Movie: Sahodarara Sawal (1977)
Singer: SPB
Song link: Click Here
Hey nanagaagiye he ninnandavu, ninagaagiye he ee janmavu,
Marevene chinna, na biduvene ninna, elle neeniru, ha ||
Hah hah, enu kangalu, enu tutigalu, baluki aaduva naduvu,
Birusu nudiyolu, sogasu nadeyolu, aase manadolu,
Notade beteyanaadalu neenu, sote kshanadolu ||
Kannu kannali, tutiyu tutiyali, seri naliyali,
Tanuvu aralali, manavu kuniyali, hrudaya haadali,
Premada gaanadi hrudayagaleradu, beretu hogali ||
ಚಿತ್ರಗೀತೆ
ಹೇಯ್ ನನಗಾಗಿಯೇ ಹೆ ನಿನ್ನಂದವು, ನಿನಗಾಗಿಯೇ ಹೆ ಈ ಜನ್ಮವು,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ, ಎಲ್ಲೇ ನೀನಿರು, ಹ ।।ಪ।।
ಹಹ್ಹ , ಏನು ಕಂಗಳು, ಏನು ತುಟಿಗಳು, ಬಳುಕಿ ಆಡುವ ನಡುವು,
ಬಿರುಸು ನುಡಿಯೊಳು, ಸೊಗಸು ನಡೆಯೊಳು, ಆಸೆ ಮನದೊಳು,
ನೋಟದೆ ಬೇಟೆಯನಾಡಲು ನೀನು, ಸೋತೆ ಕ್ಷಣದೊಳು ।।೧।।
ಕಣ್ಣು ಕಣ್ಣಲಿ, ತುಟಿಯು ತುಟಿಯಲಿ, ಸೇರಿ ನಲಿಯಲಿ,
ತನುವು ಅರಳಲಿ, ಮನವು ಕುಣಿಯಲಿ, ಹೃದಯ ಹಾಡಲಿ,
ಪ್ರೇಮದ ಗಾನದಿ ಹೃದಯಗಳೆರಡು, ಬೆರೆತು ಹೋಗಲಿ ।।೨।।


.jpg)