Nooru janmakoo nooraru janmakoo
Nooru janmakoo nooraru janmakoo
Olava dhareye olidolidu barele
Nanna atma nanna prana neenendu
Nooru janmakoo.... ||
Balendare pranayanubhava kavithe
Atmanusandhana
Nenapendare malebilla chaye
Nannedeya bandaladi oo......
Nannedeya bandaladi chittara baredavale
suttelu lokadali mattelu sigadavale
Nannaolage hadagi ulidavale ||
Ba sampige savibhava lahari
Hariye pannira jeevanadi
Ba mallige mamakara maaye
Lokada sukhavella oo....
Lokada sukhavella ninagagi mudipirali
Eruvantha nooru kahi eralirali nanagagi
Kaayuvenu konevaregu kannagi ||
ಚಿತ್ರಗೀತೆ
ನೂರು ಜನ್ಮಕೂ ನೂರಾರು ಜನ್ಮಕೂ
ನೂರು ಜನ್ಮಕೂ ನೂರಾರು ಜನ್ಮಕೂ
ಒಲವ ಧಾರಯೇ ಒಲಿದೊಲಿದು ಬಾರೆಲೆ
ನನ್ನ ಆತ್ಮ ನನ್ನ ಪ್ರಾಣ ನೀನೆಂದೂ
ನೂರು ಜನ್ಮಕೂ ।।ಪ।।
ಬಾಳೆಂದರೆ ಪ್ರಣಯಾನುಭಾವ ಕವಿತೆ
ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದಿ ಓ .....
ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೆ
ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೆ
ನನ್ನೊಳಗೆ ಹಾಡಾಗಿ ಉಳಿದವಳೆ ।।೧।।
ಬಾ ಸಂಪಿಗೆ ಸವಿಭಾವ ಲಹರಿ
ಹರಿಯೇ ಪನ್ನೀರ ಜೀವನದಿ
ಬಾ ಮಲ್ಲಿಗೆ ಮಮಕಾರ ಮಾಯೆ
ಲೋಕದ ಸುಖವೆಲ್ಲಾ ಓ .....
ಲೋಕದ ಸುಖವೆಲ್ಲಾ ನಿನಗಾಗಿ ಮುಡಿಪಿರಲಿ
ಇರುವಂಥ ನೂರು ಕಹಿ ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗೂ ಕಣ್ಣಾಗಿ ।।೨।।






