Saturday, June 14, 2025

Ivane Nanna Nalla (ಇವನೇ ನನ್ನ ನಲ್ಲಾ)

Movie: Bhale Basava

Singers: P B Srinivas, L R Eshwari

Song link: Click Here


Ivane nanna nalla, ivano ella balla,

Ivanillade naanilla, nanillade ivanilla ||


Kanasallu kanalilla, manasallu bayasalilla,

Hosa aata nanage ella, kadeyento shivane balla ||


Kanda odane premavitta pranayaraja eetanu,

Kelidodane karuneyinda odibanda dheeranu,

Bhramachariyanu nadubeedige nee, eletandiruve hudugaatadali,

Bekkige eno chellata, bada eelige pranasankata,

Oho, aha, oho aha..!

Kanasallu kaanalilla, manasallu bayasalilla!


Neene veene naane burude neenu jenu dumbi naa,

Neenu kadalu naane meenu gaaladalli biddena,

Arivilladeye kirunaatakada nayakanagi natisuttiruve,

Bari maatinalle ee badavananu lakshadipati ne maadiruve ||

Aha oho aha oho..!

Kanasallu kaanalilla, manasallu bayasalilla!


O my darling, o my sweet heart, how i love you can't you see?

Neene nanna pranaya murthy neene baala spurthiyu,

Bhramacharyavanu nee maretu bidu,

Hosa jeevanada belakanu nodu,

Nijavagiyu nee nannavane, kanasellavu phalisitu chinte bidu,

Oho, aha, oho aha..!

Neene nanna nalla, neene nanna ella,

Neenillade nanilla, nanillade neenilla ||


ಚಿತ್ರಗೀತೆ 


ಇವನೇ ನನ್ನ ನಲ್ಲಾ, ಇವನೋ ಎಲ್ಲ ಬಲ್ಲ,

ಇವನಿಲ್ಲದೆ ನಾನಿಲ್ಲ, ನಾನಿಲ್ಲದೇ ಇವನಿಲ್ಲಾ !


ಕನಸಲ್ಲೂ ಕಾಣಲಿಲ್ಲ, ಮನಸಲ್ಲೂ ಬಯಸಲಿಲ್ಲ,

ಹೊಸ ಆಟ ನನಗೆ ಎಲ್ಲಾ, ಕಡೆಯೆಂತೊ ಶಿವನೆ ಬಲ್ಲ !


ಕಂಡ ಒಡನೇ ಪ್ರೇಮವಿತ್ತ ಪ್ರಣಯರಾಜ ಈತನೂ,

ಕೇಳಿದೊಡನೇ ಕರುಣೆಯಿಂದ ಓಡಿಬಂದ ಧೀರನೂ !

ಬ್ರಹ್ಮಚಾರಿಯನು ನಡುಬೀದಿಗೆ ನೀ, ಎಳೆತಂದಿರುವೆ ಹುಡುಗಾಟದಲೀ,

ಬೆಕ್ಕಿಗೆ ಏನೋ ಚೆಲ್ಲಾಟ, ಬಡ ಇಲಿಗೆ ಪ್ರಾಣಸಂಕಟಾ !

ಒಹೋ ಆಹಾ ಒಹೋ ಆಹಾ !

ಕನಸಲ್ಲೂ ಕಾಣಲಿಲ್ಲ, ಮನಸಲ್ಲೂ ಬಯಸಲಿಲ್ಲ!


ನೀನೆ ವೀಣೆ ನಾನೆ ಬುರುಡೆ ನೀನು ಜೇನು ದುಂಬಿ ನಾ,

ನೀನೆ   ಕಡಲು ನಾನೇ ಮೀನು ಗಾಳದಲ್ಲಿ ಬಿದ್ದೆ ನಾ,

ಅರಿವಿಲ್ಲದೆಯೇ ಕಿರುನಾಟಕದಾ ನಾಯಕನಾಗಿ ನಟಿಸುತ್ತಿರುವೆ,

ಬರಿ ಮಾತಿನಲ್ಲೇ ಈ ಬಡವನನು ಲಕ್ಷಾಧಿಪತಿ ನೀ ಮಾಡಿರುವೆ !

ಆಹಾ ಒಹೋ ಆಹಾ ಒಹೋ !

ಕನಸಲ್ಲೂ ಕಾಣಲಿಲ್ಲ, ಮನಸಲ್ಲೂ ಬಯಸಲಿಲ್ಲ!


ಓ ಮೈ ಡಾರ್ಲಿಂಗ್, ಓ ಮೈ ಸ್ವೀಟ್ ಹಾರ್ಟ್, ಹೌ ಐ ಲವ್ ಯು ಕ್ಯಾಟ್  ಯು ಸೀ ?

ನೀನೆ ನನ್ನ ಪ್ರಣಯ ಮೂರ್ತಿ ನೀನೆ ಬಾಳ ಸ್ಫೂರ್ತಿಯೂ,

ಬ್ರಹ್ಮಚರ್ಯವನು ನೀ ಮರೆತು ಬಿಡು, ಹೊಸ ಜೀವನದಾ ಬೆಳಕನು ನೋಡೂ,

ನಿಜವಾಗಿಯೂ ನೀ ನನ್ನವನೇ ಕನಸೆಲ್ಲವು ಫಲಿಸಿತು ಚಿಂತೆ ಬಿಡು !

ಒಹೋ ಹಾಹಾ ಒಹೋ ಹಾಹಾ !

ನೀನೆ ನನ್ನ ನಲ್ಲಾ, ನೀನೆ ನನ್ನ ಎಲ್ಲಾ,

ನೀನಿಲ್ಲದೆ ನಾನಿಲ್ಲ, ನಾನಿಲ್ಲದೇ ನೀನಿಲ್ಲ ! 

                  

No comments:

Post a Comment