Bhaktigeete
Singer: Dr. Rajkumar
Song link: Click Here
Manninalli ambike maadida kalakruti,
Jeeva taledu amma enalu nakkala parvati,
Needidalu aakrutige devi mahashakti,
Aa roopadallittu deviya parinati ||
Snana gruha kaadanu aa putta balaka,
Allige bandanu mooloka nayaka,
Shivananne tadedanu aa dwarapalaka,
Kupita shivanu aadanu shishuvina antaka ||
Shiveyu sishuvigaagi surisidaaga kambani,
Shivanu marugi needidanu santaiso mardani,
Gajamukhava jodisida gajacharmambaradharanu,
Shivaganake pradhaniyaada ambika tanayanu ||
Devagana sallisitu pushpa maalike,
Gandharvaru haadidaru raaga maalike,
Ivana saati daivavilla loka lokake,
Ee maha ganapanige illa holike,
Gananatha jai jai gananatha ||
ಭಕ್ತಿಗೀತೆ
ಮಣ್ಣಿನಲ್ಲಿ ಅಂಬಿಕೆ ಮಾಡಿದ ಕಲಾಕೃತಿ,
ಜೀವ ತಳೆದು ಅಮ್ಮಾ ಎನಲು ನಕ್ಕಳಾ ಪಾರ್ವತಿ,
ನೀಡಿದಳು ಆಕೃತಿಗೆ ದೇವಿ ಮಹಾಶಕ್ತಿ,
ಆ ರೂಪದಲ್ಲಿತ್ತು ದೇವಿಯಾ ಪರಿಣತಿ ।।ಪ।।
ಸ್ನಾನ ಗೃಹ ಕಾದನು ಆ ಪುಟ್ಟ ಬಾಲಕ,
ಅಲ್ಲಿಗೆ ಬಂದನು ಮೂಲೋಕ ನಾಯಕ,
ಶಿವನನ್ನೇ ತಡೆದನು ಆ ದ್ವಾರಪಾಲಕ,
ಕುಪಿತ ಶಿವನು ಆದನು ಶಿಶುವಿನ ಅಂತಕ ।।೧।।
ಶಿವೆಯು ಶಿಶುವಿಗಾಗಿ ಸುರಿಸಿದಾಗ ಕಂಬನಿ,
ಶಿವನು ಮರುಗಿ ನೀಡಿದನು ಸಂತೈಸೋ ಮಾರ್ದನಿ,
ಗಜಮುಖವ ಜೋಡಿಸಿದ ಗಜಚರ್ಮಾ೦ಬರಧರನು,
ಶಿವಗಣಕೆ ಪ್ರಧಾನಿಯಾದ ಅಂಬಿಕಾ ತನಯನು ।।೨।।
ದೇವಗಣ ಸಲ್ಲಿಸಿತು ಪುಷ್ಪ ಮಾಲಿಕೆ,
ಗಂಧರ್ವರು ಹಾಡಿದರು ರಾಗ ಮಾಲಿಕೆ,
ಇವನ ಸಾಟಿ ದೈವವಿಲ್ಲ ಲೋಕ ಲೋಕಕೆ,
ಈ ಮಹಾ ಗಣಪನಿಗೆ ಇಲ್ಲ ಹೋಲಿಕೆ,
ಗಣನಾಥ ಜೈ ಜೈ ಗಣನಾಥ ।।೩।।

No comments:
Post a Comment