Bhaktigeete
Singer: Dr. Rajkumar
Song link: Click Here
Om Om Om
Omkaradalli nodi iruvudondu sonne
Adaralu kooda kanuva namma ganapane
Vishwadalli ellellu iruva eetane
Vishwanatha poojisuva adi pojitane
Adi pojitane.. ||
Modaka ivanige priya naivedya, priya naivedya
Bhaktige koduvanu tanna sanidhya, tanna sanidhya
Ivanu taruva phalagalu vaividhya aa..
Ivaninda sakalavu sulabha sadhya ||
Jaya jaya jaya jaya gajavadana
Karunisu karunisu kari vadana
Masadalli bhadrapada ivanige ista, ivanige ista
Adarali shukla choutiyu shresta, choutiyu shresta
Intha yogadali poojise olidu aa..
Ganapa neeguvanu parama sankasta ||
Bhaktara bhaktanu bhaktavatsala, bhaktavatsala
Shaktara shaktanu mahabala, mahabala
Ivanu needuvanu siddhi buddhi ella aa..
Ganapana mahimege holike illa ||
ಭಕ್ತಿಗೀತೆ
ಓಂ ಓಂ ಓಂ
ಓಂಕಾರದಲ್ಲಿ ನೋಡಿ ಇರುವುದೊಂದು ಸೊನ್ನೆ
ಅದರಲೂ ಕೂಡ ಕಾಣುವ ನಮ್ಮಾ ಗಣಪನೆ
ವಿಶ್ವದಲ್ಲಿ ಎಲ್ಲೆಲ್ಲುಇರುವ ಈತನೆ
ವಿಶ್ವನಾಥ ಪೂಜಿಸುವ ಆದಿ ಪೂಜಿತನೆ
ಆದಿ ಪೂಜಿತನೆ .. ।।ಪ ।।
ಮೋದಕ ಇವನಿಗೆ ಪ್ರಿಯ ನೈವೇದ್ಯ, ಪ್ರಿಯ ನೈವೇದ್ಯ
ಭಕ್ತಿಗೆ ಕೊಡುವನು ತನ್ನ ಸಾನಿಧ್ಯ, ತನ್ನ ಸಾನಿಧ್ಯ
ಇವನು ತರುವ ಫಲಗಳು ವೈವಿಧ್ಯ ಆಆ ..
ಇವನಿಂದ ಸಕಲವು ಸುಲಭ ಸಾಧ್ಯ ।।೧।।
ಜಯ ಜಯ ಜಯ ಜಯ ಗಜವದನ
ಕರುಣಿಸು ಕರುಣಿಸು ಕರಿ ವದನ
ಮಾಸದಲ್ಲಿ ಭಾದ್ರಪದ ಇವನಿಗೆ ಇಷ್ಟ, ಇವನಿಗೆ ಇಷ್ಟ
ಅದರಲಿ ಶುಕ್ಲ ಚೌತಿಯು ಶ್ರೇಷ್ಠ, ಚೌತಿಯು ಶ್ರೇಷ್ಠ
ಇಂಥಾ ಯೋಗದಲಿ ಪೂಜಿಸೆ ಒಲಿದು ಆಆ ..
ಗಣಪ ನೀಗುವನು ಪರಮ ಸಂಕಷ್ಟ ।।೨।।
ಭಕ್ತರ ಭಕ್ತನು ಭಕ್ತವತ್ಸಲ, ಭಕ್ತವತ್ಸಲ
ಶಕ್ತರ ಶಕ್ತನು ಮಹಾಬಲ, ಮಹಾಬಲ
ಇವನು ನೀಡುವನು ಸಿದ್ಧಿ ಬುದ್ಧಿ ಎಲ್ಲಾ ಆಆ ..
ಗಣಪನ ಮಹಿಮೆಗೆ ಹೋಲಿಕೆ ಇಲ್ಲ ।।೩।।

No comments:
Post a Comment