Movie: Nammura Mandara Hoove (1997)
Singer: Chitra
Song link: Click Here
Omkaradi kande prema nadava
Ee tanadi tande nee shubhodaya
Mandaravilli arali kampu suside
Sougandha hasa chelli ninna kadide
Ariyo iniya olava kareya ||
Madhura tana swaragala seri, oho ho ho ho.....
Jalala dhare jaladali jaari, oho ho ho ho.....
Aakashadache aa mounadi, aa taare eke ta telide
Bandaga arivu illi, tandeetitu olavu alli
Ariyo iniya olava nidhiya ||
Ninade gaana hrudayadi teli, oho ho ho ho.....
Layadi raga alegala beeri, oho ho ho ho.....
Ee geetegaade nee bhavana, ee baaligaade nee chetana
Sangeeta sudheya tumbi, madhurya manadi tande
Ariyo iniya olava saviya ||
ಚಿತ್ರಗೀತೆ
ಓಂಕಾರದಿ ಕಂಡೆ ಪ್ರೇಮ ನಾದವ
ಈ ತಾನದಿ ತಂದೆ ನೀ ಶುಭೋದಯ
ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ
ಸೌಗಂಧ ಹಾಸ ಚೆಲ್ಲಿ ನಿನ್ನ ಕಾದಿದೆ
ಅರಿಯೋ ಇನಿಯ ಒಲವಾ ಕರೆಯಾ ।।ಪ।।
ಮಧುರ ತಾನ ಸ್ವರಗಳ ಸೇರಿ, ಒಹೋ ಹೋ ಹೋ ಹೋ ..
ಜಲಲಾ ಧಾರೆ ಜಲದಲಿ ಜಾರಿ, ಒಹೋ ಹೋ ಹೋ ಹೋ ..
ಆಕಾಶದಾಚೆ ಆ ಮೌನದಿ, ಆ ತಾರೆ ಏಕೆ ತಾ ತೇಲಿದೆ
ಬಂದಾಗ ಅರಿವು ಇಲ್ಲಿ, ತಂದೀತು ಒಲವು ಅಲ್ಲಿ
ಅರಿಯೋ ಇನಿಯ ಒಲವಾ ನಿಧಿಯಾ ।।೧।।
ನಿನದೆ ಗಾನ ಹೃದಯದಿ ತೇಲಿ, ಒಹೋ ಹೋ ಹೋ ಹೋ ..
ಲಯದಿ ರಾಗ ಅಲೆಗಳ ಬೀರಿ, ಒಹೋ ಹೋ ಹೋ ಹೋ ..
ಈ ಗೀತೆಗಾದೆ ನೀ ಭಾವನಾ, ಈ ಬಾಳಿಗಾದೆ ನೀ ಚೇತನ
ಸಂಗೀತ ಸುಧೆಯ ತುಂಬಿ, ಮಾಧುರ್ಯ ಮನದಿ ತಂದೆ
ಅರಿಯೋ ಇನಿಯ ಒಲವ ಸವಿಯಾ ।।೨।।

No comments:
Post a Comment