Friday, October 7, 2022

Tuguve Tottila (ತೂಗುವೆ ತೊಟ್ಟಿಲ)


Padya

Sahitya: Panje Mangesharayaru


Tuguve tottila jogula hadi,

Kugade malagenna muddina modi,

Jo jo


Tumbi pavadisitu esala hoogalali,

Gombe! ninnaya kannineve seregolali,

Rembe chiguroladagitu pikaduliyu,

Sombanagali ninna tuti chilipiliyu.


Jaladamel malaguva marihamsadante.

Eleyolagiha malligeya mogginante,

Chelutottilali malagu aragiliye,

Talegimbigeeshana kaininna baliye.


ಪದ್ಯ 


ತೂಗುವೆ ತೊಟ್ಟಿಲ ಜೋಗುಳ ಹಾಡಿ,

ಕೂಗದೆ ಮಲಗೆನ್ನ ಮುದ್ದಿನ ಮೋಡಿ, ಜೋ ಜೋ 


ತುಂಬಿ ಪವಡಿಸಿತು ಎಸಳ ಹೂಗಳಲಿ,

ಗೊಂಬೆ ! ನಿನ್ನಯ ಕಣ್ಣಿನೆವೆ ಸೆರೆಗೊಳಲಿ,

ರೆಂಬೆ ಚಿಗುರೊಳಡಗಿತು ಪಿಕದುಲಿಯು,

ಸೋಂಬನಾಗಲಿ ನಿನ್ನ ತುಟಿ ಚಿಲಿಪಿಲಿಯು. 


ಜಲದಮೇಲ್  ಮಲಗುವ ಮರಿಹಂಸದಂತೆ. 

ಎಲೆಯೊಳಗಿಹ ಮಲ್ಲಿಗೆಯ ಮೊಗ್ಗಿನಂತೆ,

ಚೆಲುತೊಟ್ಟಿಲಲಿ ಮಲಗು ಅರಗಿಳಿಯೆ,

ತಲೆಗಿಂಬಿಗೀಶನ ಕೈ ನಿನ್ನ ಬಳಿಯೆ. 




Thursday, October 6, 2022

Hariya Neneyadanta Nara Janmaveke (ಹರಿಯ ನೆನೆಯದಂತ ನರ ಜನ್ಮವೇಕೆ)

Bhaktigeete

Sri Purandara Dasara Keerthanegalu

Song link: Click Here


Raga: Purvi

Tala: Atatala


Hariya neneyadanta nara janmaveke

Nara hariya kondadada naligeyeke ||


Vedavanodada vipra taneke

Kalagavariyada kshatriyaneke

Krodhava bidada sanyasi taneke

Aadhara villada armutannaveke ||


Satya souchavillada aacharaveke

Nitya nemavillada japatapaveke

Bhaktili madada haripujeyeke

Uttamarillada sabheyu taneke ||


Matapitara poreyada makkaleke

Matu kelada soseya godave taneke

Neeti nemavillada koota taneke

Anathanada mele kopavadeke ||


Alidu alidu hoguva makkaleke

Tilidu buddiya helada guruveke

Nalinabha sri purandara vittalana

Cheluva mooutiya nodada kangaleke ||


ಭಕ್ತಿಗೀತೆ 


ಹರಿಯ ನೆನೆಯದಂತ ನರ ಜನ್ಮವೇಕೆ 

ನರ ಹರಿಯ ಕೊಂಡಾಡದ ನಾಲಿಗೆಯೇಕೆ ।।ಪ ।।


ವೇದವನೋದದ ವಿಪ್ರ ತಾನೇಕೆ 

ಕಾಳಗವರಿಯದ ಕ್ಷತ್ರಿಯನೇಕೆ 

ಕ್ರೋಧವ ಬಿಡದ ಸನ್ಯಾಸಿ ತಾನೇಕೆ 

ಆಧರವಿಲ್ಲದ ಅಮೃತಾನ್ನವೇಕೆ ।।೧।।


ಸತ್ಯ ಸೌಚವಿಲ್ಲದ ಆಚಾರವೇಕೆ 

ನಿತ್ಯ ನೇಮವಿಲ್ಲದ ಜಪತಪ ವೇಕೆ 

ಭಕ್ತಿಲಿ ಮಾಡದ ಹರಿ ಪೂಜೆಯೇಕೆ 

ಉತ್ತಮರಿಲ್ಲದ ಸಭೆಯು ತಾನೇಕೆ ।।೨।।


ಮಾತಾಪಿತರ ಪೊರೆಯದ ಮಕ್ಕಳೇಕೆ 

ಮಾತು ಕೇಳದ ಸೊಸೆಯ ಗೊಡವೆ ತಾನೇಕೆ 

ನೀತಿ ನೇಮವಿಲ್ಲದ ಕೂಟ ತಾನೇಕೆ 

ಅನಾಥನಾದ ಮೇಲೆ ಕೋಪವದೇಕೆ ।।೩।।


ಅಳಿದು ಅಳಿದು ಹೋಗುವ ಮಕ್ಕಳೇಕೆ 

ತಿಳಿದು ಬುದ್ದಿಯ ಹೇಳದ ಗುರುವೇಕೆ 

ನಳಿನಾಭ ಶ್ರೀ ಪುರಂದರ ವಿಠ್ಠಲನ 

ಚೆಲುವ ಮೂರುತಿಯ ನೋಡದ ಕಂಗಳೇಕೆ ।।೪।।          ಶ್ರೀ                                               

                                       


Wednesday, October 5, 2022

Shivappa Kayo Tande (ಶಿವಪ್ಪ ಕಾಯೋ ತಂದೆ)

  • Movie: Bedara Knnapa (1954)
  • Singer: C S Jayaraman
  • Song link: Click Here


Sharanu shankara shambo, omkaranada roopa

Moreyani alisi | palisu sarvesha ||

Shivappa kayo tande mooru loka swami deva |

Hasiveyannu talalare kapadeya harane | kapadeya ||


Bhaktiyante poojeyante ondu ariye na |

Papavante punyavante kanenayya na ||


Shuddanagi pujegaiye oliveyante ne |

Shuddavo ashuddavo na kane devane |

Nadavante vedavante ondu tiliyena |

Benda jeeva nondu kuge, bandu nodeya harane ||


Eka chittadi nambidavara ne saki salahuveyantappa |

Shokava harisuva deva neenadare |

Beteya toro yennapa lokavanaluva neenappa |

Beteya toro yennapa ||


ಚಿತ್ರಗೀತೆ 


ಶರಣು ಶಂಕರ ಶಂಭೋ ,  ಓಂಕಾರನಾದ ರೂಪ ।

ಮೊರೆಯನೀ ಆಲಿಸಿ । ಪಾಲಿಸು ಸರ್ವೇಶಾ ।।

ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವಾ ।

ಹಸಿವೆಯನ್ನು ತಾಳಲಾರೆ ಕಾಪಡೆಯಾ ಹರನೇ 

ಕಾಪಡೆಯಾ ।।


ಭಕ್ತಿಯಂತೆ ಪೂಜೆಯಂತೆ ಒಂದು ಅರಿಯೆ ನಾ ।

ಪಾಪವಂತೆ ಪುಣ್ಯವಂತೆ ಕಾಣೆನಯ್ಯ ನಾ ।।


ಶುದ್ಧನಾಗಿ ಪೂಜೆಗೈಯೆ ಒಲಿವೆಯಂತೆ ನೀ ।

ಶುದ್ಧವೋ ಅಶುದ್ಧವೋ ನಾ ಕಾಣೆ ದೇವನೇ ।

ನಾದವಂತೆ ವೇದವಂತೆ ಒಂದು ತಿಳಿಯೆನಾ ।

ಬೆಂದ ಜೀವ ನೊಂದು ಕೂಗೆ ಬಂದು ನೋಡೆಯಾ ಹರನೇ ।।


ಏಕ ಚಿತ್ತದಿ ನಂಬಿದವರ ನೀ ಸಾಕಿ ಸಲಹುವೆಯಂತಪ್ಪಾ ।

ಶೋಕವ ಹರಿಸುವ ದೇವ ನೀನಾದರೆ ।

ಬೇಟೆಯ ತೋರೋ ಯನ್ನಪಾ ಲೋಕವನಾಳುವ ನೀನಪ್ಪಾ ।

ಬೇಟೆಯ ತೋರೋ ಯನ್ನಪಾ ।।



Tuesday, October 4, 2022

Kanda (ಕಂದ)


Padya

Janapada


Kusu idda manege beesanike yataka

Kusu kandayya ola horaga | aadidara

Beesanige gali sulidava ||


Aadi ba nana kanda angala toledena

Tengina kayi tilineera | takkondu

Bangara mari toledena ||


Aluva kandana tutiyu havalada kudihanga

Kudihubbu bevinesalanga | kannota

Shivana kaiyalagu holedanga ||


Kandana kirikiri indenu helali

Bindeege halu surivanda | chanjeeya

Chandramana tandu nilisenda ||


ಪದ್ಯ 


ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ 

ಕೂಸು ಕಂದಯ್ಯ ಒಳ ಹೊರಗ  । ಆಡಿದರ 

ಬೀಸಣಿಗೆ ಗಾಳಿ ಸುಳಿದಾವ ।।


ಆಡಿ ಬಾ ನನ ಕಂದ ಅಂಗಾಲ ತೊಳೆದೇನ 

ತೆಂಗಿನ ಕಾಯಿ ತಿಳಿನೀರ । ತಕ್ಕೊಂಡು 

ಬಂಗಾರ ಮಾರಿ ತೊಳೆದೇನ ।।


ಅಳುವ ಕಂದನ ತುಟಿಯು ಹವಳದ ಕುಡಿಹಂಗ 

ಕುಡಿಹುಬ್ಬು ಬೇವಿನೆಸಳ೦ಗ  । ಕಣ್ಣೋಟ 

ಶಿವನ ಕೈಯಲಗು ಹೊಳೆದಂಗ ।।


ಕಂದನ ಕಿರಿಕಿರಿ ಇಂದೇನು ಹೇಳಲಿ 

ಬಿಂದೀಗೆ ಹಾಲು ಸುರಿವಂದ । ಚಂಜೀಯ 

ಚಂದ್ರಮನ ತಂದು ನಿಲಿಸೆಂದಾ ।।



Monday, October 3, 2022

Kuntre Nintre Avana Dhyana (ಕುಂತ್ರೆ ನಿಂತ್ರೆ ಅವನ ಧ್ಯಾನ )


Janapada Geete

Song link:Click Here



 Kuntre nintre avana dhyana

Jeevakilri samadhana

Avanige enta bigumana

Avane nanna genekara ||


Indra lokdallila kanri

Chandra lokdallila kanri

Mooru lokdallilla kanri

Avane nanna genekara ||


Ropdallavanu chandra kanri

Ropdallavanu indra kanri

Kerigella obne kanri

Avane nanna genekara ||


Jatrel avna kande kanri

Chatri mucchi ninta kanri

Pakkak bandu ninta kanri

Avane nanna genekara ||


Molle hoova tanda kanri

Turubinalli itta kanri

Maiyella jum antu

Avane nanna genekara ||


Chavdig bandu ninta kanri

Tali chinna tanda kanri

Nangu avangu maduve kanri

Avane nanna yajamana ||


ಜನಪದ ಗೀತೆ 


ಕುಂತ್ರೆ ನಿಂತ್ರೆ ಅವನ ಧ್ಯಾನ 

ಜೀವಕ್ಕಿಲ್ರಿ ಸಮಾಧಾನ 

ಅವನಿಗೆ ಎಂತ ಬಿಗುಮಾನ 

ಅವನೇ ನನ್ನ ಗೆಣೆಕಾರ ।।ಪ ।।


ಇಂದ್ರ ಲೋಕ್ದಲಿಲ್ಲ ಕಣ್ರಿ 

ಚಂದ್ರ ಲೋಕ್ದಲಿಲ್ಲಕಣ್ರಿ 

ಕೇರಿಗೆಲ್ಲ ಒಬ್ನೇ ಕಣ್ರಿ 

 ಅವನೇ ನನ್ನ ಗೆಣೆಕಾರ।।೧।।


ರೂಪ್ದಲವನು ಚಂದ್ರ ಕಣ್ರಿ 

ರೂಪ್ದಲವನು ಇಂದ್ರ ಕಣ್ರಿ 

ಕೇರಿಗೆಲ್ಲ ಒಬ್ನೆ ಕಣ್ರಿ 

ಅವನೇ ನನ್ನ ಗೆಣೆಕಾರ ।।೨।।


ಜಾತ್ರೆಲ್ ಅವನ ಕಂಡೆ ಕಣ್ರಿ 

ಛತ್ರಿ ಮುಚ್ಚಿ ನಿಂತ ಕಣ್ರಿ 

ಪಕ್ಕಕ್ ಬಂದು ನಿಂತ ಕಣ್ರಿ 

ಅವನೇ ನನ್ನ ಗೆಣೆಕಾರ ।।೩।।


ಮೊಲ್ಲೆ ಹೂವ ತಂದ ಕಣ್ರಿ 

ತುರುಬಿನಲ್ಲಿ ಇಟ್ಟ ಕಣ್ರಿ 

ಮೈಯೆಲ್ಲ ಜುಂ ಅಂತು 

ಅವನೇ ನನ್ನ ಗೆಣೆಕಾರ ।।೪।।


ಚಾವಡಿಗ್ ಬಂದು ನಿಂತ ಕಣ್ರಿ 

ತಾಳಿ ಚಿನ್ನ ತಂದ ಕಣ್ರಿ 

ನಂಗು ಅವನ್ಗು ಮದುವೆ ಕಣ್ರಿ 

ಅವನೇ ನನ್ನ ಯಜಮಾನ ।।೫।।





Sunday, October 2, 2022

Aame (ಆಮೆ)

Padya

Sahitya: Giriraja Hosamani


Aameyondu kereya dadadi

Maneyamaditu

Hakkiyante harabeku

Endu bayasitu

Hakki jotege sanga madi

Aase tilisitu

Hakki helidante aame

Kelaloppitu

Atta itta hakki eradu

Badige hididuvu

Aame adake jotu beele

hari hoduvu

Dariyalli idanu kandu

Janaru nakkaru

Mana hoyitendu aame

Manadi kudiyitu

Nakka janara bayyalendu

Bayi tereyitu

Melininda kelage biddu

Sattu hoyitu


ಪದ್ಯ 


ಆಮೆಯೊಂದು ಕೆರೆಯ ದಡದಿ 

ಮನೆಯ ಮಾಡಿತು 

ಹಕ್ಕಿಯಂತೆ ಹಾರಬೇಕು 

ಎಂದು ಬಯಸಿತು 

ಹಕ್ಕಿ ಜೊತೆಗೆ ಸಂಗಮಾಡಿ 

ಆಸೆ ತಿಳಿಸಿತು 

ಹಕ್ಕಿ ಹೇಳಿದಂತೆ ಆಮೆ 

ಕೇಳಲೊಪ್ಪಿತು 

ಅತ್ತ ಇತ್ತ ಹಕ್ಕಿ ಎರಡು 

ಬಡಿಗೆ ಹಿಡಿದುವು 

ಆಮೆ ಅದಕೆ ಜೋತು ಬೀಳೆ 

ಹಾರಿ ಹೋದುವು 

ದಾರಿಯಲ್ಲಿ ಇದನು ಕಂಡು 

ಜನರು ನಕ್ಕರು 

ಮಾನ ಹೋಯಿತೆಂದು ಆಮೆ 

ಮನದಿ ಕುದಿಯಿತು 

ನಕ್ಕ ಜನರ ಬಯ್ಯಲೆಂದು 

ಬಾಯಿ ತೆರೆಯಿತು 

ಮೇಲಿನಿಂದ ಕೆಳಗೆ ಬಿದ್ದು 

ಸತ್ತು ಹೋಯಿತು . 

       

Saturday, October 1, 2022

Yuga Yugadi Kaledaru (ಯುಗ ಯುಗಾದಿ ಕಳೆದರೂ )

  • Movie: Kulavadhu (1963)
  • Singer: S Janaki
  • Song link: Click Here


Yuga yugadi kaledaru

Yugadi marali barutide

Hosa varushakke hosa harushava

Hosatu hosatu tarutide ||yuga||


Honge hoova tongalali

Bhrungada sangeetakeli

Matte kela barutide

Bevinakahi balinalli

Hoovina nasugampu soosi

Jeeva kaleya tarutide ||yuga||


Varushakondu hosatu janma

Harushakondu hosatu neleyu

Akhila jeeva jatake

Onde ondu janmadalli

Onde balya, onde hareya

Namagadaste etako? ||yuga||


ಚಿತ್ರಗೀತೆ 


ಯುಗ ಯುಗಾದಿ ಕಳೆದರೂ 

ಯುಗಾದಿ ಮರಳಿ ಬರುತಿದೆ 

ಹೊಸ ವರುಷಕೆ ಹೊಸ ಹರುಷವ 

ಹೊಸತು ಹೊಸತು ತರುತಿದೆ ।।ಪ ।।


ಹೊಂಗೆ ಹೂವ ತೊಂಗಲಲಿ 

ಭೃಂಗದ ಸಂಗೀತ ಕೇಳಿ 

ಮತ್ತೆ ಕೇಳ ಬರುತಿದೆ 

ಬೇವಿನ ಕಹಿ ಬಾಳಿನಲ್ಲಿ 

ಹೂವಿನ ನಸುಗಂಪು ಸೂಸಿ 

ಜೀವ ಕಳೆಯ ತರುತಿದೆ ।।ಯುಗ ।।


ವರುಷಕೊಂದು ಹೊಸತು ಜನ್ಮ 

ಹರುಷಕೊಂದು ಹೊಸತು ನೆಲೆಯು 

ಅಖಿಲ ಜೀವ ಜಾತಕೆ 

ಒಂದೇ ಒಂದು ಜನ್ಮದಲ್ಲಿ 

ಒಂದೇ ಬಾಲ್ಯ ಒಂದೇ ಹರೆಯ 

ನಮಗದಷ್ಟೇ ಏತಕೋ ?।।ಯುಗ ।।