Movie: Bhale Basava (1969)
Singer: S Janaki
Song link: Click Here
Kandya kandyeno cheluva, nan jaanatanava,
Kelo kelelo basava ||
Obbana kattidde obbana bittidde,
Obbana karakondu olaghode cheluva!
Yavonna kattidde? yavonna bittidde?
Yavonna karakondu olaghode cheluva?
Hasuvanna kattidde, karuvanna bittidde,
Haalanna karakondu olaghode cheluva ||
Obbana haasidde, obbana hoddidde,
Obbana elakondu malagidde cheluva!
Yavonna haasidde? yavonna hoddidde?
Yavonna elakondu malagidde cheluve?
Haasige haasidde, kamliya hoddidde,
Taledimbu elakondu malagidde cheluva ||
Obbange kalkotte, obbange kaikotte,
Obbange seereyannu kottu bitte cheluva!
Yaarige kalkotte? yaarige kai kotte?
Yaarige seereyanna kottu bitte cheluve?
Kanchugarge kalkotte, balegarge kaikotte,
Madivalge seereyanne kottubitte cheluva ||
ಚಿತ್ರಗೀತೆ
ಕಂಡ್ಯಾ ಕಂಡ್ಯೇನೋ ಚೆಲುವಾ, ನನ್ ಜಾಣತನವಾ,
ಕೇಳೋ ಕೇಳೇಲೋ, ಬಸವಾ ।।ಪ।।
ಒಬ್ಬಾನ ಕಟ್ಟಿದ್ದೆ, ಒಬ್ಬಾನ ಬಿಟ್ಟಿದ್ದೆ,
ಒಬ್ಬಾನ ಕರಕೊಂಡು ಒಳಗ್ಹೋದೆ ಚೆಲುವಾ !
ಯಾವೋನ್ನ ಕಟ್ಟಿದ್ದೆ ? ಯಾವೋನ್ನ ಬಿಟ್ಟಿದ್ದೆ ?
ಯಾವೋನ್ನ ಕರಕೊಂಡು ಒಳಗ್ಹೋದೆ ಚೆಲುವೇ ?
ಹಸುವನ್ನ ಕಟ್ಟಿದ್ದೆ, ಕರುವನ್ನ ಬಿಟ್ಟಿದ್ದೆ,
ಹಾಲನ್ನ ಕರಕೊಂಡು ಒಳಗ್ಹೋ ದೆ ಚೆಲುವಾ ।।೧।।
ಒಬ್ಬಾನ ಹಾಸಿದ್ದೆ, ಒಬ್ಬಾನ ಹೊದ್ದಿದ್ದೆ,
ಒಬ್ಬಾನ ಎಳಕೊಂಡು ಮಲಗಿದ್ದೆ ಚೆಲುವಾ!
ಯಾವೋನ್ನ ಹಾಸಿದ್ದೆ ? ಯಾವೋನ್ನ ಹೊದ್ದಿದ್ದೆ ?
ಯಾವೋನ್ನ ಎಳಕೊಂಡು ಮಲಗಿದ್ದೆ ಚೆಲುವೇ ?
ಹಾಸಿಗೆ ಹಾಸಿದ್ದೆ, ಕಂಬ್ಳೀಯ ಹೊದ್ದಿದ್ದೆ,
ತಲೆದಿಂಬು ಎಳಕೊಂಡು ಮಲಗಿದ್ದೆ ಚೆಲುವಾ ।।೨।।
ಒಬ್ಬಂಗೆ ಕಾಲ್ಕೊಟ್ಟೆ , ಒಬ್ಬಂಗೆ ಕೈಕೊಟ್ಟೆ,
ಒಬ್ಬಂಗೆ ಸೀರೆಯನ್ನು ಕೊಟ್ಟು ಬಿಟ್ಟೆ ಚೆಲುವಾ!
ಯಾರಿಗೆ ಕಾಲ್ಕೊಟ್ಟೆ ? ಯಾರಿಗೆ ಕೈಕೊಟ್ಟೆ?
ಯಾರಿಗೆ ಸೀರೆಯನ್ನ ಕೊಟ್ಟು ಬಿಟ್ಟೆ ಚೆಲುವೇ ?
ಕಂಚುಗಾರ್ಗೆ ಕಾಲ್ಕೊಟ್ಟೆ, ಬಳೆಗಾರ್ಗೆ ಕೈಕೊಟ್ಟೆ,
ಮಡಿವಾಳ್ಗೆ ಸೀರೆಯನ್ನೆ ಕೊಟ್ಟು ಬಿಟ್ಟೆ ಚೆಲುವಾ ।।೩।।
No comments:
Post a Comment