Wednesday, May 14, 2025

Aakashadaage Yaro (ಆಕಾಶದಾಗೆ ಯಾರೊ)

Movie: Ramachari (1991)

Singers: Manu, S Janaki

Song link: Click Here


Aakashadage yaaro mayagaranu,

Chittara madi hogone,

Ee bhumi myage yaaro totagaranu,

Malenada maadi hogone,

Belli hakki aagi, haari hogi naavu,

Sanchara maaduva baara..!


Suddi illade moda shuddiyagodu,

Sadde illade gandha gaaliyagodu,

Tantene maadade, hottutti hogodu,

Enenu maadade, navyake baalodu!


Haaro hakkina, tandu koodi hakodu,

Katto jenanna, suttu tindu haakodu,

Naramanusha kaliyalla, olledu ulisolla,

Ava nadeyo daarili, garikenu beliyolla,

Chilipiligala sarigama kiviyolage,

Neeralegala takadhimi edeyolage,

Belli hakki aagi, haari hogi naavu,

Sanchara maaduva baara..!


Kaadu suttuva aase ranigekamma,

Kaalu ittare sutha kallu mullamma,

Elodu beelodu, badavara paadamma,

Neevyake haadiri, ee halli haadamma..!


Illi beesuva gaali, oorallyakilla,

Illi sikkuva patha, shalelyakilla,

Bangara singara, saakagi hoyitu,

Aramane aananda, besattu hoyitu,

Kelagilisuva manasina bharagala,

Jigijigiyuva chitteya guddaga,

Belli hakki aagi, haari hogi naavu,

Sanchara maaduva baara..!


ಚಿತ್ರಗೀತೆ 


ಆಕಾಶದಾಗೆ ಯಾರೊ ಮಾಯಗಾರನು,

ಚಿತ್ತಾರ ಮಾಡಿ ಹೋಗೋನೇ,

ಈ ಭೂಮಿ ಮ್ಯಾಗೆ ಯಾರೊ ತೋಟಗಾರನು,

ಮಲೆನಾಡ ಮಾಡಿ ಹೋಗೋನೇ,

ಬೆಳ್ಳಿ ಹಕ್ಕಿ ಆಗಿ, ಹಾರಿ ಹೋಗಿ ನಾವು,

ಸಂಚಾರ ಮಾಡುವಾ ಬಾರಾ ..!


ಸುದ್ದಿ ಇಲ್ಲದೆ ಮೋಡ ಶುದ್ದಿಯಾಗೋದು,

ಸದ್ದೇ ಇಲ್ಲದೆ ಗಂಧ ಗಾಳಿಯಾಗೋದು,

ತಂಟೇನೆ ಮಾಡದೆ, ಹೊತ್ತುಟ್ಟಿ ಹೋಗೋದು,

ಏನೇನು ಮಾಡದೆ, ನಾವ್ಯಾಕೆ ಬಾಳೋದು..!


ಹಾರೋ ಹಕ್ಕೀನ, ತಂದು ಕೂಡಿ ಹಾಕೋದು,

ಕಟ್ಟೋ ಜೇನನ್ನ, ಸುಟ್ಟು ತಿಂದು ಹಾಕೋದು,

ನರಮನುಷ ಕಲಿಯಲ್ಲ, ಒಳ್ಳೇದು ಉಳಿಸೋಲ್ಲ,

ಅವ ನಡೆಯೊ ದಾರೀಲಿ, ಗರಿಕೇನೂ ಬೆಳಿಯೋಲ್ಲ,

ಚಿಲಿಪಿಲಿಗಳ ಸರಿಗಮ ಕಿವಿಯೊಳಗೇ,

ನೀರಲೆಗಳ ತಕಧಿಮಿ ಎದೆಯೊಳಗೇ,

ಬೆಳ್ಳಿ ಹಕ್ಕಿ ಆಗಿ, ಹಾರಿ ಹೋಗಿ ನಾವು, 

ಸಂಚಾರ ಮಾಡುವಾ  ಬಾರಾ ..!


ಕಾಡು ಸುತ್ತುವ ಆಸೆ ರಾಣಿಗೇಕಮ್ಮ,

ಕಾಲು ಇಟ್ಟರೆ ಸುತ್ತ ಕಲ್ಲು ಮುಳ್ಳಮ್ಮ,

ಏಳೋದು ಬೀಳೋದು, ಬಡವರ ಪಾಡಮ್ಮ,

ನೀವ್ಯಾಕೆ ಹಾಡೀರಿ, ಈ ಹಳ್ಳಿ ಹಾಡಮ್ಮ..!


ಇಲ್ಲಿ ಬೀಸುವ ಗಾಳಿ, ಊರಲ್ಲ್ಯಾಕಿಲ್ಲ,

ಇಲ್ಲಿ ಸಿಕ್ಕುವ ಪಾಠ, ಶಾಲೆಲ್ಲ್ಯಾಕಿಲ,

ಬಂಗಾರ ಸಿಂಗಾರ, ಸಾಕಾಗಿ ಹೋಯಿತು, 

ಅರಮನೆ  ಆನಂದ, ಬೇಸತ್ತು ಹೋಯಿತು,

ಕೆಳಗಿಳಿಸುವ ಮನಸಿನ ಭಾರಗಳಾ,

ಜಿಗಿಜಿಗಿಯುವ ಚಿತ್ತೆಯ ಗುಡ್ಡಗಳಾ,

ಬೆಳ್ಳಿ ಹಕ್ಕಿ ಆಗಿ, ಹಾರಿ ಹೋಗಿ ನಾವು, 

ಸಂಚಾರ ಮಾಡುವಾ  ಬಾರಾ ..!

              

No comments:

Post a Comment