Sunday, January 14, 2024

Sankranti (ಸಂಕ್ರಾಂತಿ)

ಪದ್ಯ  

ಸಾಹಿತ್ಯ : ಎಚ್.  ಎಸ್ . ವೆಂಕಟೇಶ ಮೂರ್ತಿ 


ಹಬ್ಬ ಬಂತು, ಹಬ್ಬ ಬಂತು 

ಹಬ್ಬ ಬಂತು ಹಬ್ಬ!

ಅಂತೂ ಇಂತೂ ತಂದೇ ತಂತು 

ಕಂತೆ ಕಂತೆ ಕಬ್ಬ ।।೧।।


ಗರಿಮುರಿ ಜರತಾರಿ 

ಲಂಗ ಹಾಕಿಕೊಂಡು!

ಗಿಲಿಗಿಲಿ ಕಾಲಗೆಜ್ಜೆ 

ದನಿ ಮಾಡಿಕೊಂಡು ।।೨।।


ಎಳ್ಳು, ಕಬ್ಬು, ಸಕ್ರೆ ಅಚ್ಚು 

ಬಾಳೆ ಹಣ್ಣು, ಬೆಲ್ಲ!

ಬೀರೋಕಂತ ಹೊರಟಿದ್ದಾಳೆ 

ತಂಗಿ ಕೇರಿಗೆಲ್ಲ. ।।೩।।


ಹೊರಟಿದ್ದಾಳೆ ಪುಟಾಣಿ ತಂಗಿ 

ತನ್ನ ಗೆಳತಿ ಜೋಡಿ!

ರಂಗೇನಳ್ಳಿ ರಂಗಿನ ಗೊಂಬಿ 

ಕಣ್ಣ ತುಂಬ ನೋಡಿ ।।೪।।


ಕೊಂಬನು ಹೆರೆದು, ಬಣ್ಣವ ಬಳಿದು 

ಎತ್ತು-ಹಸು-ಕರುವನ್ನು!

ಕಿಚ್ಚನು ಹಾಯಿಸಿ ಕೊಡುವರು ಅಪ್ಪ 

ಅಕ್ಕಿ-ಬೆಲ್ಲ-ಹಣ್ಣು! ।।೫।।


ಮಕ್ಕಳನೆಲ್ಲ ಹಸೆಯಲಿ ಕೊಡಿಸಿ 

ಎಳ್ಳು-ಎಲಚಿ-ಅಚ್ಚು!

ಸುರಿಯುವಾಗ ಅಮ್ಮ ಅಜ್ಜಿ 

ಮಕ್ಕಳಿಗಚ್ಚು ಮೆಚ್ಚು! ।।೬।।


Padya


Habba bantu, habba bantu

Habba bantu habba!

Antu intu tande tantu

Kante kante kabba! ||1||


Garimuri jaratari

Langa hakikondu!

Giligili kalagejje

Dani madikondu! ||2||


Ellu, kabbu, sakre acchu

Bale hannu, bella!

Beerokanta horatiddale

Tangi kerigella. ||3||


Horatiddale putani tangi

Tanna gelati jodi!

Rangenahalli rangina gombi

Kanna tumba nodi! ||4||


Kombanu heredu, bannava balidu

Ettu-Hasu-Karuvannu!

Kicchanu hayisi koduvaru appa

Akki-bella-hannu! ||5||


Makkalanella haseyali kodisi

Ellu-elachi-acchu!

Suriyuvaga amma ajji

Makkaligacchu mecchu! ||6||

           




Mulugada Surya (ಮುಳುಗದ ಸೂರ್ಯ)

 ಪದ್ಯ 

ಸಾಹಿತ್ಯ : ಫ. ಗು. ಸಿದ್ದಾಪುರ 


ಅಂಧರ ಬಾಳಿನ ಸುಂದರ ಚಂದಿರ 

ಗದುಗಿನ ಗವಾಯಿ ಗಿರಿ ಶಿಖರ 

ಬೆಟ್ಟದಾಚೆ ತಾ ಬೆಳೆದು ನಿಂತನು 

ಪುಟ್ಟರಾಜ ಕವಿ ಪ್ರಭಾಕರ 


ಕಣ್ಣುಗಳಿದ್ದೂ ಇಲ್ಲದ ಹಾಗೆ 

ಬದುಕುತ್ತಿರುವರು ಹಲವು ಜನ 

ಇರದೇ ಇದ್ದರು ಇದ್ದಂತಿಹರು 

ಸಾಧಕರಾಗಿ ಕೆಲವು ಜನ 


ಕಟ್ಟಿ ಬೆಳೆಸಿ ತಾ ಹುಟ್ಟುಹಾಕಿದ 

ಗಾನಯೋಗಿಯು ಸ್ವರಲೋಕ 

ಸಾವಿರ ಸಾವಿರ ಅಂಧ ಮಕ್ಕಳಿಗೆ 

ಸಜ್ಜಾಯಿತು ಈ ಭೂಲೋಕ 


ಬರೆದರು ನಾಟಕ ಪುರಾಣ ಚರಿತೆ 

ಅಳೆಯಲಿಕ್ಕಾಗದು ಪಾಂಡಿತ್ಯ 

ಸೂಸುತ್ತಿರುವುದು ಎಲ್ಲೆಡೆ ಸೌರಭ 

ಇವರದೆ ಆದ ಸಾಹಿತ್ಯ 


ಹಕ್ಕಿಗಳುಲಿದವು ನಲಿದವು ಒಡನೆ 

ಕಿನ್ನರಿ ನುಡಿಸಲು ತನ್ನೊಳಗೆ 

ರಾಜ ರಾಜ ಕವಿ ಮಹಾರಾಜ 

ಮುಳುಗದ ಸೂರ್ಯ ಧರೆಯೊಳಗೆ. 


Padya


Andhara baalina sundara chandira

Gadugina gavayi giri shikhara

Bettadaache ta beledu nintanu

Puttaraja kavi prabhakara


Kannugaliddu illada haage

Badukuttiruvaru halavu jana

Irade iddaru iddantiharu

Sadhakaragi kelavu jana


Katti belesi ta huttuhakida

Ganayogiya swaraloka

Savira savira andha makkalige

Sajjayitu ee bhuloka


Baredaru nataka purana charite

Aleyalikkagadu panditya

Susuttiruvudu ellede sourabha

Ivarade aa sahitya


Hakkigalulidavu nalidavu odane

Kinnari nudisalu tannolage

Raja raja kavi maharaja                     

Mulugada surya dhareyolage.

               


Saturday, January 13, 2024

Nodu Baa Nodu Baa Nammura (ನೋಡು ಬಾ ನೋಡು ಬಾ ನಮ್ಮೂರ)

Movie: Miss Leelavati (1965)

Singer: S Janaki

Song link: Click Here


Nodu baa nodu baa nammura

Nodu baa, nodu baa

Kannara nodu baa nammura ||


Kasturi kannadada nammuru

Kalege kann adaa nammuru

Chamundi varadaana nammuru

Rasa jeevi neenagu baa baa baa baa

Nodu baa, nodu baa nodu baa nammura ||


Nandanave bhuvigilida brundavana

Illihudu nooraru premayana

Kaveri vishwa kavi kavya rasa dhare

Aa tayi mysura jeevanaa dhare

Nodu baa, nodu baa nodu baa nammura ||


Karnata sangeeta sammohini

Aa  aa aa aa..

Karnata sangeeta sammohini

Kannadada sahitya sudhe vahini

Kannadada kana kanavu sanjeevini

Rasajeevi neenagu baa baa baa baa ||


ಚಿತ್ರಗೀತೆ 


ನೋಡು ಬಾ ನೋಡು ಬಾ ನಮ್ಮೂರ 

ನೋಡು ಬಾ, ನೋಡು ಬಾ 

ಕಣ್ಣಾರ ನೋಡು ಬಾ ನಮ್ಮೂರ ।।ಪ।।


ಕಸ್ತೂರಿ ಕನ್ನಡದ ನಮ್ಮೂರು 

ಕಲೆಗೆ ಕಣ್ಣಾದ ನಮ್ಮೂರು 

ಚಾಮುಂಡಿ ವರದಾನ ನಮ್ಮೂರು 

ರಸ ಜೀವಿ ನೀನಾಗು ಬಾ ಬಾ ಬಾ ಬಾ 

ನೋಡು ಬಾ, ನೋಡು ಬಾ ನೋಡು ಬಾ ನಮ್ಮೂರ ।।೧।।


ನಂದನವೆ ಭುವಿಗಿಳಿದ ಬೃಂದಾವನ 

ಇಲ್ಲಿಹುದು ನೂರಾರು ಪ್ರೇಮಾಯಣ 

ಕಾವೇರಿ ವಿಶ್ವಕವಿ ಕಾವ್ಯ ರಸ ಧಾರೆ 

ಆ ತಾಯಿ ಮೈಸೂರ ಜೀವನದಾ ಧಾರೆ 

ನೋಡು ಬಾ, ನೋಡು ಬಾ ನೋಡು ಬಾ ನಮ್ಮೂರ ।।೨।।


ಕರ್ನಾಟ ಸಂಗೀತ ಸಮ್ಮೋಹಿನಿ 

ಆ  ಆ  ಆ  ಆ ..

ಕರ್ನಾಟ ಸಂಗೀತ ಸಮ್ಮೋಹಿನಿ 

ಕನ್ನಡದ ಸಾಹಿತ್ಯ ಸುಧೆ ವಾಹಿನಿ 

ಕನ್ನಡದ ಕಣ ಕಣವು ಸಂಜೀವಿನಿ 

ರಸಜೀವಿ ನೀನಾಗು ಬಾ ಬಾ ಬಾ ಬಾ ।।೩।।

               


Ninna Nanna Manavu (ನಿನ್ನ ನನ್ನ ಮನವು)

Movie: Bhagyavantaru (1979)

Singer: Dr. Rajkumar

Song link: Click Here


Ninna nanna manavu seritu, nanna ninna hrudaya, haaditu

Ragavu onde bhavavu onde

Jeeva ondayitu, balu hagurayitu

Ninna nanna manavu seritu, nanna ninna hrudaya, haaditu ||


Ekangiyagiralu, kai hidide, joteyade

Tayante bali bande, aadarisi, preetiside

Balali sukha needide, nanni badukige shrutiyade

Nanni maneya belakade 

Ninna nanna manavu seritu, nanna ninna hrudaya, haaditu ||



Endu joteyali baruve, ninna neralina haage iruve

Koragadiru, marugadiru, haayagi neeniru

Endu joteyali baruve, ninna usirali usiragiruve

Novugalu nanagirali, aananda ninadagali

Naguvina hoogala mele, nadeyuva bhagya ninagirali

Noduvaa bhagya nanagirali ||


ಚಿತ್ರಗೀತೆ 


ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯ, ಹಾಡಿತು 

ರಾಗವು ಒಂದೇ ಭಾವವು ಒಂದೇ 

ಜೀವ ಒಂದಾಯಿತು, ಬಾಳು ಹಗುರಾಯಿತು 

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯ, ಹಾಡಿತು ।।ಪ।।


ಏಕಾಂಗಿಯಾಗಿರಲೂ, ಕೈ ಹಿಡಿದೆ, ಜೊತೆಯಾದೆ 

ತಾಯಂತೆ ಬಳಿ ಬಂದೆ, ಆದರಿಸಿ, ಪ್ರೀತಿಸಿದೆ 

ಬಾಳಲಿ ಸುಖ ನೀಡಿದೆ, ನನ್ನೀ ಬದುಕಿಗೆ ಶೃತಿಯಾದೆ 

ನನ್ನೀ ಮನೆಯಾ ಬೆಳಕಾದೆ 

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯ, ಹಾಡಿತು ।।೧।।


ಎಂದೂ ಜೊತೆಯಲಿ ಬರುವೆ, ನಿನ್ನ ನೆರಳಿನ ಹಾಗೆ ಇರುವೆ 

ಕೊರಗದಿರು, ಮರುಗದಿರು, ಹಾಯಾಗಿ ನೀನಿರು 

ಎಂದೂ ಜೊತೆಯಲಿ ಬರುವೆ, ನಿನ್ನ ಉಸಿರಲಿ ಉಸಿರಾಗುವೆ 

ನೋವುಗಳು ನನಗಿರಲಿ, ಆನಂದ ನಿನದಾಗಲಿ 

ನಗುವಿನ ಹೂಗಳ ಮೇಲೆ, ನಡೆಯುವ ಭಾಗ್ಯ ನಿನಗಿರಲಿ 

ನೋಡುವ ಭಾಗ್ಯ ನನಗಿರಲಿ  ।।೨।।

                 



Thursday, January 11, 2024

Kangalu Tumbiralu (ಕಂಗಳು ತುಂಬಿರಲು)

Movie: Chandanada Gombe (1979)

Singer: S Janaki

Song link: Click Here


Kangalu tumbiralu kambani dhareyali

Hrudayavu bendiralu novina jwaleyali

Menada deepadante nondu nondu neerade ||


Nimma roopa kanninalli, nimma maate kivigalali

Nimma nota innu nanna hrudaya veene meetiralu

Nimma sneha manasinali, nimma prema nenapinali

Nimma muddu kanda nanna amma endu kugiralu

Nonda nanna jeeva indu eno sukha kaanutide ||


Neevu tanda ee manege, neevu tanda ee sirige

Dooravagi endendigu hogalaare nimmanegu

Aa..aa nimma mane bagilige toranada haagiruve

Nimma mane deepavagi belaguve nannanegu

Nimma nenapalle nanna bala nanu saagisuve ||


ಚಿತ್ರಗೀತೆ 


ಕಂಗಳು ತುಂಬಿರಲು ಕಂಬನಿ ಧಾರೆಯಲಿ 

ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ 

ಮೇಣದ ದೀಪದಂತೆ ನೊಂದು ನೊಂದು ನೀರಾದೆ ।।ಪ।।


ನಿಮ್ಮ ರೂಪ ಕಣ್ಣಿನಲಿ,ನಿಮ್ಮ ಮಾತೆ ಕಿವಿಗಳಲಿ 

ನಿಮ್ಮ ನೋಟ ಇನ್ನೂ ನನ್ನ ಹೃದಯ ವೀಣೆ ಮೀಟಿರಲು 

ನಿಮ್ಮ ಸ್ನೇಹ ಮನಸಿನಲಿ, ನಿಮ್ಮ ಪ್ರೇಮ ನೆನಪಿನಲಿ 

ನಿಮ್ಮ ಮುದ್ದು ಕಂದ ನನ್ನ ಅಮ್ಮಾ ಎಂದು ಕೊಗಿರಲು 

ನೊಂದ ನನ್ನ ಜೀವ ಇಂದು ಏನೋ ಸುಖ ಕಾಣುತಿದೆ ।।೧।।


ನೀವು ತಂದ ಈ ಮನೆಗೆ, ನೀವು ತಂದ ಈ ಸಿರಿಗೆ 

ದೂರವಾಗಿ ಎಂದೆಂದಿಗೂ ಹೋಗಲಾರೆ ನಿಮ್ಮಾಣೆಗೂ 

ಆ .. ಆ ನಿಮ್ಮ ಮನೆ ಬಾಗಿಲಿಗೆ ತೋರಣದ ಹಾಗಿರುವೆ 

ನಿಮ್ಮ ಮನೆ ದೀಪವಾಗಿ ಬೆಳಗುವೆ ನನ್ನಾಣೆಗೂ 

ನಿಮ್ಮ ನೆನಪಲ್ಲೆ ನನ್ನ ಬಾಳ ನಾನು ಸಾಗಿಸುವೆ ।।೨।।

                                     



Aa Karnanante (ಆ ಕರ್ಣನಂತೆ)

Movie: Karna (1986)

Singer: K J Yesudas

Song link: Click Here


Aa.. karnanante nee daaniyade

Innondu jeevake aadharavaade

Aa karnanante ||


Kasadante kandaru maneyalli ellaru

Dinavella balali kanniru tandaru

Ninnantarangava avarenu ballaru

Ninnannu hettavaru maha punyavantaru ||


Balemba aatadi chendante ellaru

Tannaaseyanteye aadodu devaru

Indella nale sayode ellaru

Enadareneega ninnannu mareyaru ||


Preetiyali sukhavuntu snehadali hitavuntu

Tyagakke phalavuntu ninagondu beleyuntu

Bangaradantha gunavu ninnalli iruvaga

Balemba horatadali solembudelluntu ||


ಚಿತ್ರಗೀತೆ 


ಆ .. ಕರ್ಣನಂತೆ ನೀ ದಾನಿಯಾದೆ 

ಇನ್ನೊಂದು ಜೀವಕೆ ಆಧಾರವಾದೆ 

ಆ ಕರ್ಣನಂತೆ ।।ಪ।।


ಕಸದಂತೆ ಕಂಡರು ಮನೆಯಲ್ಲಿ ಎಲ್ಲರು 

ದಿನವೆಲ್ಲ ಬಾಳಲಿ ಕಣ್ಣೀರು ತಂದರು 

ನಿನ್ನಂತರಂಗವ ಅವರೇನು ಬಲ್ಲರು 

ನಿನ್ನನು ಹೆತ್ತವರು ಮಹಾ ಪುಣ್ಯವಂತರು ।।೧।।


ಬಾಳೆಂಬ ಆಟದಿ ಚೆಂಡಂತೆ ಎಲ್ಲರೂ 

ತನ್ನಾಸೆಯಂತೆಯೇ ಆಡೋದು ದೇವರು 

ಇಂದಲ್ಲ ನಾಳೆ ಸಾಯೋದೆ ಎಲ್ಲರೂ 

ಏನಾದರೇನೀಗ ನಿನ್ನನ್ನು ಮರೆಯರು ।।೨।।


ಪ್ರೀತಿಯಲಿ ಸುಖವುಂಟು ಸ್ನೇಹದಲಿ ಹಿತವುಂಟು 

ತ್ಯಾಗಕ್ಕೆ ಫಲವುಂಟು ನಿನಗೊಂದು ಬೆಲೆಯುಂಟು 

ಬಂಗಾರದಂಥ ಗುಣವು ನಿನ್ನಲ್ಲಿ ಇರುವಾಗ 

ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು ।।೩।।

                                  



Tuesday, January 9, 2024

Aa Mogavu Entha Cheluvu (ಆ ಮೊಗವು ಎಂಥಾ ಚೆಲುವು)

Movie: Bangarada Hoovu (1967)

Singer: P B Srinivas

Song link: Click Here


Aa mogavu entha cheluvu

Manava seleva, bangarada hoovu

Aa mogavu entha cheluvu ||


Minchante bande manadalli ninte

Mai maresi mana kunisi aananda tande

Kudi nota beeri nasu naguva tori

Hindendu kaanada sukhavannu tande

Chandirana nachisuva cheluvanne padeda ||


Ninna nadeyu kuniva navilante iralu

Innentha sobagu nee natyavaadalu

Savimaatu nooraru kannalli iralu

Innentha sogasu nee haadutiralu

Aralida kendavareya andava meerisuva ||


ಚಿತ್ರಗೀತೆ 


ಆ ಮೊಗವು ಎಂಥಾ ಚೆಲುವು 

ಮನವ ಸೆಳೆವ, ಬಂಗಾರದ ಹೂವು 

ಆ ಮೊಗವು ಎಂಥಾ ಚೆಲುವು ।।ಪ।।


ಮಿಂಚಂತೆ ಬಂದೆ ಮನದಲ್ಲಿ ನಿಂತೆ 

ಮೈ ಮರೆಸಿ ಮನ ಕುಣಿಸಿ ಆನಂದ ತಂದೆ 

ಕುಡಿ ನೋಟ ಬೀರಿ ನಸು ನಗುವ ತೋರಿ 

ಹಿಂದೆಂದು ಕಾಣದ ಸುಖವನ್ನು ತಂದೆ 

ಚಂದಿರನ ನಾಚಿಸುವ ಚೆಲುವನ್ನೆ ಪಡೆದ ।।೧।।


ನಿನ್ನ ನಡೆಯು ಕುಣಿವಾ ನವಿಲಂತೆ ಇರಲು 

ಇನ್ನೆಂಥ ಸೊಬಗು ನೀ ನಾಟ್ಯವಾಡಲು 

ಸವಿಮಾತು ನೂರಾರು ಕಣ್ಣಲ್ಲಿ ಇರಲು 

ಇನ್ನೆಂಥ ಸೊಗಸು ನೀ ಹಾಡುತಿರಲು 

ಅರಳಿದ ಕೆಂದಾವರೆಯ ಅಂದವ ಮೀರಿಸುವ ।।೨।।