Sunday, August 11, 2024

Kande Hariya Kande (ಕಂಡೆ ಹರಿಯ ಕಂಡೆ)

Movie: Bhakta Kumbara (1974)

Singer: P B Srinivas

Song link: Click Here


Kande hariya kande, devaadi deva, danujadi vandya

Dharaneeshana, divya charana kamala yugava, kande hariya kande ||


Pavanavayitu kulakotigalu, putidu hodavu paritapagalu..aa..aa (2)

Berenu bekilla, saku iduve ananta bhagya

Kande hariya kande ||


Ee jeeva jotheyalli paramatma kaletu (2)

Olagu horagu belaguva haage

Sakhiyara odane kuniyuva hariya

Charana kinkini naadada impu

Raaga bhavagalu besediha sompu, mandahasadali mindalaasyadali

Kunidu kuniso kalaapavanne, kande hariya kande ||


Asamaana kalegaara ivanamma vittala

Rasavanta gunavanta shrungra lola

Yogiyo bhoiyo ballavarilla

Rasika rangana ananta pitana, bhava bhavagala olagina marma

Tilidu naanindu talede aananda, pranava bereta vihaaravanne

Kande hariya kande ||


ಚಿತ್ರಗೀತೆ 


ಕಂಡೆ ಹರಿಯ ಕಂಡೆ, ದೇವಾದಿ ದೇವ, ದನುಜಾದಿ ವಂದ್ಯ 

ಧರಣೀಶನ, ದಿವ್ಯ ಚರಣ ಕಮಲ ಯುಗವ 

ಕಂಡೆ ಹರಿಯ ಕಂಡೆ ।।ಪ।।


ಪಾವನವಾಯಿತು ಕುಲಕೋಟಿಗಳು 

ಪುಟಿದು ಹೋದವು ಪರಿತಾಪಗಳೂ .. ಆ .. ಆ (೨)

ಬೇರೇನೂ ಬೇಕಿಲ್ಲ, ಸಾಕು ಇದುವೆ ಅನಂತ ಭಾಗ್ಯ 

ಕಂಡೆ ಹರಿಯ ಕಂಡೆ ।।


ಈ ಜೀವ ಜೊತೆಯಲ್ಲಿ ಪರಮಾತ್ಮ ಕಲೆತು  (೨)

ಒಳಗೂ ಹೊರಗೂ ಬೆಳಗುವ ಹಾಗೆ 

ಸಖಿಯರ ಒಡನೆ ಕುಣಿಯುವ ಹರಿಯ 

ಚರಣ ಕಿಂಕಿಣಿ ನಾದದ ಇಂಪು 

ರಾಗ ಭಾವಗಳು ಬೆಸೆದಿಹ ಸೊಂಪು, ಮಂದಹಾಸದಲಿ ಮಿಂದ ಲಾಸ್ಯದಲಿ 

ಕುಣಿದು ಕುಣಿಸೊ ಕಲಾಪವನ್ನೆ, ಕಂಡೆ ಹರಿಯ ಕಂಡೆ ।।೧।।


ಅಸಮಾನ ಕಲೆಗಾರ ಇವನಮ್ಮ ವಿಠ್ಠಲ 

ರಸವಂತ ಗುಣವಂತ ಶೃಂಗಾರ ಲೋಲ 

ಯೋಗಿಯೊ ಭೋಗಿಯೋ ಬಲ್ಲವರಿಲ್ಲ 

ರಸಿಕ ರಂಗನ ಅನಂತ ಪಿತನ, ಭಾವ ಭಾವಗಳ ಒಳಗಿನ ಮರ್ಮ 

ತಿಳಿದು ನಾನಿಂದು ತಳೆದೆ ಆನಂದ, ಪ್ರಣವ ಬೆರೆತ ವಿಹಾರವನ್ನೆ

ಕಂಡೆ ಹರಿಯ ಕಂಡೆ ।।೨।।

                       



Friday, August 9, 2024

Beladingalondu Hennagi (ಬೆಳದಿಂಗಳೊಂದು ಹೆಣ್ಣಾಗಿ)

Movie: Premaanubandha (1981)

Singer: SPB

Song link: Click Here


Beladingalondu hennagi bandante kande (2)

Kandu ninte, nintu sothe, sothu kaviyagi kavite haadide

Beladingalondu hennagi bandante kande ||


Hosadagi moggondu hoovagi, aa hoove ee henna mogavaagi

Sulidaado minchinda kannagi, Gili maatu avalaado maatagi

Tangaalige oladuva (2) lateyondu naduvayiteno

Navilondu kunidante, nadevaaga santoshagonde ||


Hagalalli kann munde neeneruve, irulalli kanasalli nee baruve

Jotheyaagi iruvaase tandiruve, nanagendu hosabaala nee taruve

Bangaariye.. singaariye.. ha (2), nannomme nee nodu cheluve

Olavinda bandeega, nannannu nee seru hoove ||


ಚಿತ್ರಗೀತೆ 


ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ (೨)

ಕಂಡು ನಿಂತೆ, ನಿಂತು ಸೋತೆ, ಸೋತು ಕವಿಯಾಗಿ ಕವಿತೆ ಹಾಡಿದೆ 

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ ।।ಪ।।


ಹೊಸದಾಗಿ ಮೊಗ್ಗೊಂದು ಹೂವಾಗಿ, ಆ ಹೂವೆ ಈ ಹೆಣ್ಣ ಮೊಗವಾಗಿ 

ಸುಳಿದಾಡೊ ಮಿಂಚಿಂದ ಕಣ್ಣಾಗಿ, ಗಿಳಿ ಮಾತು ಅವಳಾಡೋ ಮಾತಾಗಿ 

ತಂಗಾಳಿಗೆ ಓಲಾಡುವಾ (೨) ಲತೆಯೊಂದು ನಡುವಾಯಿತೇನೋ 

ನವಿಲೊಂದು ಕುಣಿದಂತೆ, ನಡೆವಾಗ ಸಂತೋಷಗೊಂಡೆ ।।೧।।


ಹಗಲಲ್ಲಿ ಕಣ್ ಮುಂದೆ ನೀನಿರುವೆ, ಇರುಳಲ್ಲಿ ಕನಸಲ್ಲಿ ನೀ ಬರುವೆ 

ಜೊತೆಯಾಗಿ ಇರುವಾಸೆ ತಂದಿರುವೆ, ನನಗೆಂದು ಹೊಸಬಾಳ ನೀ ತರುವೆ 

ಬಂಗಾರಿಯೇ .., ಸಿಂಗಾರಿಯೇ .. ಹಾ (೨), ನನ್ನೊಮ್ಮೆ ನೀ ನೋಡು ಚೆಲುವೆ 

ಒಲವಿಂದ ಬಂದೀಗ, ನನ್ನನ್ನು ನೀ ಸೇರು ಹೂವೆ ।।೨।।

                     



Ee chandada Maneyalli (ಈ ಚೆಂದದ ಮನೆಯಲ್ಲಿ)

Movie: Kappu Bilupu (1969)

Singer: P Susheela

Song link: Click Here


Ee chendada maneyalli, srigandhada gudiyalli,

Aanandada hole, anuraagada male,

Endendu chimmutirali, ee chendada maneyalli ||


Nutana nandana nalinalidaadali (2)

Preetiya sumavu aralutalirali

Shantiya sourabha susutalirali (2)

Jnanada jyothiyu belagirali ||


Ee mane premada mandiravaagali (2)

Savi maatugala tavaruraagali

Siridevateyu kunikunidaadali (2)

Arishina kunkuma nagunagutirali (2) ||


ಚಿತ್ರಗೀತೆ 


ಈ ಚೆಂದದ ಮನೆಯಲ್ಲಿ, ಶ್ರೀಗಂಧದ ಗುಡಿಯಲ್ಲಿ 

ಆನಂದದ ಹೊಳೆ, ಅನುರಾಗದ ಮಳೆ 

ಎಂದೆಂದೂ ಚಿಮ್ಮುತಿರಲಿ, ಈ ಚೆಂದದ ಮನೆಯಲ್ಲಿ ।।ಪ।।


ನೂತನ ನಂದನ ನಲಿನಲಿದಾಡಲಿ (೨)

ಪ್ರೀತಿಯ ಸುಮವೂ ಅರಳುತಲಿರಲಿ 

ಶಾಂತಿಯ ಸೌರಭ ಸೂಸುತಲಿರಲಿ 

ಜ್ಞಾನದ ಜ್ಯೋತಿಯು ಬೆಳಗಿರಲಿ ।।೧।।


ಈ ಮನೆ ಪ್ರೇಮದ ಮಂದಿರವಾಗಲಿ (೨)

ಸವಿ ಮಾತುಗಳ ತವರೂರಾಗಲಿ 

ಸಿರಿದೇವತೆಯು ಕುಣಿಕುಣಿದಾಡಲಿ (೨)

ಅರಿಶಿನ ಕುಂಕುಮ ನಗುನಗುತಿರಲಿ ।।೨।।

                

Aralida Tanuvidu (ಅರಳಿದ ತನುವಿದು)

Movie: Jeevana Chaitra (1992)

Singer: Dr. Rajkumar

Song link: Click Here


Aralida tanuvidu andavo anda

Nalidiruva manavinnu chendavo chenda

Santoshadi enenido baruvanu kanda ||


Meduvagi nadi, ninnase eno nudi

Bayakegala saravirali sankochaveke

Dinavella nagu, aanandadinda nagu

Beleyutiha hasu kanda naguvante nalle..

Badukella heege iru ullasadinda ||


Olavemba lathe hoovaondu biduva dina

Sadagaradi barutiralu ullasa kande

Madhumaasa dina neenenege olidaa kshana

Balalli hosadaada sukhavannu tande

Nanna bhagya taane idu, nija helu neenu ||


ಚಿತ್ರಗೀತೆ 


ಅರಳಿದ ತನುವಿದು ಅಂದವೋ ಅಂದ 

ನಲಿದಿರುವ ಮನವಿನ್ನೂ ಚೆಂದವೋ ಚೆಂದ 

ಸಂತೋಷದಿ ಏನೇನಿಡೋ ಬರುವನು ಕಂದ ।।ಪ।।


ಮೆದುವಾಗಿ ನಡಿ, ನಿನ್ನಾಸೆ ಏನೋ ನುಡಿ 

ಬಯಕೆಗಳ ಸರವಿರಲಿ ಸಂಕೋಚವೇಕೇ .. 

ದಿನವೆಲ್ಲಾ ನಗು, ಆನಂದದಿಂದಾ ನಗು 

ಬೆಳೆಯುತಿಹ ಹಸು ಕಂದ ನಗುವಂತೆ ನಲ್ಲೇ .. 

ಬದುಕೆಲ್ಲ ಹೀಗೇ ಇರು ಉಲ್ಲಾಸದಿಂದ ।।೧।।


ಒಲವೆಂಬ ಲತೆ ಹೂವೊಂದು ಬಿಡುವಾ ದಿನ 

ಸಡಗರದಿ ಬರುತಿರಲು ಉಲ್ಲಾಸ ಕಂಡೇ .. 

ಮಧುಮಾಸ ದಿನ ನೀನೆನೆಗೆ ಒಲಿದಾ ಕ್ಷಣ 

ಬಾಳಲ್ಲಿ ಹೊಸದಾದ ಸುಖವನ್ನು ತಂದೇ .. 

ನನ್ನ ಭಾಗ್ಯ ತಾನೇ ಇದು, ನಿಜ ಹೇಳು ನೀನು ।।೨।।

                               



Amma Amma Amma Nannamma (ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮಾ)

Movie: Bhale Jodi (1970)

Singer: P B Srinivas

Song link: Click Here


Amma amma amma nannamma (2)

Naa amma endaga eno santoshavu (2)

Ninna kandaga manakeno aanandavu

Amma amma amma nannamma ||


Haalina sudheyu ninnaya manasu

Jenina saviyu ninna maatu

Punyada phalavo devara varavo

Seveya bhagya nanadaitu

Amma amma amma nannamma ||


Taayiya mamate kanda devanu

Adagida ello mareyagi

Tayiya shantige dharaniyu nachi

Mounadi nintalu tale bagi 

Amma amma amma nannamma ||


ಚಿತ್ರಗೀತೆ 


ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮಾ(೨)

ನಾ ಅಮ್ಮಾ ಎಂದಾಗ ಏನೋ ಸಂತೋಷವು (೨)

ನಿನ್ನ ಕಂಡಾಗ ಮನಕೇನೋ ಆನಂದವು 

ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮಾ।।ಪ।।


ಹಾಲಿನ ಸುಧೆಯು ನಿನ್ನಯ ಮನಸು 

ಜೇನಿನ ಸವಿಯು ನಿನ್ನ ಮಾತು 

ಪುಣ್ಯದ ಫಲವೋ ದೇವರ ವರವೋ 

ಸೇವೆಯ ಭಾಗ್ಯ ನನದಾಯ್ತು 

ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮಾ।।೧।।


ತಾಯಿಯ ಮಮತೆ ಕಂಡಾ ದೇವನು 

ಅಡಗಿದ ಎಲ್ಲೋ ಮರೆಯಾಗಿ 

ತಾಯಿಯ ಶಾಂತಿಗೆ ಧರಣಿಯು ನಾಚಿ 

ಮೌನದಿ ನಿಂತಳು ತಲೆ ಬಾಗಿ 

ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮಾ ।।೨।।

               

Wednesday, August 7, 2024

Olume Siriya Kandu (ಒಲುಮೆ ಸಿರಿಯ ಕಂಡು)

Movie: Bangaarada Jinke (1980)

Singers: SPB, Vani Jairam

Song link: Click Here


Olume siriya kandu, bayake sihiya undu,

Preeti maatadide, baalu rangagide ||


Mungaru kaanade kaadina navilu tanaadadu

Ninnannu kudade nanna hrudaya iralaagadu

Hagalali irulali (2), iruvenu ninna jothe ||


Nuraaru janmada anubandha namadu arivaagide

Ondagi haadida raagada dhatiya nenapaagide

Beeragade dooragade (2), nannanu nee seru inde ||


Bangaara jinkeyu bekemba aaseyu beladide

Mandaara pushpava mudiye neenindu bayaside

Cheluvanu nalivanu (2), mareyenu endendigu ||


ಚಿತ್ರಗೀತೆ 


ಒಲುಮೆ ಸಿರಿಯ ಕಂಡು, ಬಯಕೆ ಸಿಹಿಯ ಉಂಡು 

ಪ್ರೀತಿ ಮಾತಾಡಿದೆ, ಬಾಳು ರಂಗಾಗಿದೆ ।।ಪ।।


ಮುಂಗಾರು ಕಾಣದೆ ಕಾಡಿನ ನವಿಲು ತಾನಾಡದು 

ನಿನ್ನನ್ನು ಕಾಣದೆ ನನ್ನ ಹೃದಯ ಇರಲಾಗದು 

ಹಗಲಲಿ ಇರುಳಲಿ (೨), ಇರುವೆನು ನಿನ್ನ ಜೊತೆ ।।೧।।


ನೂರಾರು ಜನ್ಮದ ಅನುಬಂಧ ನಮದು ಅರಿವಾಗಿದೆ 

ಒಂದಾಗಿ ಹಾಡಿದ ರಾಗದ ಧಾಟಿಯು ನೆನಪಾಗಿದೆ 

ಬೇರಾಗದೆ ದೂರಾಗದೆ (೨), ನನ್ನನ್ನು ನೀ ಸೇರು ಇಂದೇ ।।೨।।


ಬಂಗಾರ ಜಿಂಕೆಯು ಬೇಕೆಂಬ ಆಸೆಯು ಬೆಳದಿದೆ 

ಮಂದಾರ ಪುಷ್ಪವ ಮುಡಿಯೇ ನೀನಿಂದು ಬಯಸಿದೆ 

ಚೆಲುವನು ನಲಿವನು (೨), ಮರೆಯೆನು ಎಂದೆಂದಿಗೂ ।।೩।।

                      


  

Ninna Roopa Kannali (ನಿನ್ನ ರೂಪ ಕಣ್ಣಲಿ)

Movie: Chakrathirtha (1967)

Singers: P BSrinivas, P Susheela

Song link: Click Here


Ninna roopa kannali, ninna daniyu kiviyali

Ninna dhyana manadali, naanu ninna baliyali ||


Ninna nageya maleyali, namma olavu beleyali,

Ninna kanna belakali (2), namma maneyu belagali ||


Ninna karune holeyali, namma nouke telali,

Ninna kaala baliyali (2), enage stana dorakali ||


ಚಿತ್ರಗೀತೆ 


ನಿನ್ನ ರೂಪ ಕಣ್ಣಲಿ, ನಿನ್ನ ದನಿಯು ಕಿವಿಯಲಿ 

ನಿನ್ನ ಧ್ಯಾನ ಮನದಲಿ, ನಾನು ನಿನ್ನ ಬಳಿಯಲಿ ।।ಪ।।


ನಿನ್ನ ನಗೆಯ ಮಳೆಯಲಿ, ನಮ್ಮ ಒಲವು ಬೆಳೆಯಲಿ 

ನಿನ್ನ ಕಣ್ಣ ಬೆಳಕಲಿ (೨), ನಮ್ಮ ಮನೆಯು ಬೆಳಗಲಿ ।।೧।।


ನಿನ್ನ ಕರುಣೆ ಹೊಳೆಯಲಿ, ನಮ್ಮ ನೌಕೆ ತೇಲಲಿ 

ನಿನ್ನ ಕಾಲ ಬಳಿಯಲಿ (೨), ಎನಗೆ ಸ್ಥಾನ ದೊರಕಲಿ ।।೨।।