Bhavageete
Sahitya: H S Venktesh Murthy
Song link: Click Here
Istu kala ottigiddu, estu beretaru
Aritevenu navu namma anntaralava
Kadala mele saviraru, maili sagiyu
Neerinala tiliyitenu hayi donige ||istu||
Sada kala tabbuvante mele bagiyu
Manna muttu dorakitenu neeli banige ||istu||
Saviraru mukhada cheluva, hididu toriyu
Ondadaru uliyite kannadiya palige ||istu||
ಭಾವಗೀತೆ
ಇಷ್ಟು ಕಾಲ ಒಟ್ಟಿಗಿದ್ದು ,ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ ।।ಪ ।।
ಕಡಲ ಮೇಲೆ ಸಾವಿರಾರು ,ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ ।।೧।।
ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ ।।೨।।
ಸಾವಿರಾರು ಮುಖದ ಚೆಲುವ ,ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ ।।೩।।

No comments:
Post a Comment