Bhavageete
Sahitya: G S Shivarudrappa
Song link: Click Here
Hadu haleyadadarenu
Bhava navanaveena
Edeya bhava hommuvudake
Bashe ondu sadhana ||
Haleya hada hadu matte
Adane keli taniyuve
Haleya hadininda hosatu
Jeevanavane kattuve ||hadu||
Hadanolidu keluvanitu
Tereda hrudaya nanagide
Astu saku; hadu neenu
Adane keli sukhisuve ||hadu||
Hammu bimmu ondu illa
Hadu, hrudaya teredide
Hadinalli karagi bidalu
Nanna manavu kadide |hadu||
ಭಾವಗೀತೆ
ಹಾಡು ಹಳೆಯದಾದರೇನು
ಭಾವ ನವ ನವೀನ
ಎದೆಯ ಭಾವ ಹೊಮ್ಮುವುದಕೆ
ಭಾಷೆ ಒಂದು ಸಾಧನ ।।ಪ ।।
ಹಳೆಯ ಹಾಡ ಹಾಡು ಮತ್ತೆ
ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು
ಜೀವನವನೆ ಕಟ್ಟುವೆ ।।೧।।
ಹಾಡನೊಲಿದು ಕೇಳುವನಿತು
ತೆರೆದ ಹೃದಯ ನನಗಿದೆ
ಅಷ್ಟೆ ಸಾಕು ; ಹಾಡು ನೀನು
ಅದನೆ ಕೇಳಿ ಸುಖಿಸುವೆ ।।೨।।
ಹಮ್ಮು ಬಿಮ್ಮು ಒಂದೂ ಇಲ್ಲ
ಹಾಡು , ಹೃದಯ ತೆರೆದಿದೆ
ಹಾಡಿನಲ್ಲಿ ಕರಗಿ ಬಿಡಲು
ನನ್ನ ಮನವು ಕಾದಿದೆ ।।೩।।

No comments:
Post a Comment