Movie: Bedi Bandavalu (1968)
Singer: P B Srinivas
Bedi bandavalu, olavanu bedi bandavalu,
Baalalu bayasi, sukhava arasi, sigade nondavalu ||
Tutigu tuttigu naduvina antara,
Aase niraseya naduvina antara,
Nambida daivave aagire dura,
Kambaniyonde baalali nantara ||
Eleya hoogala aaraike sukhavu,
Haleya nenapu aagalide,
Belagalu bayasida manegu tanagu
Runavu indu teeralide ||
Bhagyada bagilu teredihudendu,
Kanasu kandavalu,
Maralugaadina mareechiya kandu,
Bhrantigondavalu ||
ಚಿತ್ರಗೀತೆ
ಬೇಡಿ ಬಂದವಳು, ಒಲವನು ಬೇಡಿ ಬಂದವಳು,
ಬಾಳನು ಬಯಸಿ, ಸುಖವ ಅರಸಿ, ಸಿಗದೇ ನೊಂದವಳು ।।ಪ।।
ತುಟಿಗೂ ತುತ್ತಿಗೂ ನಡುವಿನ ಅಂತರ,
ಆಸೆ ನಿರಾಸೆಯ ನಡುವಿನ ಅಂತರ,
ನಂಬಿದ ದೈವವೇ ಆಗಿರೆ ದೂರ,
ಕಂಬನಿಯೊಂದೇ ಬಾಳಲಿ ನಂತರ ।।೧।।
ಎಳೆಯ ಹೂಗಳ ಆರೈಕೆ ಸುಖವು,
ಹಳೆಯ ನೆನಪು ಆಗಲಿದೆ,
ಬೆಳಗಲು ಬಯಸಿದ ಮನೆಗೂ ತನಗೂ,
ಋಣವು ಇಂದು ತೀರಲಿದೆ ।।೨।।
ಭಾಗ್ಯದ ಬಾಗಿಲು ತೆರೆದಿಹುದೆಂದು,
ಕನಸು ಕಂಡವಳು,
ಮರಳುಗಾಡಿನ ಮರೀಚಿಯ ಕಂಡು,
ಭ್ರಾಂತಿಗೊಂಡವಳು ।।೩।।
No comments:
Post a Comment