Friday, September 9, 2022

Yava Janmada Maitri (ಯಾವ ಜನ್ಮದ ಮೈತ್ರಿ )


Bhavageete

Sahitya: Kuvempu

Song link: Click Here


Yava janmada maitri

Ee janmadali bandu

Nammibbaranu matte

Bandisihudo...... kane!


Elliddarenante

Ninna noliyade maane

Gurudevanane, o nanna necchina bandhu! ||yava||


Vishwa jeevanavondu paravillada sindhu

Mele tere noreyeddu

Bhorgareyutire regi

Adarantaraladali guptagaminiyagi;

Hrudayagalu naliyutive 

Prema thirtadi mindu! ||yava||


Adararthagirthagalu srusti karthanigirali

Vyartha jijnaseyali kala haranavadeke?

Barayya, mamabandhu, jeevanapathadolavu

Ondagi munduvariyuva ||yava||


ಭಾವಗೀತೆ 


ಯಾವ ಜನ್ಮದ ಮೈತ್ರಿ 

ಈ ಜನ್ಮದಲಿ ಬಂದು 

ನಮ್ಮಿಬ್ಬರನು ಮತ್ತೆ 

ಬಂಧಿಸಿಹುದೋ .... ಕಾಣೆ !


ಎಲ್ಲಿದ್ದರೇನಂತೆ 

ನಿನ್ನ ನೊಲಿಯದೆ ಮಾಣೆ 

ಗುರುದೇವನಾಣೆ 

ಓ ನನ್ನ ನೆಚ್ಚಿನ ಬಂಧು ! ।।ಯಾವ ।।


ವಿಶ್ವ ಜೀವನವೊಂದು 

ಪಾರವಿಲ್ಲದ ಸಿಂಧು !

ಮೇಲೆ ತೆರೆ ನೊರೆಯೆದ್ದು 

ಭೋರ್ಗರೆಯುತಿರೆ ರೇಗಿ 

ಅದರಂತರಾಳದಲಿ ಗುಪ್ತಗಾಮಿನಿಯಾಗಿ 

ಹೃದಯಗಳು ನಲಿಯುತಿವೆ 

ಪ್ರೇಮ ತೀರ್ಥದಿ ಮಿಂದು ! ।।ಯಾವ|| 


ಅದರರ್ಥಗಿರ್ಥಗಳು ಸೃಷ್ಟಿ ಕರ್ತನಿಗಿರಲಿ 

ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ ?

ಬಾರಯ್ಯ , ಮಮಬಂಧು , ಜೀವನಪಥದೊಳಾವು 

ಒಂದಾಗಿ ಮುಂದುವರಿಯುವ  ।।ಯಾವ ।।



No comments:

Post a Comment