Monday, January 23, 2023

Neerinalli Aleya Ungura (ನೀರಿನಲ್ಲಿ ಅಲೆಯ ಉಂಗುರ)

Movie: Bedi Bandavalu(1968)

Singer: P B Srinivas, P Susheela

Song linkClick Here


Neerinalli aleya ungura

Bhumi mele hoovinungura

Manaseleda nalla kottanalla

Kenne mele premadungura ||


Andigeyu kalinungura

Adara dani estu sundara

Taruvu latheyu serida katheyu

Tanuva balasi tolinungura ||


Maninalli kanda ungura

Hennu nachi geeridungura

Beralininda teedidungura

Kanna seleva kurulu gungura ||


Aage ninna kaiyya sanchara

Enna hrudayavondu dangura

Naanu nudiye kiviyalinchara

Haneya mele bevarinungura ||


ಚಿತ್ರಗೀತೆ 


ನೀರಿನಲ್ಲಿ ಅಲೆಯ ಉಂಗುರ 

ಭೂಮಿ ಮೇಲೆ ಹೂವಿನುಂಗುರ 

ಮನಸೆಳೆದ ನಲ್ಲ ಕೊಟ್ಟನಲ್ಲ 

ಕೆನ್ನೆ ಮೇಲೆ ಪ್ರೇಮದುಂಗುರ ।।ಪ ।।


ಅಂದಿಗೆಯು ಕಾಲಿನುಂಗುರ 

ಅದರ ದನಿ ಎಷ್ಟು ಸುಂದರ 

ತರುವು ಲತೆಯೂ ಸೇರಿದ ಕಥೆಯು 

ತನುವ ಬಳಸಿ ತೋಳಿನುಂಗುರ ।।೧।।


ಮಣ್ಣಿನಲ್ಲಿ ಕಂಡ ಉಂಗುರ 

ಹೆಣ್ಣು ನಾಚಿ ಗೀರಿದುಂಗುರ 

ಬೆರಳಿನಿಂದ ತೀಡಿದುಂಗುರ 

ಕಣ್ಣ ಸೆಳೆವ ಕುರುಳು ಗುಂಗುರ ।।೨।।


ಆಗೆ ನಿನ್ನ ಕೈಯ್ಯ ಸಂಚರ 

ಎನ್ನ ಹೃದಯವೊಂದು ಡಂಗುರ 

ನಾನು ನುಡಿಯೆ ಕಿವಿಯಲಿಂಚರ 

ಹಣೆಯ ಮೇಲೆ ಬೆವರಿನುಂಗುರ ।।೩।।



No comments:

Post a Comment