Wednesday, September 7, 2022

Naranadamele Harinama Jihveyolirabeku (ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು)

Bhaktigeete

Sri Purandara Dasara Keerthanegalu

Song link: Click Here


Raga: Naadanamakriye

Tala: Aaditala


Naranadamele harinama jihveyolirabeku


Bhuta dayaparanagirabeku

Patakavellava kaleyalubeku

Matumatige hariyennabeku ||1||


Aaru varga vanaliyalubeku

Mooru gunagala meeralu beku

Seri bhramanolirabeku ||2||


Asta madamgala tuliyalubeku

Dustara sangava bidalu beku

Krishna keshava ennabeku ||3||


Veda shastrava nodalubeku

Bedha ahankarava neegalu beku

Madhava smaraneyolirabeku ||4||


Shanti kshame daye pidiyalubeku

Bhranti krodava kaleyalubeku

Santara sangadi ratiyirabeku ||5||


Guruvina charanakkeragalu beku

Tarunopayava nariyalubeku

Virakti margadalirabeku ||6||


Bandaddundu sukisalubeku

Ninda stutigala talalubeku

Tande purandara vittalananennabeku ||7||          ||sri||


ಭಕ್ತಿಗೀತೆ 


ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು ।।ಪ ।।


ಭೂತ ದಯಾಪರನಾಗಿರಬೇಕು 

ಪಾತಕವೆಲ್ಲವ ಕಳೆಯಲುಬೇಕು 

ಮಾತುಮಾತಿಗೆ ಹರಿಯೆನ್ನಬೇಕು ।।೧।।


ಆರು ವರ್ಗವ ನಳಿಯಲುಬೇಕು 

ಮೂರು ಗುಣಗಳ ಮೀರಲು ಬೇಕು 

ಸೇರಿ ಬ್ರಹ್ಮನೊಳಿರಬೇಕು ।।೨।।


ಅಷ್ಟ ಮದಂಗಳ ತುಳಿಯಲುಬೇಕು 

ದುಷ್ಟರ ಸಂಗವ ಬಿಡಲು ಬೇಕು 

ಕೃಷ್ಣ ಕೇಶವ ಎನ್ನಬೇಕು ।।೩।।


ವೇದ ಶಾಸ್ತ್ರವ ನೋದಲುಬೇಕು 

ಬೇಧ ಅಹಂಕಾರವ ನೀಗಲು ಬೇಕು 

ಮಾಧವ ಸ್ಮರಣೆಯೊಳಿರಬೇಕು ।।೪।।


ಶಾಂತಿ ಕ್ಷಮೆ ದಯೆ ಪಿಡಿಯಲುಬೇಕು 

ಭ್ರಾಂತಿ ಕ್ರೋಧವ ಕಳೆಯಲುಬೇಕು 

ಸಂತರ ಸಂಗದಿ ರತಿಯಿರಬೇಕು ।।೫।।


ಗುರುವಿನ ಚರಣಕ್ಕೆರಗಲು ಬೇಕು 

ತರುಣೋಪಾಯವ ನರಿಯಲುಬೇಕು 

ವಿರಕ್ತಿ ಮಾರ್ಗದಲಿರಬೇಕು ।।೬।।


ಬಂದದ್ದುಂಡು ಸುಖಿಸಲು ಬೇಕು 

ನಿಂದಾ ಸ್ತುತಿಗಳ ತಾಳಲುಬೇಕು 

ತಂದೆ ಪುರಂದರ ವಿಠ್ಠಲನ ನೆನ್ನಬೇಕು ।।೭।।      ।।ಶ್ರೀ ।।



No comments:

Post a Comment