Thursday, June 19, 2025

Polish Polish Boot Polish (ಪಾಲಿಷ್ ಪಾಲಿಷ್ ಬೂಟ್ ಪಾಲಿಷ್)

Movie: Takka Bitre Sikka (1970)

Singers: L R Anjali, B K Sumitra


Polish polish boot polish banni banni!


Beleda hennu gandu tiliyabeku eradu,

Bootigondu polish, bodygondu malish!


Nimma nimma khayish nodi maaduve polish,

Hennu gandu emba jati jutigilla,

Amma, avva, ayya, appa ellarigonde polish ||


Hiriya kiriyaremba bhedavembudilla,

Sarige peta keshto bariya talegu ashte,

Lawyer, nayar, mayergella pakka shining, polish ||


Kalu hidiva karma kottanendu brahma,

Nachabeda tamma dudimeyonde dharma,

Melu, keelu, ella sullu ! olle maate polish ||


ಚಿತ್ರಗೀತೆ 


ಪಾಲಿಷ್ ಪಾಲಿಷ್ ಬೂಟ್ ಪಾಲಿಷ್ ಬನ್ನಿ ಬನ್ನಿ !


ಬೆಳೆದ ಹೆಣ್ಣು ಗಂಡು ತಿಳಿಯಬೇಕು ಎರಡು,

ಬೂಟಿಗೊಂದು ಪಾಲಿಷ್, ಬಾಡಿಗೊಂದು ಮಾಲಿಷ್! 


ನಿಮ್ಮ ನಿಮ್ಮ ಖಾಯಿಷ್ ನೋಡಿ ಮಾಡುವೆ ಪಾಲಿಷ್,

ಹೆಣ್ಣು ಗಂಡು ಎಂಬ ಜಾತಿ ಜೂತಿಗಿಲ್ಲ,

ಅಮ್ಮ, ಅವ್ವ, ಅಯ್ಯ, ಅಪ್ಪ  ಎಲ್ಲರಿಗೊಂದೇ ಪಾಲಿಷ್ ।।೧।।


ಹಿರಿಯ ಕಿರಿಯರೆಂಬ ಬೇಧವೆಂಬುದಿಲ್ಲ,

ಸರಿಗೆ ಪೇಟ ಕೆಷ್ಟೋ ಬರಿಯ ತಲೆಗು ಅಷ್ಟೆ,

ಲಾಯರ್, ನಾಯರ್, ಮೇಯರ್ ಗೆಲ್ಲ, ಪಕ್ಕ ಶೈನಿಂಗ್, ಪಾಲಿಷ್ 

।।೨।।


ಕಾಲು ಹಿಡಿವ ಕರ್ಮ ಕೊಟ್ಟನೆಂದು ಬ್ರಹ್ಮ,

ನಾಚಬೇಡ ತಮ್ಮ ದುಡಿಮೆಯೊಂದೆ ಧರ್ಮ,

ಮೇಲು, ಕೀಳು ಎಲ್ಲಾ ಸುಳ್ಳು ! ಒಳ್ಳೆಯ ಮಾತೆ ಪಾಲಿಷ್ ! ।।೩।।  

                                      

No comments:

Post a Comment