturi Nivasa (1971)
- Singer: P B Srinivas
- Song link: Click Here
Aadisi nodu beelisi nodu uruli hogadu (2)
Ene barali, yaarigu sotu taleya bagadu
Endigu nanu hege eruve endu naguvudu
Heege nagutaliruvudu ||
Gudisale aagali aramane aagali, aata nilladu
Hiriyare erali kiriyare barali, beda toradu
Kastavo sukhavo alukade aadi tugutiruvudu
Tugutiruvudu ||
Maiyane hindi nondaru kabbu, sihiya koduvudu
Teyutaliddaru gandhada parimala, tumbi baruvudu
Tane uridaru deepavu manege belaka taruvudu
Deepa belaka taruvudu ||
Aadisuvathana kai chalakadali, ella adagide
Aatana karuneya jeevava tumbi, kunisi naliside
Aa kai sotare bombeya katheyu koneyaguvude
koneyaguvude ||
ಚಿತ್ರಗೀತೆ
ಆಡಿಸಿ ನೋಡು , ಬೀಳಿಸಿ ನೋಡು ಉರುಳಿ ಹೋಗದು (೨)
ಏನೇ ಬರಲಿ ಯಾರಿಗು ಸೋತು ತಲೆಯ ಬಾಗದು
ಎಂದಿಗು ನಾನು ಹೀಗೆ ಇರುವೆ ಎಂದು ನಗುವುದು
ಹೀಗೆ ನಗುತಲಿರುವುದು ।।ಪ ।।
ಗುಡಿಸಲೆ ಆಗಲಿ, ಅರಮನೆಯಾಗಲಿ ಆಟ ನಿಲ್ಲದೂ
ಹಿರಿಯರೆ ಇರಲಿ, ಕಿರಿಯರೆ ಬರಲಿ ಭೇದ ತೋರದು
ಕಷ್ಟವೊ ಸುಖವೊ ಅಳುಕದೆ ಆಡಿ ತೂಗುತಿರುವುದು
ತೂಗುತಿರುವುದು ।।೧।।
ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು
ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು
ದೀಪಾ ಬೆಳಕ ತರುವುದು ।।೨।।
ಆಡಿಸುವಾತನ ಕೈಚಳಕದಲಿ ಎಲ್ಲ ಅಡಗಿದೆ
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ
ಆ ಕೈ ಸೋತರೆ ಬೊಂಬೆಯ ಕಥೆಯು ಕೊನೆಯಾಗುವುದೇ
ಕೊನೆಯಾಗುವುದೇ ।।೩।।






