Saturday, June 28, 2025

Mamateya Totada Malligeye (ಮಮತೆಯ ತೋಟದ ಮಲ್ಲಿಗೆಯೇ)

Movie: Chaduranga (1968)

Singers: S Janaki, P Susheela

Song link: Click Here


Mamateya totada malligeye, maruguve etake nee nudiye,

Devara hoovvidu baadihudu, poojege hosa hoo bekihudu ||


Veene halatu aadarenu, hommuva naada halatenu,

Tanti kadida veeneyolage, manjula naada bahudeno ||


Mellane gaali beesidarenu, teluva nouke muluguvude,

Saavira harake hottarenu, mulugida nouke teluvude ||


Devanu olidu nelasalu banda, mandiravallave ne munna,

Aa devana gudiya mangala belake, aaralu bidenu naninna ||


ಚಿತ್ರಗೀತೆ 


ಮಮತೆಯ ತೋಟದ ಮಲ್ಲಿಗೆಯೇ, ಮರುಗುವೆ ಏತಕೆ ನೀ ನುಡಿಯೇ,

ದೇವರ ಹೂವ್ವಿದು ಬಾಡಿಹುದು, ಪೂಜೆಗೆ ಹೊಸ ಹೂ ಬೇಕಿಹುದು 

।।ಪ।।


ವೀಣೆ ಹಳತು ಆದರೇನು, ಹೊಮ್ಮುವ ನಾದ ಹಳತೇನು,

ತಂತಿ ಕಡಿದಾ ವೀಣೆಯೊಳಗೆ, ಮಂಜುಳ ನಾದಾ ಬಹುದೇನೊ ।।೧।।


ಮೆಲ್ಲನೆ ಗಾಳಿ ಬೀಸಿದರೇನು, ತೇಲುವ ನೌಕೆ ಮುಳುಗುವುದೇ,

ಸಾವಿರ ಹರಕೆ ಹೊತ್ತರೆನೂ, ಮುಳುಗಿದ ನೌಕೆ ತೇಲುವುದೇ ।।೨।।


ದೇವನು ಒಲಿದು ನೆಲಸಲು ಬಂದಾ, ಮಂದಿರವಲ್ಲವೇ ನೀ ಮುನ್ನಾ,

ಆ ದೇವನ ಗುಡಿಯಾ ಮಂಗಳ ಬೆಳಕೆ, ಆರಲು ಬಿಡೆನು ನಾನಿನ್ನಾ 

।।೨।।

                                             

No comments:

Post a Comment