Movie: Bhale Basava (1969)
Singer: S Janaki
Song link: Click Here
O ho ho bhale basava, maatado beedi basava,
Ballekano kole basava, ninna manava ninna manava ||
Mooru aaneyante balava, hondiruva ee basava,
Chigurumeese jigijigisutta, theevi inda nadedu baruva,
Odillada jaananiva, maneyavara prananiva,
Hennendare doora doora, eke odi hoguva ||
Maradinda marake negeva, hanumantana sishyaniva,
Kallinanta maiyinava, belladantha manasinava,
Eke doora jaaruva, siduki siduki noduva,
Ee basava kaddiruva, nanna manava nanna manava ||
Bhudeviye nanna tayi, endu manadi nambiruva,
Negile devarendu poojeyannu maaduva,
Manninalle chinnava, beleva aase hondiha,
Eey gange kaiya hididare taane, phalava basava kaanuva ||
ಚಿತ್ರಗೀತೆ
ಓ ಹೋ ಹೋ ಭಲೇ ಬಸವಾ, ಮಾತಾಡೋ ಬೀದೀ ಬಸವಾ,
ಬಲ್ಲೆ ಕಣೋ ಕೋಲೇ ಬಸವಾ, ನಿನ್ನಾ ಮನವಾ ನಿನ್ನ ಮನವಾ
।।ಪ।।
ಮೂರು ಆನೆಯಂತೆ ಬಲವಾ, ಹೊಂದಿರುವ ಈ ಬಸವಾ,
ಚಿಗುರುಮೀಸೆ ಜಿಗಿಜಿಗಿಸುತ್ತಾ, ಠೀವಿಯಿಂದ ನಡೆದೂ ಬರುವಾ,
ಓದಿಲ್ಲದ ಜಾಣನಿವಾ, ಮನೆಯವರ ಪ್ರಾಣನಿವಾ,
ಹೆಣ್ಣೆಂದರೆ ದೂರ ದೂರ, ಏಕೆ ಓಡಿ ಹೋಗುವಾ ।।೧।।
ಮರದಿಂದ ಮರಕೆ ನೆಗೆವಾ, ಹನುಮಂತನ ಶಿಷ್ಯನಿವಾ,
ಕಲ್ಲಿನಂತ ಮೈಯಿನವಾ, ಬೆಲ್ಲದಂಥ ಮನಸಿನವಾ,
ಏಕೆ ದೂರ ಜಾರುವ, ಸಿಡುಕಿ ಸಿಡುಕಿ ನೋಡುವಾ,
ಈ ಬಸವಾ ಕದ್ದಿರುವಾ, ನನ್ನಾ ಮನವಾ ನನ್ನ ಮನವಾ ।।೨।।
ಭೂದೇವಿಯೆ ನನ್ನ ತಾಯಿ, ಎಂದು ಮನದಿ ನಂಬಿರುವ,
ನೇಗಿಲೇ ದೇವರೆಂದು ಪೂಜೆಯನ್ನು ಮಾಡುವಾ,
ಮಣ್ಣಿನಲ್ಲೇ ಚಿನ್ನವಾ, ಬೆಳೆವ ಆಸೆ ಹೊಂದಿಹಾ,
ಏಯ್ ಗಂಗೆ ಕೈಯ ಹಿಡಿದರೆ ತಾನೇ, ಫಲವಾ ಬಸವಾ ಕಾಣುವಾ
।।೩।।



