Wednesday, May 10, 2023

Ee Kate (ಈ ಕತೆ)

Padya

Sahitya: G P Rajaratnam


Ondu kadina madhyadolage

Eradu maragala naduve malagi

Mooru karadigaladutidduvu

Naku marigala serisi.


Aidu janara betegararu

Aaru balegalaneledu tandu

Elu karadiya hididu nodade

'Entu hididevu' endaru.


'Ombatten' danu avaralobba

'Hattu' endanu bereyavanu

Enisi nodidarele elu-

Illigeekate mugiyitu.


ಪದ್ಯ 


ಒಂದು ಕಾಡಿನ ಮಧ್ಯದೊಳಗೆ 

ಎರಡು ಮರಗಳ ನಡುವೆ ಮಲಗಿ 

ಮೂರು ಕರಡಿಗಳಾಡುತಿದ್ದುವು 

ನಾಕು ಮರಿಗಳ ಸೇರಿಸಿ. 


ಐದು ಜನರಾ ಬೇಟೆಗಾರರು 

ಆರು ಬಲೆಗಳನೆಳೆದು ತಂದು 

ಏಳು ಕರಡಿಯ ಹಿಡಿದು ನೋಡದೆ 

'ಎಂಟು ಹಿಡಿದೆವು' ಎಂದರು. 


'ಒಂಬತೆ೦' ದನು ಅವರಲೊಬ್ಬ 

'ಹತ್ತು' ಎಂದನು ಬೇರೆಯವನು 

ಎಣಿಸಿ ನೋಡಿದರೆಳೇ ಏಳು -

ಇಲ್ಲಿಗೀಕತೆ ಮುಗಿಯಿತು.     

                   

No comments:

Post a Comment