Movie: Sri Krishna Garudi (1958)
Singer: PB Sreenivas
Song link: Click HereBombe aatavayya brahmandave
Aa devanaduva bombeyatavayya
Ambujanabhana antyavilladatana
Tumbu mayavayya ee leeleya ||
Jagava srujisi gati sutravanadisi
Nagu naguta kunisi maaye beesi
Ragada bhogada uriyolu nillisi
Hagomme heegomme aadisi ta naliva ||
Nee saaki salahi swarthaveno
Nee kadi kanale antaryaveno
Tiliheleya ola marma toreya
Nalinaksha ninnaya, Sankalpavenayya ||
Ninnavara stiti gati neleyilladage
Ninage sammatave ee reeti mouna
Kivigottu dayavittu poreyo maharaya
Avatara murthy, innekayya ee shanti ||
Abimana neegisi, arivanu torisi
Anndhate kalevantha akilanda nayaka
Virasavo, sarasavo, sako sakayya
Karuniso jeeya, suranuta chinmaya ||
ಚಿತ್ರಗೀತೆ
ಬೊಂಬೆಯಾಟವಯ್ಯ ಬ್ರಹ್ಮಾಂಡವೇ
ಆ ದೇವನಾಡುವ ಬೊಂಬೆಯಾಟವಯ್ಯ
ಅಂಬುಜನಾಭನ ಅಂತ್ಯವಿಲ್ಲದಾತನ
ತುಂಬು ಮಾಯವಯ್ಯ ಈ ಲೀಲೆಯ ।।ಪ।।
ಜಗವ ಸೃಜಿಸಿ ಗತಿ ಸೂತ್ರವನಾಡಿಸಿ
ನಗುನಗುತಾ ಕುಣಿಸಿ ಮಾಯೆ ಬೀಸಿ
ರಾಗದಾ ಭೋಗದ ಉರಿಯೊಳು ನಿಲ್ಲಿಸಿ
ಹಾಗೊಮ್ಮೆ ಹೀಗೊಮ್ಮೆ ಆಡಿಸಿ ತಾ ನಲಿವ ।।೧।।
ನೀಸಾಕಿ ಸಲಹಿ ಸ್ವಾರ್ಥವೇನು
ನೀ ಕಾಡಿ ಕನಲೆ ಆಂತರ್ಯವೇನು
ತಿಳಿಹೇಳೆಯಾ ಒಳ ಮರ್ಮ ತೋರೆಯಾ
ನಳಿನಾಕ್ಷ ನಿನ್ನಯ ಸಂಕಲ್ಪವೇನಯ್ಯಾ ।।೨।।
ನಿನ್ನವರ ಸ್ಥಿತಿ ಗತಿ ನೆಲೆಯಿಲ್ಲದಾಗೇ
ನಿನಗೆ ಸಮ್ಮತವೇ ಈ ರೀತಿ ಮೌನ
ಕಿವಿಗೊಟ್ಟು ದಯವಿಟ್ಟು ಪೊರೆಯೋ ಮಹಾರಾಯ
ಅವತಾರ ಮೂರ್ತಿ, ಇನ್ನೇಕಯ್ಯಾ ಈ ಶಾಂತಿ ।।೩।।
ಅಭಿಮಾನ ನೀಗಿಸಿ, ಅರಿವನು ತೋರಿಸಿ
ಅಂಧತೆ ಕಳೆವಂಥ ಅಖಿಲಾಂಡ ನಾಯಕ
ವಿರಸವೋ ಸರಸವೋ , ಸಾಕೋ ಸಾಕಯ್ಯ
ಕರುಣಿಸೋ ಜೀಯಾ, ಸುರನುತ ಚಿನ್ಮಯ ।।೪।।

No comments:
Post a Comment