Bhavageete
Sahitya: kuvempu
Song link: Click Here
Mucchumare illadeye
Ninna mundellavanu
Bicchiduve o guruve antaratma
Papavide, punyavide
Narakavide, nakavide
Swikarisisu o guruve antaratma ||
Ravige kantiyaneeva ninna kannikshisalu
Papa tanuliyuvude papavagi
Gange tanubhavipa ninnadiya sonkinge
Naraka tanuliyuvude narakavagi ||mucchumare||
Saanta ritiyanemmi kadadiruvudennatma
Nanta ritiyu adento o ananta
Nanna neetiya kurudinindenna rakshisai
Ninna preetiya belakina anandake ||mucchumare||
ಭಾವಗೀತೆ
ಮುಚ್ಚುಮರೆ ಇಲ್ಲದೆಯೇ
ನಿನ್ನ ಮುಂದೆಲ್ಲವನು
ಬಿಚ್ಚಿಡುವೆ ಓ ಗುರುವೇ ಅಂತರಾತ್ಮ
ಪಾಪವಿದೆ , ಪುಣ್ಯವಿದೆ
ನರಕವಿದೆ , ನಾಕವಿದೆ
ಸ್ವೀಕರಿಸು ಓ ಗುರುವೇ ಅಂತರಾತ್ಮ ।।ಪ ।।
ರವಿಗೆ ಕಾಂತಿಯನೀವ ನಿನ್ನ ಕಣ್ಣೇಕ್ಷಿಸಲು
ಪಾಪ ತಾನುಳಿಯುವುದೇ ಪಾಪವಾಗಿ
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೆ
ನರಕ ತಾನುಳಿಯುವುದೇ ನರಕವಾಗಿ ।।೧।।
ಸಾಂತ ರೀತಿಯನೆಮ್ಮಿ ಕದಡಿರುವುದೆನ್ನಾತ್ಮ
ನಾಂತ ರೀತಿಯು ಅದೆಂತೋ ಓ ಅನಂತ
ನನ್ನ ನೀತಿಯ ಕುರುಡಿನಿಂದೆನ್ನ ರಕ್ಷಿಸೈ
ನಿನ್ನ ಪ್ರೀತಿಯ ಬೆಳಕಿನ ಆನಂದಕೆ ।।೨।।

No comments:
Post a Comment