Thursday, July 4, 2024

Aananda Gokula Navanandana (ಆನಂದ ಗೋಕುಲ ನವನಂದನ)

Movie: Bhagyodaya (1956)

Singers: R Balasaraswati, K Rani

              Subrahmanyam

Song link: Click Here


Aananda gokula navanandana, namma

Anuraaga jeevana brundavana ||


Asha jeevana shantiniketana

Aa yamuna tata paavana

Samarasa bhava tumbida jeevana

Nammaya baalina brundavana ||


Radhamadhava premasamaagama

Madhura manohara kavya pradhana

Janapada leela navarasagaana

Mangalagokula brundavana ||


ಚಿತ್ರಗೀತೆ 


ಆನಂದ ಗೋಕುಲ ನವನಂದನ, ನಮ್ಮ 

ಅನುರಾಗ ಜೀವನ ಬೃಂದಾವನ ।।ಪ।।


ಆಶಾಜೀವನ ಶಾಂತಿನಿಕೇತನ 

ಆ ಯಮುನಾ ತಟ ಪಾವನ 

ಸಮರಸಭಾವ ತುಂಬಿದ ಜೀವನ 

ನಮ್ಮಯ ಬಾಳಿನ ಬೃಂದಾವನ ।।೧।।


ರಾಧಾ ಮಾಧವ ಪ್ರೇಮ ಸಮಾಗಮ 

ಮಧುರ ಮನೋಹರ ಕಾವ್ಯ ಪ್ರಧಾನ 

ಜನಪದ ಲೀಲಾ ನವರಸಗಾನ 

ಮಂಗಳ ಗೋಕುಲ ಬೃಂದಾವನ ।।೨।।

              

Wednesday, July 3, 2024

Vani Veena Paani (ವಾಣೀ ವೀಣಾ ಪಾಣೀ)

Movie: Bhagyodaya (1956)

Singer: Balasaraswathi Devi

Song link: Click Here


Namaste sharada devi shringeri puravasini

Tvamaham prarthaye nityam snehatva mangikuru ||


Vani veena paani

Mano vilaasini kalyani ||


Prashanta roopini prapancha janani

Patita paavani geervani ||


Madhura sudhayini kavita vahini

Sanmati dehi shreevani

Amma neeye lalita kalanidhi

Kannada vanmaya vijaya payonidhi || 


ಚಿತ್ರಗೀತೆ 


ನಮಸ್ತೇ ಶಾರದಾದೇವಿ ಶೃಂಗೇರಿ ಪುರವಾಸಿನೀ 

ತ್ವಾಮಹಂ ಪ್ರಾರ್ಥಯೇ ನಿತ್ಯಂ ಸ್ನೇಹತ್ವ ಮಂಗೀಕುರು ।।


ವಾಣೀ ವೀಣಾ ಪಾಣೀ 

ಮನೋ ವಿಲಾಸಿನಿ ಕಲ್ಯಾಣಿ ।।೧।।


ಪ್ರಶಾಂತ ರೂಪಿಣಿ ಪ್ರಪಂಚ ಜನನೀ 

ಪತಿತ ಪಾವನೀ ಗೀರ್ವಾಣಿ ।।೨।।


ಮಧುರ ಸುಧಾಯಿನಿ ಕವಿತಾ ವಾಹಿನಿ 

ಸನ್ಮತಿ ದೇಹಿ ಶ್ರೀವಾಣೀ 

ಅಮ್ಮಾ ನೀಯೇ ಲಲಿತ ಕಲಾನಿಧಿ 

ಕನ್ನಡ ವಾಙ್ಮಯ ವಿಜಯ ಪಯೋನಿಧಿ ।।೩।।

               



Monday, July 1, 2024

Ondu Ondu Eradu Adre (ಒಂದು ಒಂದು ಎರಡು ಆದ್ರೆ)

 ಪದ್ಯ 

ಸಾಹಿತ್ಯ: ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ 

 ಲಿಂಕ್: Click Here


"ಒಂದು ಒಂದು ಎರಡು ಆದ್ರೆ 

ಎರಡು ಎರಡು ?" - "ನಾಲ್ಕು

ನಾಲ್ಕು ಚಕ್ಲಿ ಬೇಕು !"


"ಎರಡು ಎರಡು ನಾಲ್ಕು ಸರಿ 

ಮೂರು ಮೂರು ?" - "ಆರು 

ಆರು ಲೋಟ ಖೀರು !"


"ಮೂರು  ಮೂರು ಆರು ಹೌದು 

ನಾಲ್ಕು ನಾಲ್ಕು ?" - "ಎಂಟು 

ಬಿಚ್ಚು ತಿಂಡಿ ಗಂಟು !"


"ನಾಲ್ಕು ನಾಲ್ಕು ಎಂಟು, ಎಲ್ಲಿ  

ಐದು ಐದು ?" - "ಹತ್ತು 

ಉಂಡೆ ಜೆಬಿಗ್ ಬಿತ್ತು !"


"ಐದು ಐದು ಹತ್ತು, ಈಗ  

ಆರು ಆರು ?" - "ತಾಳಿ 

ತಿಂಡಿ ಬಂತು ಏಳಿ ". 


Padya


"Ondu ondu eradu aadre

Eradu eradu?" - "nalku

Nalku chakli beku!"


"Eradu eradu nalku sari

Mooru mooru?" - "aaru

Aaru lota kheeru!"


"Mooru mooru aaru houdu

Nalku nalku?" - "entu

Bicchu tindi gantu!"


"Nalku nalku entu, elli

Aidu aidu?" -  "hattu

Unde jebig bittu!"


"Aidu aidu hattu, eega

Aaru aaru?" - "taali

Tindi bantu eli".

       

Ger Ger Manganna (ಗೇರ್ ಗೇರ್ ಮಂಗಣ್ಣ)

ಪದ್ಯ 

ಸಾಹಿತ್ಯ: ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ 

 ಲಿಂಕ್: Click Here


ಗೇರ್ ಗೇರ್ ಮಂಗಣ್ಣ 

ಕಡ್ಲೆಕಾಯ್ ನುಂಗಣ್ಣ 

ಕೊಂಬೆಯಿಂದ ಕೊಂಬೆಗೆ 

ಹೈಜಂಪ್ ಮಾಡೋ ಹನುಮಣ್ಣ !


ಆಟಕ್ ಕರಕೋ ನನ್ನನ್ನೂ 

ಲಾಗ ಹಾಕ್ತಿನ್ ನಾನೂನೂ,

ಜೇಬಿನ ತುಂಬ ತಿಂಡೀನ 

ತಂದೀದೀನಿ ನಿನಗೂನು !


ಬೇರೆ ಕೋತಿ ಬೆನ್ನಿಂದ 

ಹೇನು ಹೆಕ್ಕೋದ್ ಯಾಕಪ್ಪ ?

ಹೆಕ್ಕಿ ಅದನ್ನೆ ತಿಂತೀಯ 

ಥೂ,ಥೂ ಕೊಳಕಪ್ಪ 


ಮರದ್ ತುಂಬ ಚೇಪೇಕಾಯ್ 

ಎಲ್ಲ ನಿಂಗೇ ಯಾಕಣ್ಣಾ ?

ಎರಡೇ ಎರಡು ಕಾಯನ್ನ 

ಕಿತ್ತು ತಮ್ಮಂಗ್ ಹಾಕಣ್ಣಾ !


ಒಂದೇ ಗೇಣು ಇದೀಯ 

ಲಂಕೆಗೆ ಹಾರಿದ್ಯ೦ತಲ್ಲ !

ಲಂಕೇಗ್ ಬೆಂಕಿ ಇಟ್ಯ೦ತೆ 

'ಮಂಕೀ' ಅಂದ್ರೆ ನೀನಲ್ವ ?


ಪಿಳ್ ಪಿಳಾ೦ತ ಕಣ್ಬಿಟ್ಟು 

ಹಲ್ ಕಿರಿಯೋದು ಯಾಕಣ್ಣಾ ?

ನಿನ್ಹಾಗೇನೇ ಆಡ್ತಾನೆ - ನಮ್ 

ಪಕ್ಕದ ಮನೆ ರಂಗಣ್ಣ !


Padya


Ger ger manganna

Kadlekai nunganna

Kombeyinda kmbege

Haijump mado hanumanna!


Aatak karko nannanu

Laaga hakteen nanunu,

Jebina tumba tindeena

Tandideeni ninagunu!


Bere koti benninda

Henu hekkod yakappa?

Hekki adanne tinteeya

Thu thu kolakappa!


Marad tumba chepekai

Ella ninge yakanna?

Erade eradu kayanna

Kittu tammang hakanna!


Onde genu ideeya

Lankege haridyantalla!

Lankeg benki ityante

'Monkey' andre neenalva?


Pil pilaanta kannbittu

Hal kiriyodu yakanna?

Ninhaagene aadtane- nam

Pakkad mane ranganna!

            



Saturday, June 29, 2024

Nammura Kerigalalli Habbada Ullasa (ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ)

Movie: Bangarada Kalasha (1995)

Singers: SPB, K S Chitra

Song link: Click Here


Nammura kerigalalli habbada ullasa, 

Nammellara kannugalalli hommide santosha,

Ellellu utsaha jigidaaduva aavesha ||


Muddina magane barali, nanna mava ennali,

Gejje kalina hejje haakali, todalu maatanadali

Attige nanage barali, avalige magalaagali,

Soseyagi mane serali, nanna atte ennali,

Seemantada shubhava kori, nanna tangiya harasi haadi,

NiSaRi SaSaNiSaNiDaPa MaMaDaPaMa SaSaRiGaRi ||


Kolu kolu kolanna kolu kole, chinnada rannada kolu kole,

Urige yajamana mava daanadalli shuraniva,

Daana shoora karnaniva,

Jhari seeri bangarava sosegagi koduva, 

Jhari seere taruva, bangarava koduva

Mojanu taruva, harusha ukki holeyagide, mana tumbide tulukadide,

Aparupada khushige,

Ellellu aanandave kuniva naavu naliva naavu,

Taagatakka takkajhana tanaanana tanaanaa ||


ಚಿತ್ರಗೀತೆ 


ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ, 

ನಮ್ಮೆಲ್ಲರ ಕಣ್ಣುಗಳಲ್ಲಿ ಹೊಮ್ಮಿದೆ ಸಂತೋಷ,

ಎಲ್ಲೆಲ್ಲೂ ಉತ್ಸಾಹ ಜಿಗಿದಾಡುವ ಆವೇಶ ।।ಪ।।


ಮುದ್ದಿನ ಮಗನೇ ಬರಲಿ ನನ್ನ ಮಾವ ಎನ್ನಲಿ,

ಗೆಜ್ಜೆ ಕಾಲಿನ ಹೆಜ್ಜೆ ಹಾಕಲಿ ತೊದಲು ಮಾತನಾಡಲಿ,

ಅತ್ತಿಗೆ ನನಗೆ ಬರಲಿ ಅವಳಿಗೆ ಮಗಳಾಗಲಿ, 

ಸೊಸೆಯಾಗಿ ಮನೆ ಸೇರಲಿ, ನನ್ನ ಅತ್ತೆ ಎನ್ನಲಿ,

ಸೀಮಂತದ ಶುಭವ ಕೋರಿ, ನನ್ನ ತಂಗಿಯ ಹರಸಿ ಹಾಡಲಿ 

ನಿಸರಿ ಸಸನಿಸನಿದಪ  ಮಮದಪಮ ಸಸರಿಗರಿ ।।೧।।


ಕೋಲು ಕೋಲು ಕೋಲಣ್ಣ ಕೋಲು ಕೋಲೆ, ಚಿನ್ನದ ರನ್ನದ ಕೋಲು ಕೋಲೆ,

ಊರಿಗೆ ಯಜಮಾನ ಮಾವ ದಾನದಲ್ಲಿ ಶೂರನಿವ,

ದಾನ ಶೂರ ಕರ್ಣನಿವ,

ಝರಿ ಸೀರಿ ಬಂಗಾರದ ಸೊಸೆಯಾಗಿ ಕೊಡುವ 

ಝರಿ ಸೀರೆ ತರುವ, ಬಂಗಾರವ ಕೊಡುವ 

ಮೋಜನು ತರುವ,ಹರುಷ ಉಕ್ಕಿ ಹೊಳೆಯಾಗಿದೆ, ಮನ ತುಂಬಿ ತುಳುಕಾಡಿದೆ,

ಅಪರೂಪದ ಖುಷಿಗೇ,

ಎಲ್ಲೆಲ್ಲೂ ಆನಂದವೇ ಕುಣಿವ ನಾವು ನಲಿವ ನಾವು,

ತಾಗತಕ್ಕ ತಕ್ಕಝನ ತಾನಾನಾನಾ ತಾನಾನಾ ।।೨।।

                      


Friday, June 28, 2024

Bedi Bandavalu Olavanu Bedi Bandavalu (ಬೇಡಿ ಬಂದವಳು ಒಲವನು ಬೇಡಿ ಬಂದವಳು)

Movie: Bedi Bandavalu (1968)

Singer: P B Srinivas


Bedi bandavalu, olavanu bedi bandavalu,

Baalalu bayasi, sukhava arasi, sigade nondavalu ||


Tutigu tuttigu naduvina antara,

Aase niraseya naduvina antara,

Nambida daivave aagire dura, 

Kambaniyonde baalali nantara ||


Eleya hoogala aaraike sukhavu,

Haleya nenapu aagalide,

Belagalu bayasida manegu tanagu

Runavu indu teeralide ||


Bhagyada bagilu teredihudendu,

Kanasu kandavalu,

Maralugaadina mareechiya kandu,

Bhrantigondavalu ||


ಚಿತ್ರಗೀತೆ 


ಬೇಡಿ ಬಂದವಳು, ಒಲವನು ಬೇಡಿ ಬಂದವಳು,

ಬಾಳನು ಬಯಸಿ, ಸುಖವ ಅರಸಿ, ಸಿಗದೇ ನೊಂದವಳು ।।ಪ।।


ತುಟಿಗೂ ತುತ್ತಿಗೂ ನಡುವಿನ ಅಂತರ,

ಆಸೆ ನಿರಾಸೆಯ ನಡುವಿನ ಅಂತರ,

ನಂಬಿದ ದೈವವೇ ಆಗಿರೆ ದೂರ,

ಕಂಬನಿಯೊಂದೇ ಬಾಳಲಿ ನಂತರ ।।೧।।


ಎಳೆಯ ಹೂಗಳ ಆರೈಕೆ ಸುಖವು,

ಹಳೆಯ ನೆನಪು ಆಗಲಿದೆ,

ಬೆಳಗಲು ಬಯಸಿದ ಮನೆಗೂ ತನಗೂ,

ಋಣವು ಇಂದು ತೀರಲಿದೆ ।।೨।।


ಭಾಗ್ಯದ ಬಾಗಿಲು ತೆರೆದಿಹುದೆಂದು,

ಕನಸು ಕಂಡವಳು, 

ಮರಳುಗಾಡಿನ ಮರೀಚಿಯ ಕಂಡು,

ಭ್ರಾಂತಿಗೊಂಡವಳು ।।೩।।

           


Ee Haayi Innelli (ಈ ಹಾಯಿ ಇನ್ನೆಲ್ಲಿ)

Movie: Nakkare Ade Swarga (1967)

Singer: P Susheela

Song link: Click Here


Ee haayi innelli, illene balalli, ee haayi innelli ||


Ide sukhada mahasaudha, anuraagadaa bandha,

Gudiyallina deva, gudisilale taaninda,

Ee namma ee prema, endendu aananda ||


Ide nageye sada irali, baradendu birugaali,

Hangillada ganji aa sudheya karanji

Santosha samsara, ee bala bangara ||


ಚಿತ್ರಗೀತೆ 


ಈ ಹಾಯಿ ಇನ್ನೆಲ್ಲಿ, ಇಲ್ಲೇನೆ ಬಾಳಲ್ಲಿ, ಈ ಹಾಯಿ ಇನ್ನೆಲ್ಲಿ ।।ಪ।।


ಇದೇ ಸುಖದ ಮಹಾಸೌಧ, ಅನುರಾಗದಾ ಬಂಧ,

ಗುಡಿಯಲ್ಲಿನಾ ದೇವ, ಗುಡಿಸಿಲಲೇ ತಾನಿಂದ,

ಈ ನಮ್ಮ ಈ ಪ್ರೇಮ,  ಎಂದೆಂದೂ ಆನಂದ ।।೧।।


ಇದೇ ನಗೆಯೆ ಸದಾ ಇರಲಿ, ಬರದೆಂದು ಬಿರುಗಾಳಿ,

ಹಂಗಿಲ್ಲದಾ ಗಂಜಿ ಆ ಸುಧೆಯ ಕಾರಂಜಿ,

ಸಂತೋಷ ಸಂಸಾರ, ಈ ಬಾಳ ಬಂಗಾರ ।।೨।।