Friday, January 19, 2024

Krishnana Kolalina Kare (ಕೃಷ್ಣನಾ ಕೊಳಲಿನಾ ಕರೆ)

Movie: Subbashastri (1966)

Singer: Srirangam Gopala Ratnam

Sahitya: P T Narasimhachar

Song link: Click Here


Aa..aa..krishnana kolalina kare

Aalisu krishnana kolalina kare (2)

Tware tware krishnana kolalina kare ||


Tottalina hasugusa mare mare

Pakkada gandana tore tore, brindavanake tware tware

krishnana kolalina kare, aalisu krishnana kolalina kare ||


Muttina kuppusa haralole, mallige jaji mudimaale

Hejjeya nevura gejjeya pilli

Marete bandeve maneyalle sakhi

krishnana kolalina kare, aalisu krishnana kolalina kare ||


Hottare horegelasa mikkare migali

Pakkada nerehore nakkare nagali

Brundavanadol aalisido murali

krishnana kolalina kare, aalisu krishnana kolalina kare ||


Nesara kirana aagasadirula toreyisuva reeti

Muralidharana murali maayege mana bittite bheeti

Innayite preeti (2)

krishnana kolalina kare, aalisu krishnana kolalina kare ||


ಚಿತ್ರಗೀತೆ 


ಆ .. ಆ .. ಕೃಷ್ಣನಾ ಕೊಳಲಿನಾ ಕರೆ 

ಆಲಿಸು ಕೃಷ್ಣನಾ ಕೊಳಲಿನಾ ಕರೆ (೨)

ತ್ವರೆ ತ್ವರೆ  ಕೃಷ್ಣನಾ ಕೊಳಲಿನಾ ಕರೆ ।।ಪ।।


ತೊಟ್ಟಲಿನ ಹಸುಗೂಸ ಮರೆ ಮರೆ 

ಪಕ್ಕದ ಗಂಡನ ತೊರೆ ತೊರೆ, ಬೃಂದಾವನಕೆ ತ್ವರೆ ತ್ವರೆ 

ಕೃಷ್ಣನಾ ಕೊಳಲಿನಾ ಕರೆ, ಆಲಿಸು ಕೃಷ್ಣನಾ ಕೊಳಲಿನಾ ಕರೆ ।।೧।।


ಮುತ್ತಿನ ಕುಪ್ಪುಸ ಹರಳೋಲೆ, ಮಲ್ಲಿಗೆ ಜಾಜಿ ಮುಡಿಮಾಲೆ 

ಹೆಜ್ಜೆಯ ನೇವುರ ಗೆಜ್ಜೆಯ ಪಿಲ್ಲಿ 

ಮರೆತೇ ಬಂದೆವೆ  ಮನೆಯಲ್ಲೆ ಸಖಿ 

ಕೃಷ್ಣನಾ ಕೊಳಲಿನಾ ಕರೆ, ಆಲಿಸು ಕೃಷ್ಣನಾ ಕೊಳಲಿನಾ ಕರೆ ।।೨।।


ಹೊತ್ತರೆ ಹೊರೆಗೆಲಸ ಮಿಕ್ಕಾರೆ ಮಿಗಲಿ 

ಪಕ್ಕದ ನೆರೆಹೊರೆ ನಕ್ಕಾರೆ ನಗಲಿ 

ಬೃಂದಾವನದೆ ಆಲಿಸಿದೊ ಮುರಳಿ 

ಕೃಷ್ಣನಾ ಕೊಳಲಿನಾ ಕರೆ, ಆಲಿಸು ಕೃಷ್ಣನಾ ಕೊಳಲಿನಾ ಕರೆ ।।೩।।


ನೇಸರ ಕಿರಣ ಆಗಸದಿರುಳ ತೊರೆಯಿಸುವ ರೀತಿ 

ಮುರಳೀಧರನ ಮುರಳಿ ಮಾಯೆಗೆ ಮನ ಬಿಟ್ಟಿತೆ ಭೀತಿ 

ಇನ್ನಾಯಿತೆ ಪ್ರೀತಿ (೨)

ಕೃಷ್ಣನಾ ಕೊಳಲಿನಾ ಕರೆ, ಆಲಿಸು ಕೃಷ್ಣನಾ ಕೊಳಲಿನಾ ಕರೆ 

।।೪।।

                                 


Apaara Keerti Galisi Mereva (ಅಪಾರ ಕೀರ್ತಿ ಗಳಿಸಿ ಮೆರೆವ)

Movie: Vijayanagara Veeraputra (1961)

Singer: P B Srinivas

Song link: Click Here


Arale rashigalante halgadala aleyante

Aagasade telutide moda..

Nere nota haridante pasarisiha giripankti

Hasihasiru vanaraaji noda ||


Apara keerti galisi mereva bhavya naadidu

Karnataviduve nrutya shilpa kaleya beedidu

Apaara keertiye (2)


Maate tungabhadre hariyutihalu illi

Manavana paapavanu toleva kalpavalli (2)


Deva viroopaksha eeva namage raksha

Jeevige ta needuvanu dharmada dheeksha (2)


Kadidu suttamuttalidda gondaaranya

Stapisidanu vijayanagara vidyaranya

Hakkabukka rali bhavyateyanu taali

Dikku dikku shanti sukhada kahaleyu keli ||


ಚಿತ್ರಗೀತೆ 


ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ 

ಆಗಸದೆ ತೇಲುತಿದೆ ಮೋಡ 

ನೆರೆ ನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ 

ಹಸಿಹಸಿರು ವನರಾಜಿ ನೋಡ ।।


ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು 

ಕರ್ನಾಟವಿದುವೆ ನೃತ್ಯ ಶಿಲ್ಪಕಲೆಯ ಬೀಡಿದು 

ಅಪಾರ ಕೀರ್ತಿಯೇ .. (೨)


ಮಾತೆ ತುಂಗಭದ್ರೆ ಹರಿಯುತಿಹಳು ಇಲ್ಲಿ 

ಮಾನವನ ಪಾಪವನು ತೊಳೆವ ಕಲ್ಪವಲ್ಲಿ (೨)


ದೇವ ವಿರೂಪಾಕ್ಷಾ ಈವ ನಮಗೆ ರಕ್ಷಾ 

ಜೀವಿಗೆ ತಾ ನೀಡುವನು ಧರ್ಮದ ಧೀಕ್ಷಾ (೨)


ಕಡಿದು ಸುತ್ತಮುತ್ತಲಿದ್ದ ಗೊಂಡಾರಣ್ಯ 

ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯ 

ಹಕ್ಕಬುಕ್ಕರಾಳಿ ಭವ್ಯತೆಯನು ತಾಳಿ 

ದಿಕ್ಕು ದಿಕ್ಕು ಶಾಂತಿ ಸುಖದ ಕಹಳೆಯು ಕೇಳಿ ।।

                   


Wednesday, January 17, 2024

Bellana Belagayitu (ಬೆಳ್ಳನ ಬೆಳಗಾಯಿತು)

Movie: Sangolli Rayanna (1967)

Singer: Lata Mangeshkar

Song link: Click Here


Bellana belagayitu (4) elenna chetana, cheluva

Bellana belagayitu (2) ||


Aakalisuvadunte, aakala karu bitte (2)

Ho kale kandeva, aakala hinduva..aa..||


Eddaava ele dumba, seemudde ta tumba, aa..aa.. (2)

Gelavina gaja emba tutturisi hidi komba ||


Kittura hosa baale, sakkare rasa baale, o.. (2)

Hindida nore halu, dandina dore paalu ||


ಚಿತ್ರಗೀತೆ 


ಬೆಳ್ಳನ ಬೆಳಗಾಯಿತು (೪) ಏಳೆನ್ನ ಚೇತನ, ಚೆಲುವ 

ಬೆಳ್ಳನ ಬೆಳಗಾಯಿತು (೨) ।।ಪ।।


ಆಕಳಿಸುವದುಂಟೆ, ಆಕಳ ಕರು ಬಿಟ್ಟೆ (೨)

ಹೊ ಕಳೆ ಕಂಡೆವ, ಆಕಳ ಹಿಂಡುವಾ ..ಆ .. ।।೧।।


ಎದ್ದಾವ ಎಳೆ ದುಂಬ, ಸೀಮುದ್ದೆ ತಾ ತುಂಬ, ಆ .. ಆ ..  (೨)

ಗೆಲವಿನ ಗಜ ಎಂಬ ತುತ್ತುರಿಸಿ ಹಿಡಿ ಕೊಂಬ ।।೨।।


ಕಿತ್ತುರ ಹೊಸ ಬಾಳೆ, ಸಕ್ಕರೆ ರಸ ಬಾಳೆ, ಓ .. (೨)

ಹಿಂಡಿದ ನೊರೆ  ಹಾಲು, ದಂಡಿನ ದೊರೆ ಪಾಲು ।।೩।।

                         


Yuga Yugagale Saagali (ಯುಗ ಯುಗಗಳೆ ಸಾಗಲಿ)

Movie: Hrudaya Geete (1989)

Singer: SPB

Song link: Click Here


Yuga yugagale saagali, namma prema shashwata

Giri gaganave beelali, namma preeti shashwata

Nadi sagara keralali, namma prema shashwata

Jagavene helali, namma preeti shashwata

Yuga yugagale saagali, namma prema shashwata ||


Nadugali, bhuvi biriyali, neene ee bala jeeva

Uriyali, kidi sidiyali, eke ee tapa bhava

Olavindu tumbi bandu, mai tumba minchide

Odanadi preeti needu, ee ninna premige

Ee bhiti inneke ee dooraveke ||


Bhayava bidu neenu, ninagagi ododi bande

Sukhada madhu neenu, badukalli tangali tande

Amara ee prema, baralaaradendendu saavu

Dahisu ee mouna, manadalli ekinta novu

Ee pranave hogali, ee lokave nukali

Endendu sangati neene ||


ಚಿತ್ರಗೀತೆ 


ಯುಗ ಯುಗಗಳೆ ಸಾಗಲಿ, ನಮ್ಮ ಪ್ರೇಮ ಶಾಶ್ವತ 

ಗಿರಿ ಗಗನವೆ ಬೀಳಲಿ, ನಮ್ಮ ಪ್ರೀತಿ ಶಾಶ್ವತ 

ನದಿ ಸಾಗರ ಕೆರಳಲಿ, ನಮ್ಮ ಪ್ರೇಮ ಶಾಶ್ವತ 

ಜಗವೇನೆ ಹೇಳಲಿ, ನಮ್ಮ ಪ್ರೀತಿ ಶಾಶ್ವತ 

ಯುಗ ಯುಗಗಳೆ ಸಾಗಲಿ, ನಮ್ಮ ಪ್ರೇಮ ಶಾಶ್ವತ ।।ಪ।।


ನಡುಗಲಿ, ಭುವಿ ಬಿರಿಯಲಿ, ನೀನೆ ಈ ಬಾಳ ಜೀವಾ 

ಉರಿಯಲಿ, ಕಿಡಿ ಸಿಡಿಯಲಿ, ಏಕೆ ಈ ತಾಪ ಭಾವಾ 

ಒಲವಿಂದು ತುಂಬಿ ಬಂದು, ಮೈ ತುಂಬಾ ಮಿಂಚಿದೆ 

ಒಡನಾಡಿ ಪ್ರೀತಿ ನೀಡು, ಈ ನಿನ್ನ ಪ್ರೇಮಿಗೆ 

ಈ ಭೀತಿ ಇನ್ನೇಕೆ ಈ ದೂರವೇಕೆ ।।೧।।


ಭಯವಾ ಬಿಡು ನೀನು, ನಿನಗಾಗಿ ಓಡೋಡಿ ಬಂದೆ 

ಸುಖದಾ ಮಧು ನೀನು, ಬದುಕಲ್ಲಿ ತಂಗಾಳಿ ತಂದೆ 

ಅಮರಾ ಈ ಪ್ರೇಮ, ಬರಲಾರದೆಂದೆಂದು ಸಾವು 

ದಹಿಸು ಈ ಮೌನ, ಮನದಲ್ಲಿ ಏಕಿಂತ ನೋವು 

ಈ ಪ್ರಾಣವೆ ಹೋಗಲಿ, ಈ ಲೋಕವೆ ನೂಕಲಿ 

ಎಂದೆಂದು ಸಂಗಾತಿ ನೀನೇ ।।೨।।

                   


Baara Olidu Baara (ಬಾರ ಒಲಿದು ಬಾರ)

Movie: Hannele Chiguridaga (1968)

Singer: P Susheela

Song link: Click Here


Baara olidu baara nidire taara kandage

Ee tavare kanngalige hondavare kanngalige ||


Kanasina lokada hoo banadalli

Kamana billina chapparadalli

Kamalada hoogala haasigeyalli

Malagisu maguva madilalli

Baara olidu baara nidire taara, kandage

Ee tavare kanngalige hondavare kanngalige ||


Tayiya premada sudheyanu bayasi

Tapisuva kandana kannanu oresi,

Tolina aasare needuta ramisi

Novanu maresu nee nagisi

Baara olidu baara nidire taara, kandage

Ee tavare kanngalige hondavare kanngalige ||


ಚಿತ್ರಗೀತೆ 


ಬಾರ ಒಲಿದು ಬಾರ ನಿದಿರೆ ತಾರ ಕಂದಗೆ 

ಈ ತಾವರೆ ಕಣ್ಗಳಿಗೆ ಹೊಂದಾವರೆ ಕಣ್ಗಳಿಗೆ ।।ಪ।।


ಕನಸಿನ ಲೋಕದ ಹೂ ಬನದಲ್ಲಿ 

ಕಾಮನ ಬಿಲ್ಲಿನ ಚಪ್ಪರದಲ್ಲಿ 

ಕಮಲದ ಹೂಗಳ ಹಾಸಿಗೆಯಲ್ಲಿ 

ಮಲಗಿಸು ಮಗುವ ಮಡಿಲಲ್ಲಿ 

ಬಾರ ಒಲಿದು ಬಾರ ನಿದಿರೆ ತಾರಾ, ಕಂದಗೆ 

ಈ ತಾವರೆ ಕಣ್ಗಳಿಗೆ ಹೊಂದಾವರೆ ಕಣ್ಗಳಿಗೆ।।೧।।


ತಾಯಿಯ ಪ್ರೇಮದ ಸುಧೆಯನು ಬಯಸಿ 

ತಪಿಸುವ ಕಂದನ ಕಣ್ಣನು ಒರೆಸಿ,  

ತೋಳಿನ ಆಸರೆ ನೀಡುತ ರಮಿಸಿ 

ನೋವನು ಮರೆಸು ನೀ ನಗಿಸಿ 

ಬಾರ ಒಲಿದು ಬಾರ ನಿದಿರೆ ತಾರ ಕಂದಗೆ 

ಈ ತಾವರೆ ಕಣ್ಗಳಿಗೆ ಹೊಂದಾವರೆ ಕಣ್ಗಳಿಗೆ ।।೨।।

                 

Sunday, January 14, 2024

Sankranti (ಸಂಕ್ರಾಂತಿ)

ಪದ್ಯ  

ಸಾಹಿತ್ಯ : ಎಚ್.  ಎಸ್ . ವೆಂಕಟೇಶ ಮೂರ್ತಿ 


ಹಬ್ಬ ಬಂತು, ಹಬ್ಬ ಬಂತು 

ಹಬ್ಬ ಬಂತು ಹಬ್ಬ!

ಅಂತೂ ಇಂತೂ ತಂದೇ ತಂತು 

ಕಂತೆ ಕಂತೆ ಕಬ್ಬ ।।೧।।


ಗರಿಮುರಿ ಜರತಾರಿ 

ಲಂಗ ಹಾಕಿಕೊಂಡು!

ಗಿಲಿಗಿಲಿ ಕಾಲಗೆಜ್ಜೆ 

ದನಿ ಮಾಡಿಕೊಂಡು ।।೨।।


ಎಳ್ಳು, ಕಬ್ಬು, ಸಕ್ರೆ ಅಚ್ಚು 

ಬಾಳೆ ಹಣ್ಣು, ಬೆಲ್ಲ!

ಬೀರೋಕಂತ ಹೊರಟಿದ್ದಾಳೆ 

ತಂಗಿ ಕೇರಿಗೆಲ್ಲ. ।।೩।।


ಹೊರಟಿದ್ದಾಳೆ ಪುಟಾಣಿ ತಂಗಿ 

ತನ್ನ ಗೆಳತಿ ಜೋಡಿ!

ರಂಗೇನಳ್ಳಿ ರಂಗಿನ ಗೊಂಬಿ 

ಕಣ್ಣ ತುಂಬ ನೋಡಿ ।।೪।।


ಕೊಂಬನು ಹೆರೆದು, ಬಣ್ಣವ ಬಳಿದು 

ಎತ್ತು-ಹಸು-ಕರುವನ್ನು!

ಕಿಚ್ಚನು ಹಾಯಿಸಿ ಕೊಡುವರು ಅಪ್ಪ 

ಅಕ್ಕಿ-ಬೆಲ್ಲ-ಹಣ್ಣು! ।।೫।।


ಮಕ್ಕಳನೆಲ್ಲ ಹಸೆಯಲಿ ಕೊಡಿಸಿ 

ಎಳ್ಳು-ಎಲಚಿ-ಅಚ್ಚು!

ಸುರಿಯುವಾಗ ಅಮ್ಮ ಅಜ್ಜಿ 

ಮಕ್ಕಳಿಗಚ್ಚು ಮೆಚ್ಚು! ।।೬।।


Padya


Habba bantu, habba bantu

Habba bantu habba!

Antu intu tande tantu

Kante kante kabba! ||1||


Garimuri jaratari

Langa hakikondu!

Giligili kalagejje

Dani madikondu! ||2||


Ellu, kabbu, sakre acchu

Bale hannu, bella!

Beerokanta horatiddale

Tangi kerigella. ||3||


Horatiddale putani tangi

Tanna gelati jodi!

Rangenahalli rangina gombi

Kanna tumba nodi! ||4||


Kombanu heredu, bannava balidu

Ettu-Hasu-Karuvannu!

Kicchanu hayisi koduvaru appa

Akki-bella-hannu! ||5||


Makkalanella haseyali kodisi

Ellu-elachi-acchu!

Suriyuvaga amma ajji

Makkaligacchu mecchu! ||6||

           




Mulugada Surya (ಮುಳುಗದ ಸೂರ್ಯ)

 ಪದ್ಯ 

ಸಾಹಿತ್ಯ : ಫ. ಗು. ಸಿದ್ದಾಪುರ 


ಅಂಧರ ಬಾಳಿನ ಸುಂದರ ಚಂದಿರ 

ಗದುಗಿನ ಗವಾಯಿ ಗಿರಿ ಶಿಖರ 

ಬೆಟ್ಟದಾಚೆ ತಾ ಬೆಳೆದು ನಿಂತನು 

ಪುಟ್ಟರಾಜ ಕವಿ ಪ್ರಭಾಕರ 


ಕಣ್ಣುಗಳಿದ್ದೂ ಇಲ್ಲದ ಹಾಗೆ 

ಬದುಕುತ್ತಿರುವರು ಹಲವು ಜನ 

ಇರದೇ ಇದ್ದರು ಇದ್ದಂತಿಹರು 

ಸಾಧಕರಾಗಿ ಕೆಲವು ಜನ 


ಕಟ್ಟಿ ಬೆಳೆಸಿ ತಾ ಹುಟ್ಟುಹಾಕಿದ 

ಗಾನಯೋಗಿಯು ಸ್ವರಲೋಕ 

ಸಾವಿರ ಸಾವಿರ ಅಂಧ ಮಕ್ಕಳಿಗೆ 

ಸಜ್ಜಾಯಿತು ಈ ಭೂಲೋಕ 


ಬರೆದರು ನಾಟಕ ಪುರಾಣ ಚರಿತೆ 

ಅಳೆಯಲಿಕ್ಕಾಗದು ಪಾಂಡಿತ್ಯ 

ಸೂಸುತ್ತಿರುವುದು ಎಲ್ಲೆಡೆ ಸೌರಭ 

ಇವರದೆ ಆದ ಸಾಹಿತ್ಯ 


ಹಕ್ಕಿಗಳುಲಿದವು ನಲಿದವು ಒಡನೆ 

ಕಿನ್ನರಿ ನುಡಿಸಲು ತನ್ನೊಳಗೆ 

ರಾಜ ರಾಜ ಕವಿ ಮಹಾರಾಜ 

ಮುಳುಗದ ಸೂರ್ಯ ಧರೆಯೊಳಗೆ. 


Padya


Andhara baalina sundara chandira

Gadugina gavayi giri shikhara

Bettadaache ta beledu nintanu

Puttaraja kavi prabhakara


Kannugaliddu illada haage

Badukuttiruvaru halavu jana

Irade iddaru iddantiharu

Sadhakaragi kelavu jana


Katti belesi ta huttuhakida

Ganayogiya swaraloka

Savira savira andha makkalige

Sajjayitu ee bhuloka


Baredaru nataka purana charite

Aleyalikkagadu panditya

Susuttiruvudu ellede sourabha

Ivarade aa sahitya


Hakkigalulidavu nalidavu odane

Kinnari nudisalu tannolage

Raja raja kavi maharaja                     

Mulugada surya dhareyolage.