Padya
Sahitya: M V Seetaramayya (raghava)
Hoovanu maruta hoovadagitti
Haaduta barutihalu
'Ghama ghama hoogalu beke' enuta
Haaduta barutihalu ||
Bilupina mallige haladiya sampige
Hasurina hosa maruga
Haki kattiruve beke enuta
Haaduta barutihalu ||
Hosa sevantige hosa iruvantige
Arasina taleyide
Accha malleyali paccha tenegalu
Serida maleyide ||
Kampanu chelluva kempu gulabi
Aralida hosa kamala
Bilupina jaji haladiya jaji
Aralida bilikamala ||
bagebage hoogalu beke enuta
Haaduta barutihalu
Hoovanu maruva hoovadagitti
Haaduta barutihalu ||
ಪದ್ಯ
ಹೂವನು ಮಾರುತ ಹೂವಾಡಗಿತ್ತಿ
ಹಾಡುತ ಬರುತಿಹಳು
'ಘಮ ಘಮ ಹೂಗಳು ಬೇಕೇ' ಎನುತ
ಹಾಡುತ ಬರುತಿಹಳು ।।೧।।
ಬಿಳುಪಿನ ಮಲ್ಲಿಗೆ ಹಳದಿಯ ಸಂಪಿಗೆ
ಹಸುರಿನ ಹೊಸ ಮರುಗ
ಹಾಕಿ ಕಟ್ಟಿರುವೆ ಬೇಕೇ ಎನುತ
ಹಾಡುತ ಬರುತಿಹಳು ।।೨।।
ಹೊಸ ಸೇವಂತಿಗೆ ಹೊಸ ಇರುವಂತಿಗೆ
ಅರಸಿನ ತಾಳೆಯಿದೆ
ಅಚ್ಚ ಮಲ್ಲೆಯಲಿ ಪಚ್ಚ ತೆನೆಗಳು
ಸೇರಿದ ಮಾಲೆಯಿದೆ ।।೩।।
ಕಂಪನು ಚೆಲ್ಲುವ ಕೆಂಪು ಗುಲಾಬಿ
ಅರಳಿದ ಹೊಸ ಕಮಲ
ಬಿಳುಪಿನ ಜಾಜಿ ಹಳದಿಯ ಜಾಜಿ
ಅರಳಿದ ಬಿಳಿಕಮಲ ।।೪।।
ಬಗೆಬಗೆ ಹೂಗಳು ಬೇಕೇ ಎನುತ
ಹಾಡುತ ಬರುತಿಹಳು
ಹೂವನು ಮಾರುವ ಹೂವಾಡಗಿತ್ತಿ
ಹಾಡುತ ಬರುತಿಹಳು ।।೫।।

No comments:
Post a Comment