Tuesday, January 20, 2026

Ide Ide Savi Baala Dina (ಇದೇ ಇದೇ ಸವಿ ಬಾಳ ದಿನ)

Movie: Navajeevana (1964)

Singers: P B Srinivas, S Janaki

Song link: Click Here


 Ide ide savi baala dina, kaadu kandite madhura mana,

Mai maresuva, mana tanisuva, prema milanada dina oho...||


Anuragada baalina gaana, nere hommi haade mana veena,

Navajeevana tumbida trana, nama premavinde paripurna,

Naavadi paadi, manasare noduva, sada naliva sadana aha..||


Olavondire nammaya munde, tanu mereva odave trunavende,

Mana hondire swargavu namade, badatanavu siriyu samavende,

Naavindu seri, nalivinda teluva, sudhe saviva sudina aha..||


ಚಿತ್ರಗೀತೆ 


ಇದೇ ಇದೇ ಸವಿ ಬಾಳ ದಿನ,ಕಾದು ಕಂಡಿತೇ ಮಧುರ ಮನ,

ಮೈ ಮರೆಸುವಾ, ಮನ ತಣಿಸುವಾ, ಪ್ರೇಮ ಮಿಲನದ ದಿನಾ ..ಒಹೋ ।।ಪ।।


ಅನುರಾಗದ ಬಾಳಿನ ಗಾನ, ನೆರೆ ಹೊಮ್ಮಿ ಹಾಡೆ ಮನ ವೀಣಾ,

ನವಜೀವನ ತುಂಬಿದ ತ್ರಾಣ, ನಮ ಪ್ರೇಮವಿಂದೇ ಪರಿಪೂರ್ಣ,

ನಾವಾಡಿ ಪಾಡಿ, ಮನಸಾರೆ ನೋಡುವಾ, ಸದಾ ನಲಿವ ಸದನಾ ..ಆಹಾ ।।೧।।


ಒಲವೊಂದಿರೆ ನಮ್ಮಯ ಮುಂದೆ, ತನು ಮರೆವ ಒಡವೆ ತೃಣವೆಂದೇ,

ಮನ ಹೊಂದಿರೆ ಸ್ವರ್ಗವು ನಮದೇ, ಬಡತನವು ಸಿರಿಯು ಸಮವೆಂದೇ,

ನಾವಿಂದು ಸೇರಿ ನಲಿವಿಂದ ತೇಲುವ, ಸುಧೆ ಸವಿವ, ಸುದಿನಾ.. ಆಹಾ ।।೨।।

                         

Ide Hudugi Ide Bedagi (ಇದೇ ಹುಡುಗಿ ಇದೇ ಬೆಡಗಿ)

Movie: Hannele Chiguridaga (1968)

Singers: P B Srinivas, L R Eshwari

Song link: Click Here


Ide hudugi ide bedagi,

Kudi notade seleda aa sobagi,

Ide huduga ide sobaga,

Ee modiya hudida gaarudiga ||


Olavemba natakada nayaki neene,

Avalannu varisuva nayaka naane,

Lekhaka naaro, darshaka naaro ee kathege,

Aa jaana sumabaana ade manmatha ||


Bigidaaga koralige mangala sutra,

Baruve naa vahisalu nayaki patra,

Nataka naale, dhare vele, taanirali,

Abhyasa aarambha inde aagali ||


ಚಿತ್ರಗೀತೆ 


ಇದೇ ಹುಡುಗಿ ಇದೇ ಬೆಡಗಿ,

ಕುಡಿ ನೋಟದೆ ಸೆಳೆದ ಆ ಸೊಬಗಿ,

ಇದೇ ಹುಡುಗ ಇದೇ ಸೊಬಗ,

ಈ ಮೋಡಿಯ ಹೂಡಿದ ಗಾರುಡಿಗ ।।ಪ।।


ಒಲವೆಂಬ ನಾಟಕದ ನಾಯಕಿ ನೀನೇ,

ಅವಳನ್ನು ವರಿಸುವ ನಾಯಕ ನಾನೇ,

ಲೇಖಕನಾರೋ, ದರ್ಶಕನಾರೋ ಈ ಕಥೆಗೆ,

ಆ ಜಾಣ ಸುಮಬಾಣ ಅದೇ ಮನ್ಮಥ ।।೧।।


ಬಿಗಿದಾಗ ಕೊರಳಿಗೆ ಮಂಗಳ ಸೂತ್ರ,

ಬರುವೆ ನಾ ವಹಿಸಲು ನಾಯಕಿ ಪಾತ್ರ,

ನಾಟಕ ನಾಳೆ, ಧಾರೆ ವೇಳೆ, ತಾನಿರಲಿ,

ಅಭ್ಯಾಸ ಆರಂಭ ಇಂದೇ ಆಗಲಿ ।।೨।।

               

Thursday, January 15, 2026

Sanjemale (ಸಂಜೆಮಳೆ)

ಪದ್ಯ 

ಸಾಹಿತ್ಯ : ಜಿ.  ವರದರಾಜರಾವ್ 


ಒಂದು ಚಣದ ಸಂಜೆ ಮಳೆ 

ಬೀಳಲಿಂದು ತೋಯಲಿಳೆ 

ಹೂವ ಬಿಸಿಲು ಬೆಳಕು ಗೊಳೆ 

ಏನು ಆನಂದವೋ, ಏನು ಆನಂದವೋ


ಕಿರಿಯ ಹಿರಿಯ ಮುಗಿಲ ಪಡೆ 

ನೀರನೆರೆಯೆ ಎಲ್ಲ ಕಡೆ 

ಬಲು ಪವಿತ್ರ ವಾಗಲೆಡೆ 

ಏನು ಆನಂದವೋ, ಏನು ಆನಂದವೋ


ಮಿನುಗೆ, ಜಿನುಗೆ, ಬೆಳಗೆ ಗಿರಿ 

ಉರುಳಿ ಹೊರಳಿ ನೊರೆಯ ಝರಿ 

ನಲಿಯೆ ಮೆರೆಯೆ ಹಸುರ ಸಿರಿ 

ಏನು ಆನಂದವೋ, ಏನು ಆನಂದವೋ


ಬೆಳೆಯಲೆಳೆಯ ಮನದ ತೆನೆ 

ಪೂತು ಚಿಗಿಯಲದರ ಕೊನೆ 

ಅರಳುತಿಹುದು ಬಯಕೆ ನನೆ 

ಏನು ಆನಂದವೋ, ಏನು ಆನಂದವೋ


ಗಾಳೆ ಮೆಲ್ಲನೆ ಸುಳಿಯುತಿರೆ 

ಮಳೆಯ ಬಿಲ್ಲು ರಂಜಿಸಿರೆ 

ಮರಳಿ ವಿಹಗ ನುತಿಸುತಿರೆ 

ಏನು ಆನಂದವೋ, ಏನು ಆನಂದವೋ


ಬುವಿಯು ಬಾನು ಮುದದ ನೆಲೆ 

ಮೂಡಿ ಬರುವ ವಿವಿಧ ಕಲೆ 

ನನ್ನ ಮನವ ಪಿಡಿವ ಬಲೆ 

ಏನು ಆನಂದವೋ, ಏನು ಆನಂದವೋ


Padya


Ondu chanada sanjemale

Beelalindu toyalile

Hoova bisilu belaku gole

Enu aanandavo, enu aanandavo.


Kiriya hiriya mugila pade

Neera nereya ella kade

Balu pavitravaagalede

Enu aanandavo, enu aanandavo.


Minuge, jinuge, belage giri

Uruli horali noreye jhari

Naliye mereye hasura siri

Enu aanandavo, enu aanandavo.


Beleyaleleya manada tene

Putu chigiyaladara kone

Aralutihudu bayake nane

Enu aanandavo, enu aanandavo.


Gaale mellane suliyutire

Maleya billu ranjisire

Marali vihaga nutisutire

Enu aanandavo, enu aanandavo.


Buviyu baanu mudada nele

Moodi baruva vividha kale

Nanna manava pidiva bale

Enu aanandavo, enu aanandavo.

         

Monday, January 12, 2026

Krupasagara Nayana Manohara (ಕೃಪಾಸಾಗರ ನಯನ ಮನೋಹರ)

Bhaktigeete

Singer: Dr. Rajkumar

Song link: Click Here


Krupasagara nayana manohara,

Ramachandra prabhuve, sri ramachandra prabhuve,

Suranara vandita, munijana sevita,

Manadallendu niluve, aanandavannu koduve ||


Kamalava nagisuva mogave anda,

Kamalava gunisuva kangale anda,

Neeliya kamalave naachuva haage,

Maaduva tanuvina bannave chenda ||


Ninna shouryake saatiye illa,

Ninna premake elleye illa,

Suguna swaroopane neenolidaaga,

Baalali endigu sole illa ||


Billanu hidida reetiye sogasu,

Ninta thiviye nodalu sogasu,

Aa peetambara koustubha haara,

Honna kireetada sogase sogasu ||


ಭಕ್ತಿಗೀತೆ 


ಕೃಪಾಸಾಗರ ನಯನ ಮನೋಹರ,

ರಾಮಚಂದ್ರ ಪ್ರಭುವೇ ಶ್ರೀ, ರಾಮಚಂದ್ರ ಪ್ರಭುವೇ,

ಸುರನರ ವಂದಿತ, ಮುನಿಜನ ಸೇವಿತ ,

ಮನದಲ್ಲೆಂದು ನಿಲುವೆ, ಆನಂದವನ್ನು ಕೊಡುವೆ ।।ಪ।।


ಕಮಲವ ನಗಿಸುವ ಮೊಗವೆ ಅಂದ,

ಕಮಲವ ಗುಣಿಸುವ ಕಂಗಳೇ ಅಂದ,

ನೀಲಿಯ ಕಮಲವೇ ನಾಚುವ ಹಾಗೆ,

ಮಾಡುವ ತನುವಿನ ಬಣ್ಣವೇ ಚೆಂದ ।।೧।।


ನಿನ್ನ ಶೌರ್ಯಕೆ ಸಾಟಿಯೇ ಇಲ್ಲ,

ನಿನ್ನ ಪ್ರೇಮಕೆ ಎಲ್ಲೆಯೇ ಇಲ್ಲ,

ಸುಗುಣ ಸ್ವರೂಪನೇ ನೀನೊಲಿದಾಗ,

ಬಾನಲಿ ಇಂದಿಗೂ ಸೋಲೇ ಇಲ್ಲ ।।೨।।


ಬಿಲ್ಲನು ಹಿಡಿದ ರೀತಿಯೇ ಸೊಗಸು,

ನಿಂತ ಠೀವಿಯೇ ನೋಡಲು ಸೊಗಸು,

ಆ ಪೀತಾಂಬರ ಕೌಸ್ತುಭ ಹಾರ,

ಹೊನ್ನ ಕಿರೀಟದ ಸೊಗಸೇ ಸೊಗಸು ।।೩।।

               

Hakkiyondu Haari Bandu (ಹಕ್ಕಿಯೊಂದು ಹಾರಿ ಬಂದು)

Bhavageete

Sahitya: Sharat Kalkod

Song link: Click Here 


Hakkiyondu haari bandu, nanna edeyolavitu kondu,

Banna banna rekke bicchi, manasigella adanu hacchi, 

Kuniya todagitu, haaki kuniya todagitu ||


Jinkeyante meredu nodi, alli illi odi aadi,

Novu maresi modi maadi, matte matte kaadi bedi,

Eno maaditu, hakki eno maaditu ||


Nakku nalidu aadutiralu, dinavu heege urulitiralu,

Kanda kannu kaarutiralu, lokaveno aadutiralu,

Anji haaritu, hakki anji haaritu ||


Intu hakki haari hogi, lokavella khaliyaagi,

Baduku tumba bharavaagi, nenapu novu maagiyaagi,

Naanu ulidenu, illi naanu ulidenu ||


ಭಾವಗೀತೆ 


ಹಕ್ಕಿಯೊಂದು ಹಾರಿ ಬಂದು, ನನ್ನ ಎದೆಯೊಳವಿತುಕೊಂಡು,

ಬಣ್ಣ ಬಣ್ಣ ರೆಕ್ಕೆ ಬಿಚ್ಚಿ, ಮನಸಿಗೆಲ್ಲ ಅದನು ಹಚ್ಚಿ,

ಕುಣಿಯತೊಡಗಿತು ಹಕ್ಕಿ ಕುಣಿಯತೊಡಗಿತು ।।ಪ।।


ಜಿಂಕೆಯಂತೆ ಮೆರೆದು ನೋಡಿ, ಅಲ್ಲಿ ಇಲ್ಲಿ ಓಡಿ ಆಡಿ,

ನೋವು ಮರೆಸಿ ಮೋಡಿ ಮಾಡಿ, ಮತ್ತೆ ಮತ್ತೆ ಕಾಡಿ ಬೇಡಿ,

ಏನೋ ಮಾಡಿತು, ಹಕ್ಕಿ ಏನೋ ಮಾಡಿತು ।।೧।।


ನಕ್ಕು ನಲಿದು ಆಡುತಿರಲು, ದಿನವು ಹೀಗೆ ಉರುಳುತಿರಲು,

ಕಂಡ ಕಣ್ಣು ಕಾರುತಿರಲು, ಲೋಕವೇನೊ ಆಡುತಿರಲು,

ಅಂಜಿ ಹಾರಿತು, ಹಕ್ಕಿ ಅಂಜಿ ಹಾರಿತು ।।೨।।


ಇಂತು ಹಕ್ಕಿ ಹಾರಿ ಹೋಗಿ, ಲೋಕವೆಲ್ಲ ಖಾಲಿಯಾಗಿ,

ಬದುಕು ತುಂಬ ಭಾರವಾಗಿ, ನೆನಪು ನೋವು ಮಾಗಿಯಾಗಿ,

ನಾನು ಉಳಿದೆನು, ಇಲ್ಲಿ ನಾನು ಉಳಿದೆನು ।।೩।।

                             

Kollo Kodanda Rama (ಕೊಲ್ಲೊ ಕೋದಂಡ ರಾಮ)

Bhaktigeete

Singer: Dr. Rajkumar

Song link: Click Here


Kollo kodanda rama, bega kollo kodanda rama,

Nannalliruva, ee rakshasarannu, kollalareya o raghu rama,

Rama rama jaya rama, rama rama raghu rama ||


Naanu naanu ennuva danava nannallu iruva,

Beku beku ennuva rakshasa manadalle iruva,

Rosha vennuva dwesha vennuva, ahi mahi ravanarannu ||kollo||


Swartha illi tumbideyalla seeta ramane,

Lobha nanna kaadideyalla kousalya sutane,

Nanne nunguva, aaseyennuva, bhutada bhade taalalarenu ||kollo||


ಭಕ್ತಿಗೀತೆ 


ಕೊಲ್ಲೊ ಕೋದಂಡ ರಾಮ, ಬೇಗ ಕೊಲ್ಲೊ ಕೋದಂಡ ರಾಮ,

ನನ್ನಲ್ಲಿರುವ, ಈ ರಾಕ್ಷಸರನ್ನು, ಕೊಲ್ಲಲಾರೆಯ ಓ ರಘು ರಾಮ,

ರಾಮ ರಾಮ ಜಯ ರಾಮ, ರಾಮ ರಾಮ ರಘು ರಾಮ ।।ಪ।।


ನಾನು ನಾನು ಎನ್ನುವ ದಾನವ ನನ್ನಲ್ಲೂ ಇರುವ,

ಬೇಕು ಬೇಕು ಎನ್ನುವ ರಾಕ್ಷಸ ಮನದಲ್ಲೇ ಇರುವ,

ರೋಷ ವೆನ್ನುವ ದ್ವೇಷ ವೆನ್ನುವ ಅಹಿ ಮಹಿ ರಾವಣರನ್ನು 

।।ಕೊಲ್ಲೊ।।


ಸ್ವಾರ್ಥ ಇಲ್ಲಿ ತುಂಬಿದೆಯಲ್ಲ ಸೀತಾರಾಮನೇ,

ಲೋಭ ನನ್ನ ಕಾದಿದೆಯಲ್ಲ ಕೌಸಲ್ಯ ಸುತನೆ,

ನನ್ನೇ ನುಂಗುವ, ಆಸೆಯೆನ್ನುವ, ಭೂತದ ಭಾದೆ ತಾಳಲಾರೆನು 

।।ಕೊಲ್ಲೊ।।

                           


Wednesday, January 7, 2026

Nanna Premada Hudugi (ನನ್ನ ಪ್ರೇಮದ ಹುಡುಗಿ)

Bhavageete

Sahitya: B M Sri


Nanna premada hudugi, tavareya hosakempu

Tavareya hosa arala holeva kempu

Nanna premada hudugi, kolala melu nudiyimpu

Kolalu mohisi nudiva gaanadimpu ||


Belebeleyuteshteshtu bhinnana ele cheluve

Mulugidenu ashatashtu premadolage

Battuvuvu kadalugalu mundaagi ele cheluve

Battalaaradu tottu premadolage ||


Battuvuvu mundaagi kadalugalu ele cheluve

Karaguvuvu bandegalu bisilinolage

Karagalaaradu churu premadolagele cheluve

Berediralu jeevakale dehadolage ||


Hogi baruvenu henne, premadonde henne

Hogi baruvenu sahisu, eradu galige

Koti yojanavirali, daati baruvenu henne

Bega baruvenu haari, ninna balige ||


ಭಾವಗೀತೆ 


ನನ್ನ ಪ್ರೇಮದ ಹುಡುಗಿ, ತಾವರೆಯ ಹೊಸಕೆಂಪು 

ತಾವರೆಯ ಹೊಸ ಅರಳ ಹೊಳೆವ ಕೆಂಪು 

ನನ್ನ ಪ್ರೇಮದ ಹುಡುಗಿ, ಕೊಳಲ ಮೆಲುನುಡಿಯಿಂಪು 

ಕೊಳಲು ಮೋಹಿಸಿ ನುಡಿವ ಗಾನದಿಂಪು ।।ಪ।।


ಬೆಳೆಬೆಳೆಯುತೆಷ್ಟೆಷ್ಟು  ಭಿನ್ನಾಣ ಎಲೆ ಚೆಲುವೆ 

ಮುಳುಗಿದೆನು ಅಷ್ಟಷ್ಟು ಪ್ರೇಮದೊಳಗೆ 

ಬತ್ತುವುವು ಕಡಲುಗಳು ಮುಂದಾಗಿ, ಎಲೆ ಚೆಲುವೆ 

ಬತ್ತಲಾರದು ತೊಟ್ಟು ಪ್ರೇಮದೊಳಗೆ  ।।೧।।


ಬತ್ತುವುವು ಮುಂದಾಗಿ ಕಡಲುಗಳು ಎಲೆ ಚೆಲುವೆ 

ಕರಗುವುವು ಬಂಡೆಗಳು ಬಿಸಿಲಿನೊಳಗೆ 

ಕಾರಗಲಾರದು ಚೂರು ಪ್ರೇಮದೊಳಗೆಲೆ ಚೆಲುವೆ 

ಬೆರೆದಿರಲು ಜೀವಕಳೆ ದೇಹದೊಳಗೆ ।।೨।।


ಹೋಗಿ ಬರುವೆನು ಹೆಣ್ಣೆ, ಪ್ರೇಮದೊಂದೇ ಹೆಣ್ಣೆ 

ಹೋಗಿ ಬರುವೆನು ಸಹಿಸು, ಎರಡು ಗಳಿಗೆ 

ಕೋಟಿ ಯೋಜನವಿರಲಿ, ದಾಟಿ ಬರುವೆನು ಹೆಣ್ಣೆ 

ಬೇಗ ಬರುವೆನು ಹಾರಿ, ನಿನ್ನ ಬಳಿಗೆ ।।೩।।